ಆ್ಯಕ್ಟ್-1978 ರಲ್ಲಿ ಗಿಮಿಕ್ಸ್ ಇಲ್ಲ; ನನ್ನ ಪ್ರಾಮಾಣಿಕತೆ ಅಡಗಿದೆ: ನಿರ್ದೇಶಕ ಮಂಸೋರೆ

ಕೊರೋನಾ ಪರಿಣಾಮ ಪರಭಾಷೆ ಚಿತ್ರರಂಗಗಳೂ ಹೊಸ ಸಿನಿಮಾಮಗಳನ್ನು ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಈ ಸಮಯದಲ್ಲಿ ಕನ್ನಡ ಸಿನಿಮಾ ಆ್ಯಕ್ಟ್ 1978 ನ.20 ರಂದು ಬಿಡುಗಡೆಯಾಗಲು ಸಜ್ಜುಗೊಂಡಿದೆ. 
ಆ್ಯಕ್ಟ್ 1978
ಆ್ಯಕ್ಟ್ 1978
Updated on

ಕೊರೋನಾ ಪರಿಣಾಮ ಪರಭಾಷೆ ಚಿತ್ರರಂಗಗಳೂ ಹೊಸ ಸಿನಿಮಾಮಗಳನ್ನು ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಈ ಸಮಯದಲ್ಲಿ ಕನ್ನಡ ಸಿನಿಮಾ ಆ್ಯಕ್ಟ್ 1978 ನ.20 ರಂದು ಬಿಡುಗಡೆಯಾಗಲು ಸಜ್ಜುಗೊಂಡಿದೆ. 

ಈಗಾಗಲೇ ಪೋಸ್ಟರ್ ಗಳಿಂದಲೇ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಆಕ್ಟ್ 1978 ಸಿನಿಮಾ ಇದೇ ಶುಕ್ರವಾರ ಬಿಡುಗಡೆಗೊಳ್ಳುತ್ತಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿರುವ ನಿರ್ದೇಶಕ ಮಂಸೋರೆಯವರು ಚಿತ್ರದ ಕಥಾವಸ್ತು ಹಂಚಿಕೊಂಡಿದ್ದಾರೆ. 

ಚಿತ್ರದಲ್ಲಿ ತಮ್ಮ ಜೀವನದಲ್ಲಾದೆ ಕೆಲ ಅನುಭವಗಳನ್ನು ಮಂಸೋರೆಯವರು ಹಂಚಿಕೊಂಡಿದ್ದಾರೆ. ನನ್ನ ತಂದೆ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವೆಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರು. ತಂದೆ ನಿಧನದ ಬಳಿಕ ಬರುತ್ತಿದ್ದ ಪಿಂಚಣಿ ಹಣವನ್ನು ತೆಗೆದುಕೊಳ್ಳಲು ಸರ್ಕಾರಿ ಕಚೇರಿಗೆ ತೆರಳಿದಾಗ ಅಲ್ಲಿನ ಆಗುಹೋಗುಗಳು ಹಾಗೂ ಕಠಿಣ ಪರಿಸ್ಥಿತಿಗಳು ನನ್ನ ಅನುಭವಕ್ಕೆ ಸಿಕ್ಕಿತ್ತು. ಅಧಿಕಾರಿಗಳು ಕೇಸ್'ಗಳನ್ನು ನಿಭಾಯಿಸುವ ರೀತಿಯನ್ನು ನೋಡಿದರೆ ಭಯವಾಗುತ್ತದೆ. ಮೊದಲನೇ ಮಹಡಿಯಲ್ಲಿರುವ ಮತ್ತೊಬ್ಬ ಸಹೋದ್ಯೋಗಿ ತೆಗೆದುಕೊಂಡ ಕಡತವನ್ನು ಮೂರನೇ ಮಹಡಿಯಲ್ಲಿರುವ ಮತ್ತೊಬ್ಬ ಸಿಬ್ಬಂದಿ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ನಾನು ಧ್ವನಿ ಎತ್ತಿದ್ದೆ, ಮಾಧ್ಯಮಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದೆ. ಬಳಿಕವಷ್ಟೇ ಪಿಂಚಣಿ ಹಣದ ನೀಡುವ ಪ್ರಕ್ರಿಯೆ ಮುಂದಕ್ಕೆ ಸಾಗಿತ್ತು ಎಂದು ಮಂಸೋರೆಯವರು ಹೇಳಿದ್ದಾರೆ. 

37 ವರ್ಷ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದ ನನ್ನ ತಂದೆಯ ಕಡತವನ್ನು ಮೂಲೆಗೆ ಎಸೆಯಲಾಗಿತ್ತು. ನನ್ನಂತೆಯೇ ಸಾಕಷ್ಟು ಜನರು ಇಂತಹ ಪರಿಸ್ಧಿತಿ ಎದುರಿಸುತ್ತಿದ್ದಾರೆ. ನಾನು ಇಂತಹ ಪರಿಸ್ಥಿತಿ ಎದುರಿಸಿರುವಾಗ ಸಾಮಾನ್ಯ ವ್ಯಕ್ತಿಯ ಪರಿಸ್ಥಿತಿ ಎನಾಗಬೇಕೆಂಬ ಪ್ರಶ್ನೆ ನನ್ನಲ್ಲಿಯೇ ಹುಟ್ಟಿತ್ತು. ಈ ಎಲ್ಲಾ ಆಲೋಚನೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ, ಸಾಮಾನ್ಯ ಮನುಷ್ಯನ ಸಮಸ್ಯೆಗಳನ್ನು ತೆರೆಯ ಮೇಲೆ ಬರಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ. 

ಇದು ನನ್ನ ಮೊದಲ ಪ್ರಯತ್ನವಾಗಿದ್ದು, ಸಿನಿಮಾ ನಿರ್ದೇಶನ ಮಾಡುವುದಕ್ಕೂ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕಿತ್ತು. ಚಿತ್ರದಲ್ಲಿ 48 ಪ್ರಮುಖ ನಟರು ನಟಿಸಿದ್ದಾರೆ. ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ರವಿ ಭಟ್, ಶ್ರುತಿ , ಸಂಚಾರಿವಿಜಯ್ ಸೇರಿದಂತೆ ದೊಡ್ಡ ಕಲಾವಿದರ ದಂಡು ‘ಆ್ಯಕ್ಟ್ 1978’ ಚಿತ್ರ ತಂಡದಲ್ಲಿದೆ.

ಉತ್ತಮ ವಿಚಾರವನ್ನೊಳಗೊಂಡಿರುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಇದೇ ಪ್ರೇಕ್ಷಕರ ಗಮನವನ್ನು ಸೆಳೆದು ಚಿತ್ರವನ್ನು ನೋಡುವಂತೆ ಮಾಡುತ್ತದೆ. ಇದು ನನ್ನ ಮೂರನೇ ಚಿತ್ರವಾಗಿದೆ. ಸಾಮಾನ್ಯ ವ್ಯಕ್ತಿಯ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ಯಾವುದೇ ಗಿಮಿಕ್ಸ್ ಗಳನ್ನೂ ಬಳಕೆ ಮಾಡಿಲ್ಲ. ಕೊರೋನಾದಂತಹ ಸಾಂಕ್ರಾಮಿಕ ಸಂದರ್ಭದಲ್ಲಿಯೂ ಚಿತ್ರ ಬಿಡುಗಡೆ ಮಾಡುವ ಧೈರ್ಯ ಮಾಡಿದ್ದೇವೆ. ಎಲ್ಲಾ ವಿಭಾಗದಲ್ಲಿಯೂ ನನಗೆ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ. ಚಿತ್ರದಲ್ಲಿ ಒಂದು ಹಾಡಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದು ಮಂಸೋರೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com