ಇಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ: ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರ ಕಬ್ಜ ಚಿತ್ರ ಅಂಡರ್ ವರ್ಲ್ಡ್ ಡಾನ್ ಗೆ ಸಂಬಂಧಿಸಿದ ಕಥೆಯಾಗಿದೆ. 
ಕಬ್ಜ ಚಿತ್ರದ ಪೋಸ್ಟರ್
ಕಬ್ಜ ಚಿತ್ರದ ಪೋಸ್ಟರ್
Updated on: 

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರ ಕಬ್ಜ ಚಿತ್ರ ಅಂಡರ್ ವರ್ಲ್ಡ್ ಡಾನ್ ಗೆ ಸಂಬಂಧಿಸಿದ ಕಥೆಯಾಗಿದೆ. 

ಪೋಸ್ಟರ್ ನಲ್ಲಿ ಉಪೇಂದ್ರ ಅವರು ಧೂಮಪಾನ ಮಾಡುತ್ತಿರುವುದನ್ನು ತೋರಿಸುತ್ತದೆ. ವಿಂಟೇಜ್ ರೈಲುಗಳು, ಕಾರು, ಟ್ರಕ್‌ಗಳಂತಹ ಹಿನ್ನೆಲೆ ವಸ್ತುಗಳು ಚಿತ್ರದ ರೆಟ್ರೊ ಭಾವನೆಯನ್ನು ಹೆಚ್ಚಿಸುತ್ತವೆ.1947ರಲ್ಲಿ ಬಳಸಿದ್ದ ಆಯುಧಗಳ ರೀತಿಯ ಭಾವನೆ ಪೋಸ್ಟರ್ ನಲ್ಲಿರುವ ಆಯುಧ ಕೊಡುತ್ತದೆ ಎನ್ನುತ್ತಾರೆ ನಿರ್ದೇಶಕ ಆರ್ ಚಂದ್ರು. 1940ರಿಂದ 1980ರ ಮಧ್ಯದ ಕಥೆಯನ್ನು ಕಬ್ಜ ಹೊಂದಿದೆ. 

ಎಂಟಿಬಿ ನಾಗರಾಜ್ ಅವರ ಶ್ರೀ ಸಿದ್ದೇಶ್ವರ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ನಲ್ಲಿ ಚಿತ್ರ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಿಗೆ ಸಹ ಚಿತ್ರ ಡಬ್ ಆಗಲಿದೆ. ಈ ತಿಂಗಳ ಕೊನೆಗೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. 

ಆರಂಭದ 20 ದಿನಗಳ ಶೂಟಿಂಗ್ ಜೈಲು ಸನ್ನಿವೇಶಗಳ ಮೂಲಕ ಕಬೀರ್ ದುಹಾನ್ ಸಿಂಗ್ ಮತ್ತು ಕೋಟ ಶ್ರೀನಿವಾಸ ಅವರೊಂದಿಗೆ ಉಪೇಂದ್ರ ಅವರ ಸನ್ನಿವೇಶದ ಶೂಟಿಂಗ್ ಇರುತ್ತದೆ.

ಐ ಲವ್ ಯು ಚಿತ್ರದ ನಂತರ ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ರವಿ ಬಸ್ರೂರು ಸಂಗೀತ, ಅರ್ಜುನ್ ಶೆಟ್ಟಿ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com