ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ಚಿತ್ರವನ್ನು ತಿರಸ್ಕರಿಸಿದ್ದ 'ಬಾಹುಬಲಿ' ಪ್ರಖ್ಯಾತ ನಟಿ!

ಕನ್ನಡ ಚಿತ್ರರಂಗದ ದಿಕ್ಕು ದಿಸೆ ಬದಲಿಸಿದ ಕೆಜಿಎಫ್ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ನಟಿಸುಬೇಕೆಂದು ಹಲವು ನಟ-ನಟಿಯರೂ ಆಶಿಸುತ್ತಿರುವಾಗಲೇ ಬಾಹುಬಲಿ ನಟಿಯೊಬ್ಬರು ಸಂಭಾವನೆ ವಿಚಾರಕ್ಕೆ ಚಿತ್ರವನ್ನು ತಿರಸ್ಕರಿಸಿದ್ದಾರೆ.

Published: 13th February 2020 08:36 PM  |   Last Updated: 13th February 2020 08:36 PM   |  A+A-

Yash

ಯಶ್

Posted By : Vishwanath S
Source : Online Desk

ಕನ್ನಡ ಚಿತ್ರರಂಗದ ದಿಕ್ಕು ದಿಸೆ ಬದಲಿಸಿದ ಕೆಜಿಎಫ್ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ನಟಿಸುಬೇಕೆಂದು ಹಲವು ನಟ-ನಟಿಯರೂ ಆಶಿಸುತ್ತಿರುವಾಗಲೇ ಬಾಹುಬಲಿ ನಟಿಯೊಬ್ಬರು ಸಂಭಾವನೆ ವಿಚಾರಕ್ಕೆ ಚಿತ್ರವನ್ನು ತಿರಸ್ಕರಿಸಿದ್ದಾರೆ.

100%

ಕೆಜಿಎಫ್ 2 ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು ಬಾಲಿವುಡ್ ನ ಸಂಜಯ್ ದತ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಕಲಾವಿದರ ವಿಚಾರದಲ್ಲಿ ಚಿತ್ರತಂಡ ದೊಡ್ಡ ಮಟ್ಟದ ಪ್ಲಾನ್ ಮಾಡಿತ್ತು. ಇದೇ ರೀತಿ ಉತ್ತರ ಹಾಗೂ ದಕ್ಷಿಣ ಭಾರತದ ಕೆಲವು ಜನಪ್ರಿಯ ಕಲಾವಿದರನ್ನು ಸಂಪರ್ಕ ಮಾಡಿತ್ತು.

100%

ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ರಮ್ಯಾಕೃಷ್ಣ ಅವರಿಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸಲು ಕೇಳಲಾಗಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಒಪ್ಪಿಗೆಯಾಗದೆ ರಮ್ಯಾಕೃಷ್ಣ ಅವರು ಚಿತ್ರವನ್ನು ತಿರಸ್ಕರಿಸಿದ್ದರಂತೆ.

100%

ಬಾಹುಬಲಿ ಚಿತ್ರಕ್ಕಾಗಿ ರಮ್ಯಾಕೃಷ್ಣ ಅವರು 2.5 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದರು. ಅಂದಿನಿಂದ ಶಿವಗಾಮಿಯ ಸಂಭಾವನೆ ಸ್ವಲ್ಪ ಹೆಚ್ಚಾಗಿತ್ತು. ದುಬಾರಿ ಸಂಭಾವನೆ ಕೇಳಿದ್ದರಿಂದ ರಮ್ಯಾಕೃಷ್ಣ ಅವರ ಬದಲಿಗೆ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.

100%

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp