ಹಿನ್ನೋಟ 2020: ಕೊರೋನಾ ಹೊಡೆತದಿಂದಾಗಿ ಒಟಿಟಿಯಲ್ಲಿ ರಿಲೀಸ್ ಆದ ಸೌತ್ ಇಂಡಿಯಾ ಸಿನಿಮಾಗಳು!
2020 ಚಿತ್ರರಂಗಕ್ಕೆ ಸಂಕಷ್ಟದ ವರ್ಷ ಎಂದರೆ ತಪ್ಪಾಗಲಾರದು. ಹೌದು ಕೊರೋನಾ ಮಹಾಮಾರಿಯ ಹೊಡೆತಕ್ಕೆ ಚಿತ್ರರಂಗ ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆಯೂ ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು.
Published: 29th December 2020 09:05 PM | Last Updated: 30th December 2020 02:12 PM | A+A A-

ಸಂಗ್ರಹ ಚಿತ್ರ
2020 ಚಿತ್ರರಂಗಕ್ಕೆ ಸಂಕಷ್ಟದ ವರ್ಷ ಎಂದರೆ ತಪ್ಪಾಗಲಾರದು. ಹೌದು ಕೊರೋನಾ ಮಹಾಮಾರಿಯ ಹೊಡೆತಕ್ಕೆ ಚಿತ್ರರಂಗ ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆಯೂ ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು.
ಕೊರೋನಾ ಹಿನ್ನೆಲೆಯಲ್ಲಿ ಥಿಯೇಟರ್ ಗಳಿಗೆ ಪ್ರೇಕ್ಷಕರು ಬರದ ಕಾರಣ ಅಪ್ಪಟ ಕನ್ನಡ ಚಿತ್ರಗಳಾದ ಭೀಮಾಸೇನಾ ನಳಮಹರಾಜ, ಫ್ರೆಂಚ್ ಬಿರಿಯಾನಿ, ಲಾ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು.
1. ಫ್ರೆಂಚ್ ಬಿರಿಯಾನಿ ಚಿತ್ರ ಜುಲೈ 24ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರದಲ್ಲಿ ಡ್ಯಾನಿಷ್ ಸೇಠ್, ದಿಶಾ ಮದನ ಅಭಿನಯಿಸಿದ್ದು ಪನ್ನಗ ಭರಣ ಚಿತ್ರವನ್ನು ನಿರ್ದೇಶಿಸಿದ್ದರು.
2. ರಘು ಸಮರ್ಥ್ ನಿರ್ದೇಶನದ ಲಾ ಚಿತ್ರ ಜುಲೈ 17ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಾಗಿಣಿ ಪ್ರಜ್ವಲ್, ಕೃಷ್ಣ ಹೆಬ್ಬಾಳೆ ಮುಂತಾದವರು ನಟಿಸಿದ್ದರು.
3. ಅರವಿಂದ್ ಅಯ್ಯರ್ ಮತ್ತು ಅರೋಹಿ ನಾರಾಯಣ್ ಅಭಿನಯದ ಭೀಮಸೇನಾ ನಳಮಹಾರಾಜ ಚಿತ್ರ ಸಹ ಅಕ್ಟೋಬರ್ 29ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದರು.
4. ನಟ ಸೂರ್ಯ ಅಭಿನಯದ ಸೂರರೈ ಪೋಟ್ರು ಚಿತ್ರ ನವೆಂಬರ್ 12ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ಸುಧಾ ಕೊಂಗರ ನಿರ್ದೇಶಿಸಿದ್ದರು.
5. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಅಭಿನಯದ ಮಿಸ್ ಇಂಡಿಯಾ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನವೆಂಬರ್ 4ರಂದು ಬಿಡುಗಡೆಯಾಗಿತ್ತು. ಚಿತ್ರವನ್ನು ನರೇಂದ್ರ ನಾಥ್ ನಿರ್ದೇಶಿಸಿದ್ದರು.
6. ನಟಿ ಅನುಷ್ಕಾ ಶೆಟ್ಟಿ ಅಭಿನಯದ ನಿಶಬ್ಧಂ ಚಿತ್ರ ಅಕ್ಟೋಬರ್ 2ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ನಟ ಮಾಧವನ್ ಸಹ ನಟಿಸಿದ್ದರು.
7. ಆರ್ ಜೆ ಬಾಲಾಜಿ ನಿರ್ದೇಶನದ ಮೂಕುತಿ ಅಮ್ಮನ್ ಚಿತ್ರದಲ್ಲಿ ನಯನತಾರಾ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಇನ್ನು ಈ ಚಿತ್ರ ನವೆಂಬರ್ 14ರಂದು ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿತ್ತು.
8. ಹೊಸಬರಾದ ಶ್ರಾವಣ್ ರೆಡ್ಡಿ ಮತ್ತು ರುಹಾನಿ ಶರ್ಮಾ ಅಭಿನಯದ ಡರ್ಟಿ ಹರಿ ಚಿತ್ರ ಡಿಸೆಂಬರ್ 18ರಂದು ಫ್ರೈಡೆ ಮೂವಿಸ್ ಎಟಿಟಿಯಲ್ಲಿ ಬಿಡುಗಡೆಯಾಗಿತ್ತು.
9. ದಯಾಳ್ ಪದ್ಮನಾಭನ್ ನಿರ್ದೇಶನದ ಅನಗನಗಾ ಓ ಅತಿಥಿ ಚಿತ್ರ ನವೆಂಬರ್ 20ರಂದು ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
10. ತಮಿಳು ನಟಿ ಜ್ಯೋತಿಕಾ ಅಭಿನಯದ ಪೊನ್ ಮಗಳ್ ವಂದಾಲ್ ಚಿತ್ರ ಸಹ ಮೇ 29ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.