ಸ್ಯಾಂಡಲ್ ವುಡ್ ಡ್ರಗ್ಸ್  ದಂಧೆ: ಮತ್ತೋರ್ವ ಆರೋಪಿ ಸಿಸಿಬಿ ವಶಕ್ಕೆ, ವಿಚಾರಣೆಗೆ ಸಹಕರಿಸದ ರಾಗಿಣಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ರಂಕಾ ಬಂಧಿತ ಆರೋಪಿ. 
ನಟಿ ರಾಗಿಣಿ
ನಟಿ ರಾಗಿಣಿ
Updated on

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ರಂಕಾ ಬಂಧಿತ ಆರೋಪಿ. 

ಈತ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ದೊಡ್ಡ ದೊಡ್ಡ ಪಾರ್ಟಿಗಳು ಹಾಗೂ ನಟಿ ರಾಗಿಣಿ ದ್ವಿವೇದಿ ಆಪ್ತ ಬಿ. ಕೆ. ರವಿಶಂಕರ್ ಇನ್ನಿತರ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರಶಾಂತ್ ರಂಕಾನ ಮುಂದಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಇನ್ನಿತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.ಮಂಗಳೂರು ಮೂಲಕ ಮಹಿಳಾ ಡ್ರಗ್ಸ್ ಪೆಡ್ಲರ್ ಪೃಥ್ವಿ ಶೆಟ್ಟಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ರಾತ್ರಿ 11-30 ಆಕೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರಲಿದ್ದಾರೆ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.

ಪೃಥ್ವಿ ಹಾಗೂ ರವಿಶಂಕರ್ ಅವರನ್ನು ಒಟ್ಟಿಗೆ ವಿಚಾರಣೆ ನಡೆಸುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ. ಶನಿವಾರ ಸಂಜೆ ಬಂಧಿಸಲಾಗಿರುವ ಆಫ್ರಿಕಾ ಪ್ರಜೆ ಲೊಮ್ ಪೆಪ್ಪರ್ ಸಾಂಬಾ ಮಾತೃ ಭಾಷೆ ಹೊರತುಪಡಿಸಿ ಇಂಗ್ಲೀಷ್ ಇನ್ನಿತರ ಭಾಷೆಗಳು ಬರುತ್ತಿಲ್ಲ ಎಂದು ನಾಟಕವಾಡುತ್ತಿದ್ದಾನೆ ಎನ್ನಲಾಗಿದೆ.

ರಾಜ್ಯ ಮಹಿಳಾ ಕಾರಾಗೃಹದಲ್ಲಿ ರಾಗಿಣಿಯ ವಿಚಾರಣೆ ಮುಂದುವರೆದಿದ್ದು, ವಿಚಾರಣೆಗೆ ಆಕೆ ಸಹಕರಿಸುತ್ತಿಲ್ಲ, ಅಲ್ಲಿ ನೀಡಲಾಗುತ್ತಿರುವ ಊಟ, ಸೊಳ್ಳೆ ಮತ್ತಿತರ ಮೂಲಸೌಕರ್ಯಗಳು ಸರಿಯಾಗಿಲ್ಲ, ಆರೋಗ್ಯ ಕೂಡಾ ಹದಗೆಟ್ಟಿರುವುದಾಗಿ ರಾಗಿಣಿ ಸಮಸ್ಯೆ ಹೇಳುತ್ತಿದ್ದು, ಅಧಿಕಾರಿಗಳು ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಒಂದು ವೇಳೆ ಆಕೆ ಸಹಕರಿಸಿದಿದ್ದರೆ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಣೆಗೆ ನ್ಯಾಯಾಲಯವನ್ನು ಕೋರಲು ಅಧಿಕಾರಿಗಳು ಬಯಸಿದ್ದಾರೆ.

ಈ ಮಧ್ಯೆ ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ಬಳಿಗೆ ಆಗಮಿಸಿದ ವ್ಯಕ್ತಿಯೊಬ್ಬ ತನನ್ನು ಅರವಿಂದ್ ಎಂದು ಪರಿಚಯಿಸಿಕೊಂಡಿದ್ದು, ಮಾದಕ ಜಾಲ ಪ್ರಕರಣದಲ್ಲಿ 13ನೇ ಆರೋಪಿ ಎಂದು  ಹೇಳಿಕೊಂಡಿದ್ದಾನೆ.

ಮಾನಸಿಕ ಅಸ್ವಸ್ಥ ಅಥವಾ ಡ್ರಗ್ಸ್ ಪ್ರಭಾವದಿಂದ ಆತ ಈ ರೀತಿಯಲ್ಲಿ ನಡೆದುಕೊಂಡಿರಬಹುದೆಂದು ಸಿಸಿಬಿ ಅಧಿಕಾರಿಗಳು ಶಂಕಿಸಿದ್ದಾರೆ. ಆದಾಗ್ಯೂ, ಆತನ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com