'ಕೆಜಿಎಫ್' ತಯಾರಕರಿಂದ ಮತ್ತೊಂದು ಹೊಸ ಪ್ಯಾನ್-ಇಂಡಿಯಾ ಚಿತ್ರ!

ಈ ಹಿಂದೆ "ರಾಜಕುಮಾರ" "ಕೆಜಿಎಫ್ ಚಾಪ್ಟರ್ 1" ನಂತಹಾ ಅದ್ಭುತ ಚಲನಚಿತ್ರಗಳನ್ನು ನೀಡಿದ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಪ್ಯಾನ್-ಇಂಡಿಯಾ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಐದು ಭಾಷೆಗಳಲ್ಲಿ ನಿರ್ಮಿಸಲಾಗುವ ಈ ಚಿತ್ರ ದೇಶವ್ಯಾಪಿ ಲಕ್ಷಾಂತರ ಪ್ರೇಕ್ಷಕರನ್ನು ತಲುಪಲಿದೆ.
ಕೆಜಿಎಫ್ ಚಾಪ್ಟರ್ 1ರ ದೃಶ್ಯ
ಕೆಜಿಎಫ್ ಚಾಪ್ಟರ್ 1ರ ದೃಶ್ಯ

ಈ ಹಿಂದೆ "ರಾಜಕುಮಾರ" "ಕೆಜಿಎಫ್ ಚಾಪ್ಟರ್ 1" ನಂತಹಾ ಅದ್ಭುತ ಚಲನಚಿತ್ರಗಳನ್ನು ನೀಡಿದ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಪ್ಯಾನ್-ಇಂಡಿಯಾ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಐದು ಭಾಷೆಗಳಲ್ಲಿ ನಿರ್ಮಿಸಲಾಗುವ ಈ ಚಿತ್ರ ದೇಶವ್ಯಾಪಿ ಲಕ್ಷಾಂತರ ಪ್ರೇಕ್ಷಕರನ್ನು ತಲುಪಲಿದೆ. , ಚಿತ್ರದ ನಿರ್ಮಾಪಕ ವಿಜಯ್ ಕಿರಗಂಡೂರ್ ಈ ಬಗ್ಗೆ ಮಾತನಾಡಿ “ಕೆಜಿಎಫ್ ಚಾಪ್ಟರ್ 1 ರ ನಮ್ಮ ಪ್ರಯತ್ನಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ನಮ್ಮ ಇಡೀ ತಂಡವನ್ನು ಬಹಳವಾಗಿ ಪ್ರೋತ್ಸಾಹಿಸಿತು. ನಮ್ಮ ಹೊಸ ಸಾಹಸದ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಮತ್ತು ನೀವು ಇಲ್ಲಿಯವರೆಗೆ ನಮಗೆ ತೋರಿಸಿದ ಅದೇ ಪ್ರೀತಿಯಿಂದಮ್ಮನ್ನು ಸ್ವಾಗತಿಸುತ್ತೀರಿ ಎಂದು ಭಾವಿಸುತ್ತೇನೆ! ” ಎಂದರು. 

ಚಿತ್ರದ ಶೀರ್ಷಿಕೆ ಹಾಗೂ ಪಾತ್ರವರ್ಗದ ಬಗ್ಗೆ ಇನ್ನೂ ಯಾವ ಮಾಹಿತಿ ಬಹುರಂಗಪಡಿಸಲಿಲ್ಲವಾದರೂ ಡಿಸೆಂಬರ್ 2ರಂದು ಈ ಬಗ್ಗೆ ಸರ್ ಪ್ರೈಸ್ಜ್ ಪ್ರಕಟಣೆ ಹೊರಬೀಳಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಈ ಹಿಂದೆ ಸೂಪರ್-ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್ "ನಿನ್ನಿಂದಲೆ" ಹಾಗೂ ಯಶ್ ಅವರ "ಮಾಸ್ಟರ್ ಪೀಸ್" ನಿರ್ಮಿಸಿದ್ದ ಪ್ರೊಡಕ್ಷನ್ ಹೌಸ್, 2018 ರಲ್ಲಿ ದೇಶಾದ್ಯಂತ ಪ್ರಚಾರಕ್ಕೆ ಬಂದಿದೆ. ಈ ಸಂಸ್ಥೆಯ "ಕೆಜಿಎಫ್ ಚಾಪ್ಟರ್ 1"ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂಡೂರ್ ಮೂವರನ್ನು ಒಟ್ಟುಗೂಡಿಸಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ, ಈ ಚಿತ್ರವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ನ್ನಡ ಚಿತ್ರ ಎಂಬ ದಾಖಲೆಯನ್ನು ಮುರಿಯಿತು.

ಇದಲ್ಲದೆ ಇದೇ ನಿರ್ಮಾಣ ಸಂಸ್ಥೆ ಪುನೀತ್ ಅಭಿನಯದ "ಯುವರತ್ನ" ಹಾಗೂ "ಕೆಜಿಎಫ್ ಚಾಪ್ಟರ್ 2" ಚಿತ್ರವನ್ನೂ ನಿರ್ಮಾಣ ಮಾಡಿದ್ದು ಅದೀಗ ಅಂತಿಮ ಹಂತದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com