ನನ್ನ ವೃತ್ತಿಬದುಕು 'ಬಿಚ್ಚುಗತ್ತಿ'ಯ ಮೂಲಕ ತೆರೆದುಕೊಳ್ಳಲಿದೆ: ರಾಜವರ್ಧನ್

ಕಳೆದ ಐದು ವರ್ಷಗಳಲ್ಲಿ ತಾನು ಅಭಿನಯಿಸಿದ ಮೊದಲ ಚಿತ್ರದ ಬಿಡುಗಡೆಯಾಗದೆ ಸ್ಯಾಂಡಲ್ ವುಡ್ ನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿಕೊಳ್ಳಲು ಹೆಣಗುತ್ತಿರುವ ನಟ ರಾಜವರ್ಧನ್ ಗೆ ಇದೀಗ ತಮ್ಮ ಮುಂದಿನ ಚಿತ್ರ "ಬಿಚ್ಚುಗತ್ತಿ ಚಾಪ್ಟರ್ ೧" ಮೇಲೆ ಬಹಳಷ್ಟು ಭರವಸೆಗಳಿದೆ.
ರಾಜವರ್ಧನ್
ರಾಜವರ್ಧನ್

ಕಳೆದ ಐದು ವರ್ಷಗಳಲ್ಲಿ ತಾನು ಅಭಿನಯಿಸಿದ ಮೊದಲ ಚಿತ್ರದ ಬಿಡುಗಡೆಯಾಗದೆ ಸ್ಯಾಂಡಲ್ ವುಡ್ ನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿಕೊಳ್ಳಲು ಹೆಣಗುತ್ತಿರುವ ನಟ ರಾಜವರ್ಧನ್ ಗೆ ಇದೀಗ ತಮ್ಮ ಮುಂದಿನ ಚಿತ್ರ "ಬಿಚ್ಚುಗತ್ತಿ ಚಾಪ್ಟರ್ ೧" ಮೇಲೆ ಬಹಳಷ್ಟು ಭರವಸೆಗಳಿದೆ. ಈ ಚಿತ್ರವು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ವೃತ್ತಿಬದುಕಿಗೆ ನಿಜವಾದ ಅರ್ಥದಲ್ಲಿ ಪ್ರಾರಂಭವನ್ನು ನೀಡುತ್ತದೆ ಎಂದು ನಟ ಭಾವಿಸಿದ್ದಾರೆ.

ರಾಜವರ್ಧನ್ ಗೆ ಕಳೆದ ಐದು ವರ್ಷಗಳಲ್ಲಿ ಸರಿಯಾದ ಚಿತ್ರವೇ ಸಿಕ್ಕಿಲ್ಲ. ಆದರೆ ಈಗ ಅಂತಿಮವಾಗಿ ಒಂದು ಮಹತ್ವದ ಚಿತ್ರ ಬಿಡುಗಡೆಯನ್ನು ಅವರು ಎದುರು ನೋಡುತ್ತಿದ್ದಾರೆ. ಐತಿಹಾಸಿಕ ಚಿತ್ರ ಬಿಚ್ಚುಗತ್ತಿ ಚಾಪ್ಟರ್ 1 ದಳವಾಯಿ ದಂಗೆ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ದಾಗ್ಯೂ, ಈ ಹಿಂದೆ ಮಲ್ಟಿ-ಸ್ಟಾರರ್ ನೂರೊಂಡು ನೆನಪು ಚಿತ್ರದಲ್ಲಿ ಅಭಿನಯಿಸಿದ್ದ ರಾಜವರ್ಧನ್ ಬಿಚ್ಚುಗತ್ತಿಯೇ ತಮ್ಮ ಮೊದಲ ಚಿತ್ರವೆಂದು ಭಾವಿಸಿದ್ದಾರೆ.  “ಅಧಿಕೃತವಾಗಿ, ನಾನು ಈಗ ನನ್ನನ್ನು ಹೀರೋ ಎಂದು ಕರೆದುಕೊಳ್ಳಬಹುದು. ನನ್ನ ಚಲನಚಿತ್ರ ವೃತ್ತಿಜೀವನವು ಈಗ ಬಿಚ್ಚುಗತ್ತಿಯೊಡನೆ  ಪ್ರಾರಂಭವಾಗುತ್ತದೆ ... ”ಎಂದು ರಾಜವರ್ಧನ್ ಹೇಳುತ್ತಾರೆ, ಅವರು ಹತಾಶೆಯಿಂದ ಕೈಗೆತ್ತಿಕೊಂಡ ಯೋಜನೆ ಇದಾಗಿತ್ತೆಂದು ಸ್ವತಃ ಅವರು ಹೇಳಿಕೊಂಡಿದ್ದಾರೆ.

ಒಂದು ರೀತಿಯಲ್ಲಿ ಅದು ನಟನ ಅತ್ಯುತ್ತಮ ಪ್ರತಿಭೆಯನ್ನು ಹೊರತರುವಲ್ಲಿ ಸಹಾಯ ಮಾಡಿದೆ. "ಐದು ವರ್ಷಗಳ ಹೋರಾಟವು ಯೋಗ್ಯ ಫಲವಾಗಿದೆ.ಅನೇಕರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಐತಿಹಾಸಿಕ ಪಾತ್ರಗಳನ್ನು ಮಾಡಲ್ಲ ನಾನು ಇದನ್ನು ಆಶೀರ್ವಾದವೆಂದು ಪರಿಗಣಿಸುತ್ತೇನೆ, ”

ನಟ ಡಿಂಗ್ರಿ ನಾಗರಾಜ್ ಅವರ ಮಗನಾಗಿಯೂ ಅವರ ತಂದೆ ಹೆಸರು ತಮ್ಮ ಏಳ್ಗೆಗೆ ಯಾವ ಬೆಂಬಲವಾಗಿಲ್ಲ. ಎನ್ನುವ ರಾಜವರ್ಧನ್ “ನನ್ನ ತಂದೆ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರೂ, ನಾನು ಮೊದಲಿನ ಹೆಜ್ಜೆಯಿಂದ ಪ್ರಾರಂಬಿಸಬೇಕಾಗಿದೆ.ನಾನು ಡಿಂಗ್ರಿ ಅವರ ಮಗ ಎಂದು ಜನರು ಇನ್ನೂ ಗುರುತಿಸಬೇಕಿದೆ.  ನನ್ನ ತಂದೆ ಸ್ತಾರ್ ಆಗಿದ್ದರು.ಆದರೆ ಅವರು ಹಾಸ್ಯನಟರಾಗಿ ಹೆಚ್ಚು ಜನಪ್ರಿಯವಾಗಿದ್ದಾರೆ.ಆದರೆ ಇದಾವುದೂ ನನ್ನ ಪ್ರತಿಭೆಯನ್ನು ಹೊರತರಲು ಸಹಾಯ ಮಾಡಿಲ್ಲ"

"ತೀವ್ರ ಸ್ಪರ್ಧಾತ್ಮಕ ಕಾಲಘಟ್ಟದ ಈ ಸಮಯ ನನಗೆ ಈ ಪಾತ್ರದ ಆಯ್ಕೆ ಮಾಡಿಕೊಳ್ಲಲು ನೆರವಾಗಿದೆ.ಎಂದು ರಾಜವರ್ಧನ್ ಒಪ್ಪಿಕೊಂಡಿದ್ದಾರೆ, ಇದು ಉದ್ಯಮದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸಿದ್ದಾರೆ.“ಇಂದು, ಸಾವಿರಾರು ನಟರು ಮತ್ತು ಚಲನಚಿತ್ರ ನಿರ್ಮಾಪಕರು ಬೆಳ್ಳಿ ಪರದೆಯಲ್ಲಿ ನಟಿಸುವ ಅವಕಾಶವನ್ನು ಪಡೆಯಲು ಗಾಂಧಿನಗರಕ್ಕೆ ಆಗಮಿಸುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬ.ಹಾಗಾಗಿ ಝೊಸಬರನ್ನು ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕನಾಗಿ ಬಿಂಬಿಸುವುದು ತುಸು ಕಷ್ಟಕರ. ಹಾಗಾಗಿ ಐತಿಹಾಸಿಕ ಫಾತ್ರವಾಗಿದ್ದರೆ ಜನಸಮೂಹಕ್ಕೆ ಬೇಗ ಹತ್ತಿರವಾಗುವುದು ಸಾಧ್ಯವಿದೆ ಎಂದು ನಾನು ಅರಿತುಕೊಂಡೆ.ಇದು ನನ್ನ ವ್ಯಕ್ತಿತ್ವ ಮತ್ತು ಕೌಶಲ್ಯಗಳೊಂದಿಗೆ ಸಮರ್ಥಿಸಿಕೊಳ್ಳಲು ನನಗೆ ಸಾಧ್ಯವಾಗುವ ಪಾತ್ರವಾಗಿದೆ ”ಎಂದು ಅವರು ತಮ್ಮ ಭರಮಣ್ಣ ನಾಯಕ ಪಾತ್ರದ ಬಗ್ಗೆ ನಟ ವಿವರಿಸಿದ್ದಾರೆ.

ಹರಿ ಸಂತೋಷ್ ನಿರ್ದೇಶನದ ಈ ಚಿತ್ರ ಬಿ.ಎಲ್.ವೇಣು ಅವರ ಕಾದಂಬರಿಯ ಆಧಾರಿತವಾಗಿದೆ."ಭರಮಣ್ಣ ನಾಯಕನ ಬಗೆಗೆ ನಮಗೆ ಯಾವುದೇ ವಿವರವಾದ ಉಲ್ಲೇಖಗಳಿಲ್ಲದ ಕಾರಣ ನಾವು ಪುಸ್ತಕದ ಮೇಲೆ ಸಾಕಷ್ಟು ಅವಲಂಬಿತರಾಗಿದ್ದೇವೆ. ತಯಾರಕರು ಅವರ ಕಥನವನ್ನು ನಿರೂಪಿಸಲು  ಪ್ರಯತ್ನಿಸಿದ್ದಾರೆ. ಐತಿಹಾಸಿಕ ಚಲನಚಿತ್ರಗಳು ವಿಶೇಷವಾಗಿ ಈ ಪೀಳಿಗೆಗೆ ಇತಿಹಾಸ ಮತ್ತು ಪರಂಪರೆಯನ್ನು ಜೀವಂತವಾಗಿ ತೋರಿಸಲಿದೆ.. ನಾವು ಸಾಕಷ್ಟು ಸಂಶೋಧನೆ ಮಾಡಿದ್ದೇವೆ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಕೆಲವು ಪುಸ್ತಕಗಳನ್ನು ಸಹ ಪಡೆದುಕೊಂಡಿದ್ದೇವೆ. ಬಿಚುಗತ್ತಿಯನ್ನು  ನೋಡುವುದು ಪುಸ್ತಕದ ಪುಟಗಳನ್ನು ತಿರುಗಿಸಿದಂತಾಗುತ್ತದೆ. 400 ಪುಟಗಳ ಪುಸ್ತಕವನ್ನು ಎರಡು ಗಂಟೆಗಳ ಕಾಲ ಚಿತ್ರದಲ್ಲಿ ಇಳಿಸಲಾಗಿದೆ"

15 ನೇ ಶತಮಾನದ ಈ ಕಥೆಭರಮಣ್ಣ ನಾಯಕ ಹಾಗೂ ದಳವಾಯಿ  ಮುದ್ದಣ್ಣರ ನಡುವಿನ ಯುದ್ಧದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಹಿಂದಿನವರು ಸಿಂಹಾಸನವನ್ನು ಏರುವ ಬಗ್ಗೆ ಹೇಗೆ ಆಲೋಚಿಸುತ್ತಿದ್ದರು ಎನ್ನುವುದು ಇಲ್ಲಿ ಪ್ರತಿಬಿಂಬಿತವಾಗಿದೆ. “ನಾವು ಪುಸ್ತಕದ ಮೂಲಕ ಹೋದರೆ, ಒಬ್ಬರು 10 ವಿಭಿನ್ನ ಚಿತ್ರ ಮಾಡಬಹುದು! ಆದರೆ ನಿರ್ದೇಶಕರು ಪುಸ್ತಕದ ಕೇವಲ ಒಂದು ಭಾಗವನ್ನು ಪರಿಗಣಿಸಿದ್ದಾರೆ, ಅದು ಸಾಮಾನ್ಯ ಮನುಷ್ಯನೊಬ್ಬ ಬಂಡಾಯಗಾರನಾಗುವುದರ ಬಗೆಗೆ ಹೇಳುತ್ತದೆ. ದಳವಾಯಿ  ಮುದ್ದಣನನ್ನು ಚಿತ್ರದುರ್ಗದಿಂದ ಹೊರಹಾಕುವ  ಅವರ ಹೋರಾಟಗಳು ಇಲ್ಲಿ ಮುಖ್ಯವಾಗಿದೆ"

. "ಈ ಚಿತ್ರವು ಹೇಗೆ ಸ್ವೀಕರಿಸಲ್ಪಡಲಿದೆ ಎನ್ನುವುದರ ಮೇಲೆ  ನಾವು ಮುಂದಿನ ಯೋಜನೆ ತೆಗೆದುಕೊಳ್ಲಲಿದ್ದೇವೆ" ರಾಜವರ್ಧನ್ ಹೇಳಿದರು/

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com