'ಕೋಟಿಗೊಬ್ಬ 3' ಗಾಗಿ ಕಿಚ್ಚ ಸುದೀಪ್ ಹೊಸ ಅವತಾರ!

ಕೋಟಿಗೊಬ್ಬ 3 ನೊಂದಿಗೆ ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ತಮ್ಮ ಹೊಸ ವರ್ಷ ಪ್ರಾರಂಭಿಸಿದ್ದಾರೆ. ಚಿತ್ರವು ಕಡೇ ಹಂತದ ಶೂಟಿಂಗ್ ನಲ್ಲಿದ್ದು ಈ ಚಿತ್ರದ ಇತ್ತೀಚಿನ ಸ್ಟಿಲ್ ಗಳೀಗ ಪತ್ರಿಕೆಗೆ ಸಿಕ್ಕಿದೆ.  
ಸುದೀಪ್
ಸುದೀಪ್

ಕೋಟಿಗೊಬ್ಬ 3 ನೊಂದಿಗೆ ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ತಮ್ಮ ಹೊಸ ವರ್ಷ ಪ್ರಾರಂಭಿಸಿದ್ದಾರೆ. ಚಿತ್ರವು ಕಡೇ ಹಂತದ ಶೂಟಿಂಗ್ ನಲ್ಲಿದ್ದು ಈ ಚಿತ್ರದ ಇತ್ತೀಚಿನ ಸ್ಟಿಲ್ ಗಳೀಗ ಪತ್ರಿಕೆಗೆ ಸಿಕ್ಕಿದೆ. 

ನಟ ಕಿಚ್ಚ ಸುದೀಪ್ ತನ್ನ ಹೊಸ ಗೆಟಪ್ ನಲ್ಲಿ  ಕಾಣಿಸಿಕೊಂಡಿದ್ದಾರೆ.ಚಿತ್ರವು ಇತ್ತೀಚಿನ ಹಾಡಿನ ಶೂಟಿಂಗ್ ವೇಳೆ ತೆಗೆಯಲಾಗಿದ್ದ  ಸ್ಟಿಲ್ ಆಗಿದ್ದು ಇದನ್ನು ಬೆಂಗಳೂರಿನಲ್ಲಿ ವರ್ಣರಂಜಿತ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ.

ಏತನ್ಮಧ್ಯೆ, ಪೋಸ್ಟ್ ಪ್ರೊಡಕ್ಷನ್  ನಂತರದ ಕೆಲಸಗಳಲ್ಲಿ ನಿರತರಾಗಿರುವ ತಯಾರಕರು ಮುಂದಿನ ವಾರದಲ್ಲಿ ಡಬ್ಬಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ವಿಶ್ವವರ್ಧನ್-ನಟಿಸಿದ ಕೋಟಿಗೊಬ್ಬ ಚಿತ್ರದಿಂದ ಶೀರ್ಷಿಕೆ ಪಡೆದಿದ್ದು  ಅದರ ಮುಂದುವರಿದ ಭಾಗವಾದ ಕೋಟಿಗೊಬ್ಬ 2 2016 ರಲ್ಲಿ ಬಿಡುಗಡೆಯಾಗಿತ್ತು. 

ಕೋಟಿಗೊಬ್ಬ 3ರ ಕಥೆಯನ್ನು ಸುದೀಪ್ ಸ್ವತಃ ಬರೆದಿದ್ದಾರೆ, ಮತ್ತು ಶಿವ ಕಾರ್ತಿಕ್ ನಿರ್ದೇಶನಸೂರಪ್ಪ ಬಾಬು ನಿರ್ಮಾಣ ಈ ಚಿತ್ರದ ವಿಶೇಷ. ಚಿತ್ರ ಸೆರ್ಬಿಯಾ, ಥಾಯ್ ಲ್ಯಾಂಡ್, ಮಲೇಷಿಯಾ ಸೇರಿದಂತೆ ಅನೇಕ ವಿದೇಶಿ ಸ್ಥಳಗಳಲ್ಲಿ ಚಿತ್ರೀಕರಿಸಲ್ಪಟ್ಟಿದೆ.

ಆಕ್ಷನ್ ಎಂಟರ್ಟೈನರ್ ಮಡೋನಾ ಸೆಬಾಸ್ಟಿಯನ್ ಮತ್ತು ಅಫ್ತಾಬ್ ಶಿವದಾಸಾನಿ ಸೇರಿದಂತೆ ಒಂದೆರಡು ನಟರಿಗೆ ಇದು ಕನ್ನಡದ ಚೊಚ್ಚಲ ಚಿತ್ರವಾಗಿರಲಿದೆ. ದೆ. ಈ ಚಿತ್ರದಲ್ಲಿ ಶ್ರದ್ಧಾ ದಾಸ್, ರವಿಶಂಕರ್ ಮತ್ತು ತಬಲಾ ನಾಣಿ ಸಹ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದರೆ, ಶೇಖರ್ ಚಂದ್ರು ಡಿಒಪಿ. ಆಗಿದ್ದಾರೆ. ಈ ಹಿಂದೆ ಕೋಟಿಗೊಬ್ಬ  2 ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತೆರೆ ಕಂಡಿತ್ತಾದರೂ ಪ್ರಸ್ತುತ ನಿರ್ಮಾಪಕರು ಕೋಟಿಗೊಬ್ಬ 3 ಅನ್ನು ಕನ್ನಡದಲ್ಲಿ ಮಾತ್ರವೇ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ. ಬಿಡುಗಡೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲವಾದರೂ, ಚಿತ್ರ ಈ ಬೇಸಿಗೆಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. . 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com