ಬ್ಲಾಕ್ ಪ್ಯಾಂಥರ್' ಖ್ಯಾತಿಯ ಸ್ಟಾರ್ ನಟ ಚಾಡ್ವಿಕ್ ಬೋಸ್ ಮನ್ ನಿಧನ

ಬ್ಲಾಕ್ ಪ್ಯಾಂಥರ್ ಸಿನಿಮಾದ ಖ್ಯಾತಿಯ ಸ್ಟಾರ್ ನಟ ಚಾಡ್ವಿಕ್ ಬೋಸ್ಮನ್ (43) ಇಹಲೋಕ ತ್ಯಜಿಸಿದ್ದಾರೆ. 

Published: 29th August 2020 09:27 AM  |   Last Updated: 29th August 2020 09:27 AM   |  A+A-


'Black Panther' star Chadwick Boseman dies of cancer at 43

ಬ್ಲಾಕ್ ಪ್ಯಾಂಥರ್' ಖ್ಯಾತಿಯ ಸ್ಟಾರ್ ನಟ ಚಾಡ್ವಿಕ್ ಬೋಸ್ ಮನ್ ನಿಧನ

Posted By : Srinivas Rao BV
Source : Online Desk

ಬ್ಲಾಕ್ ಪ್ಯಾಂಥರ್ ಸಿನಿಮಾದ ಖ್ಯಾತಿಯ ಸ್ಟಾರ್ ನಟ ಚಾಡ್ವಿಕ್ ಬೋಸ್ಮನ್ (43) ಇಹಲೋಕ ತ್ಯಜಿಸಿದ್ದಾರೆ. 

ಬ್ಲ್ಯಾಕ್ ಪ್ಯಾಂಥರ್ ಗಿಂತಲೂ ಮುನ್ನ ಜಾಕಿ ರಾಬಿನ್ಸನ್ ಮತ್ತು ಜೇಮ್ಸ್ ಬ್ರೌನ್ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. 

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಾಡ್ವಿಕ್ ಬೋಸ್ಮನ್ ಲಾಸ್ ಏಂಜಲೀಸ್ ಏರಿಯಾದಲ್ಲಿದ್ದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 

ಬೋಸ್ಮನ್ ಗೆ 4 ವರ್ಷಗಳ ಹಿಂದೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನೈಜ ಹೋರಾಟಗಾರರಾಗಿದ್ದ ಚಾಡ್ವಿಕ್ ಅವೆಲ್ಲವನ್ನೂ 4 ವರ್ಷಗಳ ಕಾಲ ಸಹಿಸಿ ಕ್ಯಾನ್ಸರ್ ವಿರುದ್ಧ ಹೋರಾಡಿ, ತಮ್ಮ ನೆಚ್ಚಿನ ನಟನೆಯನ್ನು ಮುಂದುವರೆಸಿ, ಕೀಮೋಥೆರೆಪಿ ಹಾಗೂ ಹಲವು ಸರ್ಜರಿಗಳ ನಡುವೆಯೇ ಮಾರ್ಷಲ್, Da 5 ಬ್ಲಡ್ಸ್, ಆಗಸ್ಟ್ ವಿಲ್ಸನ್ಸ್ ಮಾ ರೈನಿಯ ಬ್ಲ್ಯಾಕ್ ಬಾಟಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಬೋಸ್ಮನ್ ತಮ್ಮ ಅನಾರೋಗ್ಯದ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. 

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp