

ನಟ ದಿಗಂತ್ ಈ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಪತ್ನಿ , ನಟಿ ಐಂದ್ರಿತಾ ರೇ ಅವರೊಂದಿಗೆ ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರಂತೆ. ಅವರು ಸಾಹಸ ಚಟುವಟಿಕೆಗಳು, ಸೈಕಲ್ ಸವಾರಿ, ರಾಕ್ ಕ್ಲೈಂಬಿಂಗ್, ವ್ಯಾಯಾಮ ಸೇರಿ ಅನೇಕ ಚಟುವಟಿಕೆ ನಡೆಸಿದ್ದಾರೆ.
"ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ನನ್ನ ಜೀವನದಲ್ಲಿ ನಾನು ಅನುಭವಿಸಿದ ದೀರ್ಘಾವಧಿಯ ವಿಶ್ರಾಂತಿಯ ಕಾಲವಿದು. " ಎಂದು ದಿಗಂತ್ ಹೇಳುತ್ತಾರೆ, ಅವರು ಜನರೊಂದಿಗೆ ಸಂವಹನ ಹಾಗೂ ಸೆಟ್ಟಿನ ಅನುಭವಗಳಿಂದ ವಂಚಿತರಾದರೆಂದು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಇದು ಕೆಲಸವನ್ನು ಪ್ರಾರಂಭಿಸುವ ಸಮಯ, ಮತ್ತು ನಾನು ಈಗ ಶೂಟಿಂಗ್‌ಗೆ ಮರಳಲು ಕಾಯುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ
ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಬಿಡುಗಡೆಯ ನಿರೀಕ್ಷೆಯಲ್ಲಿರುವ ಈ ನಟ, ಇದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ನಾಗರಾಜ್ ಬೇತೂರ್ ಅವರ "ಹುಟ್ಟುಹಬ್ಬದ ಶುಬಾಶಯಗಳು" ಚಿತ್ರದ ಶೂಟಿಂಗ್ ಸಹ ಪೂರ್ಣವಾಗಿದೆ. ಬೆರಳೆಣಿಕೆಯಷ್ಟು ಯೋಜನೆಗಳನ್ನು ಹೊಂದಿರುವ ದಿಗಂತ್, ಸೆಪ್ಟೆಂಬರ್ 18 ರಂದು ನಿರ್ದೇಶಕ ರಾಘವೇಂದ್ರ ನಾಯಕ್ ಅವರ ಮಾರಿಗೋಲ್ಡ್ ಚಿತ್ರದ ಸೆಟ್ ಗೆ ಮರಳಲಿದ್ದಾರೆ.
ಮಾರಿಗೋಲ್ಡ್ ನಲ್ಲಿ ಸಂಗೀತ ಶೃಂಗೇರಿ ನಾಯಕಿಯಾಗಿದ್ದು . "ನಾನು ತಂಡದೊಂದಿಗೆ ಶೂಟಿಂಗ್ ನಡೆಸಿದ್ದ ಕೊನೆಯ ದಿನ ಮಾರ್ಚ್ 18. . ನಾವು ಎರಡನೇ ಶೆಡ್ಯೂಲ್ ಅನ್ನು ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭಿಸಬೇಕಿತ್ತು, ಆದರೆ ಲಾಕ್‌ಡೌನ್ ಕಾರಣ ಅದು ಮುಂದೂಡಿಕೆಯಾಗಿತ್ತು." ಈ ಚಿತ್ರಕ್ಕಾಗಿನ ಅವರ ಪಾಲಿನ ಶೂಟಿಂಗ್ ಇನ್ನೂ 18 ದಿನಗಳ ಅವಧಿಯದ್ದಾಗಿದೆ ಎಂದು ದಿಗಂತ್ ಮಾಹಿತಿ ನೀಡಿದ್ದಾರೆ.
ಮಾರಿಗೋಲ್ಡ್ ನಂತರದ ಯೋಜನೆ ಬಗ್ಗೆ ಮಾತನಾಡಿದ ನಟ ವಿನಾಯಕ್ ಕೊಡ್ಸರಾ ನಿರ್ದೇಶನದ ಚಿತ್ರದಲ್ಲಿ ತಾವು ನಟಿಸುತ್ತಿದ್ದು ಇದರಲ್ಲಿ ರಂಜನಿ ರಾಘವನ್, ಐಂದ್ರಿತ್ರಾ ರೇ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ."ಈಗಿನಂತೆ, ತಂಡವುದಯವಿಟ್ಟು ಕ್ಷಮಿಸಿ ಎಂಬ ಟೈಟಲ್ ಇಟ್ಟುಕೊಂಡಿದೆ. ಆದರೆ ಇದೇ ಅಂತಿಮವಲ್ಲ. ಟೈಟಲ್ ಬದಲಾವಣೆ ಆಗಬಹುದು. ಅದು ಖಚಿತವಾಗಿಲ್ಲ" ನಾಯಕಿಯರೊಂದಿಗಿನ ಫೋಟೋಶೂಟ್ ಮುಗಿಸಿದ್ದ ನಟ ಹೇಳಿದ್ದಾರೆ. ಇದಲ್ಲದೆ ಯೋಗರಾಜ್ ಭಟ್ ಅವರ "ಗಾಳಿಪಟ 2" ಚಿತ್ರೀಕರಣ ಪುನಾರಂಭದ ದಿನಾಂಕಕ್ಕಾಗಿ ದಿಗಂತ್ ನಿರೀಕ್ಷೆಯಲ್ಲಿದ್ದಾರೆ. "ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವು ಮುಂದಿನ ವರ್ಷವಷ್ಟೇ ಪ್ರಾರಂಭವಾಗುವುದರಿಂದ ತಂಡವು ಅದಕ್ಕೂ ಮೊದಲು ಶೂಟಿಂಗ್ ಜಾಗವನ್ನು ಅಂತಿಮಗೊಳಿಸಲು ಬಯಸುತ್ತದೆ
ಈ ಮೂರು ಯೋಜನೆಗಳ ಹೊರತಾಗಿ, ಅವರು ತಮ್ಮ ಲಿಸ್ಟ್ ನಲ್ಲಿ ತೆಲುಗು ಚಿತ್ರ ಎವರು ವಿನ ಕನ್ನಡ ರಿಮೇಕ್ ಅನ್ನು ಸಹ ಹೊಂದಿದ್ದಾರೆ. "ಗಾಳಿಪಟ 2 ಚಿತ್ರೀಕರಣವನ್ನು ಮುಂದೂಡಲಾಗಿರುವುದರಿಂದ, ಈ ಯೋಜನೆಗಾಗಿ ನನ್ನ ದಿನಾಂಕಗಳನ್ನು ನಿಗದಿಪಡಿಸಿದ್ದೇನೆ" ಎಂದು ದಿಗಂತ್ ಹೇಳುತ್ತಾರೆ. ಪಿವಿಪಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ತೆಲುಗಿನಲ್ಲಿ ಎವರು ಚಿತ್ರವನ್ನು ವೆಂಕಟ್ ರಾಂಜಿ ನಿರ್ದೇಶಿಸಿದ್ದು, ದಿಗಂತ್ ಪ್ರಕಾರ ತೆಲುಗು ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕನ್ನಡದಲ್ಲಿಯೂ ಕೆಲಸ ಮಾಡಲಿದ್ದಾರೆ.