ಬೆಂಗಳೂರು: ಇದೇ ಮೊದಲ ಬಾರಿಗೆ ಚಲನಚಿತ್ರ ನಟರು ಬಹುಭಾಷೆಯ "ವೈಲ್ಡ್ ಕರ್ನಾಟಕ" ಕಾರ್ಯಕ್ರಮವೊಂದಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ.
ವನ್ಯಜೀವಿಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ರಾಜ್ಯ ಅರಣ್ಯ ಇಲಾಖೆಯಡಿಯಲ್ಲಿ ವನ್ಯ ಜೀವಿಗಳ ಕಥೆ ಮೂಡಿಬರಲಿದ್ದು, ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್ನಲ್ಲಿ ಜೂನ್ 5 ರಂದು ರಾತ್ರಿ 8 ಗಂಟೆಗೆ ತೆರೆಗೆ ಬರಲಿದೆ.
ಡಿಸ್ಕವರಿ ಚಾನಲ್, ಇದೇ ಮೊದಲ ಬಾರಿಗೆ ಚಲನಚಿತ್ರ ನಟರನ್ನು ಬಳಸಿಕೊಂಡು ವೈಲ್ಡ್ ಕರ್ನಾಟಕ ಎಂಬ ಕಾರ್ಯಕ್ರಮವನ್ನು ನರೇಟ್ ಮಾಡುತ್ತಿದೆ ಎಂದು ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ.
ಕನ್ನಡದ ನಿರ್ದೇಶಕ ರಿಷಬ್ ಶೆಟ್ಟಿ, ತೆಲುಗು ಮತ್ತು ತಮಿಳಿನಲ್ಲಿ ಪ್ರಕಾಶ್ ರೈ, ಹಿಂದಿಯಲ್ಲಿ ರಾಜ್ ಕುಮಾರ್ ರಾವ್ ಮತ್ತು ಇಂಗ್ಲೀಷ್ ನಲ್ಲಿ ಸರ್ ಡೇವಿಡ್ ಅಟಿನ್ ಬರೋ ಧ್ವನಿ ನೀಡಿದ್ದಾರೆ.
ಕರ್ನಾಟಕದ ಕಾಡಿನಲ್ಲಿ ಅಪರೂಪದ ವನ್ಯಜೀವಿಗಳ ಚಲನವಲನ ಮತ್ತು ಜೀವನ ಶೈಲಿಯನ್ನು 4 ಕೆ ಉಲ್ಟ್ರಾ ಎಚ್ ಡಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. 20ಕ್ಕೂ ಅಧಿಕ ಛಾಯಾಗ್ರಾಹಕರು ಸತತ ನಾಲ್ಕು ವರ್ಷ ಶ್ರಮ ವಹಿಸಿ ಇದನ್ನು ಚಿತ್ರೀಕರಿಸಿದ್ದಾರೆ.
Advertisement