ಕಾಶಿನಾಥ್ ರನ್ನು ನೆನಪಿಸಿಕೊಂಡ ಉಪೇಂದ್ರ,ತರುಣ್ ಸುಧೀರ್ 

ಇಂದು ಸ್ಯಾಂಡಲ್​​ವುಡ್​​ನ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ  69ನೇ ವರ್ಷದ ಹುಟ್ಟುಹಬ್ಬ.ಇದರ ನಿಮಿತ್ಯ ಅವರ ಶಿಷ್ಯರಾದ ನಟ ಉಪೇಂದ್ರ ಹಾಗೂ ನಿರ್ದೇಶಕ ತರುಣ್​ ಸುಧೀರ್​, ಕಾಶಿನಾಥ್​ ಅವರನ್ನು ಸ್ಮರಿಸಿಕೊಂಡಿದ್ದಾರೆ
ಕಾಶಿನಾಥ್, ಉಪೇಂದ್ರ, ತರುಣ್ ಸುಧೀರ್
ಕಾಶಿನಾಥ್, ಉಪೇಂದ್ರ, ತರುಣ್ ಸುಧೀರ್
Updated on

ಬೆಂಗಳೂರು: ಇಂದು ಸ್ಯಾಂಡಲ್​​ವುಡ್​​ನ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ  69ನೇ ವರ್ಷದ ಹುಟ್ಟುಹಬ್ಬ.ಇದರ ನಿಮಿತ್ಯ ಅವರ ಶಿಷ್ಯರಾದ ನಟ ಉಪೇಂದ್ರ ಹಾಗೂ ನಿರ್ದೇಶಕ ತರುಣ್​ ಸುಧೀರ್​, ಕಾಶಿನಾಥ್​ ಅವರನ್ನು ಸ್ಮರಿಸಿಕೊಂಡಿದ್ದಾರೆ. 
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾಶಿನಾಥ್ ಅವರು 2018ರಲ್ಲಿ ಕೊನೆಯುಸಿರೆಳೆದರು. 

 ನಟ ಉಪೇಂದ್ರ ಅವರು ಕಾಶೀನಾಥ್​​ ಅವರನ್ನು ಸ್ಮರಿಸುವ ಮೂಲಕ "ಅರಿವು ತೋರಿಸಿಕೊಟ್ಟ ಗುರುವಿಗೆ ಹುಟ್ಟುಹಬ್ಬದ ಶುಭಾಶಯ" ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು,‌ನಿರ್ದೇಶಕ ತರುಣ್ ಸುಧೀರ್ ಅವರು ಚೌಕ‌ ಚಿತ್ರದ ಅವರೊಂದಿಗಿನ ಫೋಟೋ ಒಂದವನ್ನು ಶೇರ್ ಮಾಡಿ, ನಿಮ್ಮ ಜೊತೆ ಕೆಲಸ ಮಾಡಿದ್ದು ನನ್ನ ಜೀವನದ ಅತ್ಯುತ್ತಮ ಘಳಿಗೆ. ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com