ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನಟ, ನಟಿಯರಿಂದ ದೀಪಾವಳಿ ಶುಭಾಶಯ

ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನಟ, ನಟಿಯರು ನಾಡಿನ ಜನತೆಗೆ, ಅಭಿಮಾನಿ, ಹಿತೈಷಿಗಳಿಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ್ದಾರೆ. 
ನಟ ದರ್ಶನ್
ನಟ ದರ್ಶನ್

ಬೆಂಗಳೂರು: ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನಟ, ನಟಿಯರು ನಾಡಿನ ಜನತೆಗೆ, ಅಭಿಮಾನಿ, ಹಿತೈಷಿಗಳಿಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ್ದಾರೆ. 

ನಟ ದರ್ಶನ್, “ಬದುಕಿನ ಅಂಧಕಾರಗಳೆಲ್ಲವೂ ದೂರವಾಗಿ ಎಲ್ಲರ ಮನೆ ಮನಗಳಲ್ಲಿ ನೆಮ್ಮದಿ, ಖುಷಿ ಸಡಗರ ತುಂಬಿ ತುಳುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ, ತೂಗುದೀಪ ಪರಿವಾರದಿಂದ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. 

ನಟ ಉಪೇಂದ್ರ, ವಿಚಾರದ ದೀಪ ನಮ್ಮಲ್ಲೇ ಬೆಳಗಿಸಿಕೊಳ್ಳುವುದರ ಜೊತೆ ಹಬ್ಬ ಆಚರಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಹೇಳುತ್ತಲೇ, ಜನರಿಂದ ಒಂದು ಗುಂಪು ನಾಯಕರಾಗಿ ಅಧಿಕಾರ ಚಲಾಯಿಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ ? ಜನರೇ ತಂತ್ರಜ್ಞಾನದಿಂದ ಸರಳವಾಗಿ ನಾಯಕರಾಗಿ ಪಾಲ್ಗೊಂಡು ಅಧಿಕಾರ ನಡೆಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ ? ಯಾವುದು ಸರಿ ? ಎಂದು ಪ್ರಶ್ನಿಸಿದ್ದಾರೆ.

ಕಿಚ್ಚ ಸುದೀಪ್, ಧ್ರುವ ಸರ್ಜಾ, ಸತೀಶ್ ನೀನಾಸಂ ಸೇರಿದಂತೆ ಹಲವರು ನಾಡಿನ ಜನತೆಗೆ ಹಾಗೂ ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com