ತಿರುವನಂತಪುರ: ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.ಈ ಕುರಿತು ಟ್ವೀಟರ್ ನಲ್ಲಿ ಸ್ಪಷ್ಪಪಡಿಸಿರುವ ಸುಕುಮಾರನ್, ಮಲಯಾಳಂ ಚಿತ್ರ ಜನ ಗಣ ಮನದ ಚಿತ್ರದ ಸೆಟ್ ನಲ್ಲಿ ಅಕ್ಟೋಬರ್ ನಲ್ಲಿ ತೊಡಗಿಸಿಕೊಂಡಿದ್ದೇ. ಚಿತ್ರೀಕರಣದ ಕೊನೆಯ ದಿನ ನಡೆಸಿದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ದುರಾದೃಷ್ಟವಶಾತ್, ಕೊರೋನಾ ಪಾಸಿಟಿವ್ ಬಂದಿದ್ದು, ಐಸೋಲೇಶನ್ ನಲ್ಲಿದ್ದೇನೆ, ರೋಗ ಲಕ್ಷಣಗಳಿಲ್ಲದೆ ಚೆನ್ನಾಗಿದ್ದೇನೆ. ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆ ಮಾಡಿಸಿ ಐಸೋಲೇಶನ್ ನಲ್ಲಿರುವಂತೆ ಸಲಹೆ ನೀಡಿರುವ ಸುಕುಮಾರನ್ಸ ಶೀಘ್ರದಲ್ಲಿಯೇ ಗುಣಮುಖರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
Advertisement