ರಾಕಿ ಬಾಯ್ ಯಶ್ ಚಿತ್ರದ ಅಕ್ರಮ ಪ್ರಸಾರ: ತೆಲುಗು ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾದ ಕೆಜಿಎಫ್ ಟೀಂ

ರಾಕಿ ಬಾಯ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್ ಚಾಪ್ಟರ್ 1 ಅದ್ಭುತ ಯಶಸ್ಸು ಗಳಿಸಿದ್ದು ಎಲ್ಲರಿಗೆ ಗೊತ್ತಿರುವ ಸಂಗತಿ. ಇದೀಗ ಚಾಪ್ಟರ್ 2 ಸಹ ಬಿಡುಗಡೆಗಾಗಿ ದಿನಗಣನೆ ಪ್ರಾರಂಭಗೊಂಡಿದೆ.
ರಾಕಿ ಬಾಯ್ ಯಶ್
ರಾಕಿ ಬಾಯ್ ಯಶ್
Updated on

ರಾಕಿ ಬಾಯ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರ ಕೆಜಿಎಫ್ ಚಾಪ್ಟರ್ 1 ಅದ್ಭುತ ಯಶಸ್ಸು ಗಳಿಸಿದ್ದು ಎಲ್ಲರಿಗೆ ಗೊತ್ತಿರುವ ಸಂಗತಿ. ಇದೀಗ ಚಾಪ್ಟರ್ 2 ಸಹ ಬಿಡುಗಡೆಗಾಗಿ ದಿನಗಣನೆ ಪ್ರಾರಂಭಗೊಂಡಿದೆ. ಈ ನಡುವೆ ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದ ತೆಲುಗು ಟಿವಿ ಚಾನಲ್ ಒಂದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

ತೆಲುಗು ವಾಹಿನಿ ಎವರಿ (Every) ಎಂಬ ಸ್ಥಳೀಯ ಚಾನಲ್ ಒಂದರಲ್ಲಿ ಕೆಜಿಎಫ್ ಚಾಪ್ಟರ್ 1 ರ ತೆಲುಗು ಅವತರಣಿಕೆಯನ್ನು ಅಕ್ರಮವಾಗಿ ಪ್ರಸಾರ ಮಾಡಲಾಗಿದೆ. 

ಇದೀಗ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಚಿತ್ರ ವಿತರಕ ಕಾರ್ತಿಕ್ ಗೌಡ ತಮ್ಮ ಟ್ವಿಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ."ಕೆಜಿಎಫ್ ಚಿತ್ರದ ಸ್ಯಾಟಲೈಟ್ ಹಕ್ಕುಗಳ ಬಗೆಗಿನ ಮಾತುಕತೆ ಅಂತಿಮ ಹಂತದಲ್ಲಿರುವ ವೇಳೆ ಈ ಘಟನೆ ನಡೆದಿದೆ. ನಾವು ಈ ಕುರಿತು ಕಾನೂನು ಹೋರಾಟ ನಡೆಸಲಿದ್ದೇವೆ. ನಮ್ಮ ಬಳಿ ಟಿವಿ ಚಾನಲ್ ಚಿತ್ರ ಪ್ರಸಾರ ಮಾಡಿದ್ದರ ಬಗೆಗಿನ ಸ್ಕ್ರೀನ್ ಶಾಟ್, ವಿಡಿಯೋ ಸಾಕ್ಷಿಗಳಿದೆ" ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ರಾಕಿ ಬಾಯ್ ಅಭಿನಯದ ಕೆಜಿಎಫ್ 2018 ಡಿಸೆಂಬರ್ 21ಕ್ಕೆ ಬಿಡುಗಡೆಯಾಗಿ ದೊಡ್ದ ಯಶಸ್ಸು ಗಳಿಸಿತ್ತು. ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ಣಾಗ್, ಮಾಳವಿಕಾ ಸೇರಿ ಅನೇಕರು ಅಭಿನಯಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com