ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ: ತೆಲುಗು ನಟನಿಗೆ ಪುನೀತ್ ರಾಜಕುಮಾರ್ ಖಡಕ್ ಎಚ್ಚರಿಕೆ!

ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಜಯ್ ರಂಗರಾಜು-ಪುನೀತ್
ವಿಜಯ್ ರಂಗರಾಜು-ಪುನೀತ್

ಬೆಂಗಳೂರು: ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟ್ವೀಟ್ ಮೂಲಕ ತೆಲುಗು ನಟ ವಿಜಯ್ ರಂಗರಾಜುಗೆ ಪುನೀತ್ ರಾಜಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ನೀವು ಕ್ಷಮೆ ಕೇಳಿ ನಿಮ್ಮ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” ಎಂದು ಹೇಳಿದ್ದಾರೆ. 

ವಿಷ್ಣು ದಾದಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಜಯ್ ರಂಗರಾಜು ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ನಟ ಜಗ್ಗೇಶ್, ಪುನೀತ್ ರಾಜಕುಮಾರ್, ಅನಿರುದ್ಧ ಸೇರಿದಂತೆ ವಿಷ್ಣು ದಾದಾ ಅಭಿಮಾನಿಗಳು ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. 

ತೆಲುಗು ನಟ ವಿಜಯ್ ರಂಗರಾಜು ಎಂಬುವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇತ್ತು. ಒಂದು ಬಾರಿ ನಾನು ಅವರ ಕಾಲರ್ ಹಿಡಿದುಕೊಂಡೆ ಎಂದು ಹೇಳಿದ್ದು ಇದು ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿದೆ. 

ಸಿಂಹದ ಕಾಲರ್ ಹಿಡಿಯೋಕೆ ಸಾಧ್ಯಾನಾ?
ಅಪ್ಪಾವ್ರ ಕಾಲರ್ ಹಿಡಿದರು ಅಂತಾರೆ. ಸಹಾಸಸಿಂಹ ಡಾ. ವಿಷ್ಣುವರ್ಧನ್ ಅವರ ಕಾಲರ್ ಹಿಡಿಯೋದಾ? ಸಿಂಹದ ಕಾಲರ್ ಹಿಡಿಯೋಕೆ ಯಾರಿಂದ ಸಾಧ್ಯ? ಅವ್ರಿಗೆ ಅಷ್ಟು ಧೈರ್ಯ ಇದ್ದಿದ್ರೆ ಅವರು ಈ ವಿಷಯನಾ ಆಗಲೇ ಹೇಳಿಕೊಳ್ಳಬಹುದಿತ್ತು. ಅಪ್ಪಾವ್ರು ನಮ್ಮನ್ನು ಶಾರೀರಿಕವಾಗಿ ಬಿಟ್ಟು 11 ವರ್ಷ ಆದಮೇಲೆ. ಅಲ್ಲೆಲ್ಲೋ ಕೂತ್ಕೊಂಡು ಈ ರೀತಿ ಮಾತನಾಡ್ತಿದ್ದಾರೆ ಅಂದರೆ ಆ ವ್ಯಕ್ತಿಗೆ ಎಷ್ಟು ಧೈರ್ಯ ಇದೆ. ಸತ್ಯಕ್ಕೆ ನಿಜಾಂಶಕ್ಕೆ ಧೈರ್ಯ ಇರತ್ತೆ, ಶಕ್ತಿ ಇರತ್ತೆ. ಅವಾಗ ಹೇಳದೆ ಇದ್ರೆ ಅದು ಸತ್ಯ ಅಲ್ಲ. ಸುಮ್ನೆ ಮೀಸೆ ಬಿಟ್ಕೊಂಡ್ರೆ ಧೈರ್ಯಶಾಲಿ, ಶಕ್ತಿಶಾಲಿ ಅಲ್ಲ ಎಂದಿದ್ದಾರೆ.

ಯಾರ್ ಬಗ್ಗೆ ಮಾತನಾಡ್ತಿದ್ದಾರೆ ಅವ್ರು....
ಕುಟುಂಬದ ಸದಸ್ಯನಾಗಿ ನಾನು ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ತೆಲುಗು ಚಿತ್ರರಂಗದವನ್ನು ಕೇಳಿಕೊಳ್ಳುತ್ತೇನೆ. ಆ ವ್ಯಕ್ತಿಗೂ ಕೇಳ್ಕೋತೀನಿ, “ನೀವಿಲ್ಲಿ ದಯವಿಟ್ಟು ಬರ್ಬೇಡಿ. ನೀವಿಲ್ಲಿ ಬಂದರೆ ಅಪ್ಪಾವ್ರ ಅಭಿಮಾನಿಗಳು ನಿಮ್ಮನ್ನು ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ. ಯಾವತ್ತೂ ಇಲ್ಲದಿರುವ ವ್ಯಕ್ತಿಯ ಬಗ್ಗೆ ಮಾತನಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡ್ಬೇಕು. ಏನ್ ಮಾತ್ಡಾತಿದ್ದೀವಿ ಅನ್ನೋ ಪರಿಜ್ಞಾನ ಇರಬೇಕು. ತೆಲುಗು ಚಿತ್ರರಂಗವನ್ನು ಕೇಳ್ಕೋತೀನಿ ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com