ಪುನೀತ್ ರಾಜ್ ಕುಮಾರ್
ಸಿನಿಮಾ ಸುದ್ದಿ
ಪುನೀತ್ ವರ್ಕೌಟ್ ವಿಡಿಯೋ ವೈರಲ್!
ಕೋವಿಡ್-19 ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಅವರ ವರ್ಕೌಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಬೆಂಗಳೂರು: ಕೋವಿಡ್-19 ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಅವರ ವರ್ಕೌಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಓವರ್ ಹೆಡ್ ಬರ್ಪಿ, ಸೂಪರ್ ಮ್ಯಾನ್ ಬರ್ಪಿ, ಜಂಪಿಂಗ್ ಟೋ ಟಚಿಂಗ್ ಬರ್ಪಿಯ ಕರಾತಮತ್ತುಗಳನ್ನು ತೋರಿಸುವ 22 ಸೆಕೆಂಡುಗಳ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ (ಇನ್‌ಸ್ಟಾಗ್ರಾಂ) ಪುನೀತ್ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಎರಡು ಕೈ ಮತ್ತು ಕಾಲುಗಳನ್ನು ಒಂದೇ ಸಲಕ್ಕೆ ಊರಿ ಸೂಪರ್ ಮ್ಯಾನ್ ರೀತಿ ಜಂಪ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಮುದ ನೀಡಿದೆ.

