ಮುಂಬೈ: ಭೋಜ್ಪುರಿ ನಟಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ!

ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಬ್ಬ ನಟಿಯ ಮೃತದೇಹ ಪತ್ತೆಯಾಗಿದೆ. ಉತ್ತರ ಮುಂಬೈಯ ಉಪನಗರದ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗಿದ್ದ ಭೋಜ್ ಪುರಿ ನಟಿ ಅನುಪಮಾ ಪಾಠಕ್ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Published: 07th August 2020 10:32 AM  |   Last Updated: 07th August 2020 12:56 PM   |  A+A-


Anupama Pathak(File photo)

ಅನುಪಮಾ ಪಾಠಕ್ (ಸಂಗ್ರಹ ಚಿತ್ರ)

Posted By : Sumana Upadhyaya
Source : PTI

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಬ್ಬ ನಟಿಯ ಮೃತದೇಹ ಪತ್ತೆಯಾಗಿದೆ. ಉತ್ತರ ಮುಂಬೈಯ ಉಪನಗರದ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗಿದ್ದ ಭೋಜ್ ಪುರಿ ನಟಿ ಅನುಪಮಾ ಪಾಠಕ್ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬಿಹಾರದಿಂದ ಮುಂಬೈಗೆ ಸಿನೆಮಾ ಜಗತ್ತಿನಲ್ಲಿ ಅವಕಾಶ ಅರಸಿ ಬಂದಿದ್ದ ಅನುಪಮಾ ಪಾಠಕ್ ಹಲವು ಭೋಜ್ ಪುರಿ ಸಿನೆಮಾಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಭಾಗವಹಿಸಿದ್ದರು.

ತಾವು ಸಾಯುವುದಕ್ಕೆ ಒಂದು ದಿನ ಮೊದಲು ಅನುಪಮಾ ಫೇಸ್ ಬುಕ್ ನಲ್ಲಿ ವಿಡಿಯೊ ಶೇರ್ ಮಾಡಿ ತಾವು ಮೋಸ ಹೋಗಿದ್ದು ಯಾರನ್ನೂ ನಂಬದಿರುವ ಸ್ಥಿತಿಗೆ ಬಂದಿದ್ದೇನೆ. ಯಾರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅತ್ತುಕೊಂಡಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಯದಲ್ಲಿ ಇಡೀ ಚಿತ್ರರಂಗ ಆಘಾತದಲ್ಲಿರುವ ಸಂದರ್ಭದಲ್ಲಿ ಮತ್ತೊಬ್ಬ ಕಲಾವಿದೆಯ ಸಾವು ಸಂಭವಿಸಿರುವುದು ಕಲಾವಿದರ ಬದುಕಿನ ಬಗ್ಗೆ ಆತಂಕವನ್ನು ಹೆಚ್ಚಿಸುತ್ತಿದೆ. 

ಇದಕ್ಕೂ ಮುನ್ನ ಜೂನ್ 9ರಂದು ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್, ಮೇ 15ರಂದು ಕಿರುತೆರೆ ನಟ ಮನ್ಮೀತ್ ಗ್ರೆವಾಲ್, ಕಳೆದ ಬುಧವಾರ ಮತ್ತೊಬ್ಬ ಕಿರುತೆರೆ ನಟ ಸಮೀರ್ ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದರು. 

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp