
ಲಂಡನ್: ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಇದೀಗ ಹಾಲಿವುಡ್'ಗೂ ಕಂಟಕವಾಗಿ ಪರಿಣಮಿಸಿದ್ದು, ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾರಲ್ಲಿ ವೈರಸ್ ಇರುವುದು ದೃಢಪಟ್ಟಿದೆ.
ಲೈಫ್ ಆಫ್ ಎನ್ವಿಸ್ ಪ್ರೆಸ್ಲೆ ಚಿತ್ರದ ಚಿತ್ರೀಕರಣ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿದ್ದ ಸಂದರ್ಭದಲ್ಲಿ ನನಗೆ ಹಾಗೂ ರೀಟಾ ಅವರಿಗೆ ಅತಿಯಾದ ಜ್ವರ ಬಂದಿತ್ತು. ಬಳಿಕ ಕೊರೋನಾ ವೈರಸ್ ಕುರಿತು ಪರೀಕ್ಷೆ ಮಾಡಿಸಿದಾಗ, ವರದಿಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ ಎಂದು ಹ್ಯಂಕ್ಸ್ ತಮ್ಮ ಇಸ್ಟಾಗ್ರಾಂನಲ್ಲಿ ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾವನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತ್ತು. ವಿಶ್ವದಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ವಾಷಿಂಗ್ಟನ್ ನಲ್ಲಿ ಸೋಂಕಿಗೆ 24 ಜನರು ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಒಟ್ಟು 29 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಪ್ರಾಧಿಕಾರ ದೃಢಪಡಿಸಿದೆ.
ಜನವರಿ 10 ರಂದು ಈ ಸೋಂಕು ವಾಷಿಂಗ್ಟನ್ ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸುಮಾರು 267 ಜನರಿಗೆ ಈ ಸೋಂಕು ತಗುಲಿದೆ ಎಂದು ಪ್ರಾಧಿಕಾರದ ಹೇಳಿಕೆ ತಿಳಿಸಿದೆ.
ಕಿಂಗ್ ಕೌಂಟಿಯಲ್ಲಿ ಈ ಸೋಂಕಿಗೆ 22 ಜನರು ಬಲಿಯಾಗಿದ್ದು 190 ಪ್ರಕರಣಗಳೂ ದೃಢಪಟ್ಟಿವೆ. ಅಮೆರಿಕದಲ್ಲಿ 900 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
Advertisement