ಸ್ಯಾಂಡಲ್ ವುಡ್ ಕಾಲಿಟ್ಟ ನಟ ಅಲ್ಲು ಅರ್ಜುನ್ 

ನಟ ಅಲ್ಲು ಅರ್ಜುನ್‌ಗೆ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಇತರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಅವರ ಪಯಣ ಸ್ಯಾಂಡಲ್‌ವುಡ್‌ನತ್ತಲೂ ಮುಂದುವರಿದಿದೆ.

Published: 08th April 2020 02:26 PM  |   Last Updated: 08th April 2020 02:26 PM   |  A+A-


Allu arjun

ಅಲ್ಲು ಅರ್ಜುನ್

Posted By : Shilpa D
Source : Online Desk

ನಟ ಅಲ್ಲು ಅರ್ಜುನ್‌ಗೆ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಇತರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಅವರ ಪಯಣ ಸ್ಯಾಂಡಲ್‌ವುಡ್‌ನತ್ತಲೂ ಮುಂದುವರಿದಿದೆ.

ಏಪ್ರಿಲ್ 8 ಅಲ್ಲು ಅರ್ಜುನ್  ಜನ್ಮದಿನ. ಈ ಸಂದರ್ಭದಲ್ಲಿ ಅವರ ಮುಂದಿನ 'ಪುಷ್ಪ' ಸಿನಿಮಾದ ಫಸ್ಟ್‌ಲುಕ್ ಹಾಗೂ ಟೈಟಲ್‌ ಘೋಷಣೆ ಮಾಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾ ಕನ್ನಡದಲ್ಲೂ ಸಿದ್ಧಗೊಳ್ಳಲಿದೆ. 

ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಸಿನಿಮಾವೊಂದು ಕನ್ನಡದಲ್ಲೂ ತಯಾರಾಗುತ್ತಿದೆ. 'ಪುಷ್ಪ' ತೆಲುಗು, ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಏಕಕಾಲದಲ್ಲಿ ನಿರ್ಮಾಣಗೊಂಡು ತೆರೆಗೆ ಬರಲಿದೆ.

'ಪುಷ್ಪ'ದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅವರಿಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಐದು ಭಾಷೆಗಳಲ್ಲಿ ಬರಲಿದೆ. ಕಥಾನಾಯಕನ ಹೆಸರು 'ಪುಷ್ಪರಾಜ್‌' ಎಂದು ಇರುವುದರಿಂದ ಚಿತ್ರದ ಶೀರ್ಷಿಕೆ 'ಪುಷ್ಪ' ಎಂದಾಗಿದೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp