'ಛಪಾಕ್ ಸಿನಿಮಾಕ್ಕೆ ತಡೆ ನೀಡಿ': ಕೋರ್ಟ್ ಮೊರೆ ಹೋದ ಲಕ್ಷ್ಮಿ ಅಗರ್ವಾಲ್ ಪರ ಹೋರಾಟ ನಡೆಸಿದ್ದ ವಕೀಲೆ  

ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲೆ ಅಪರ್ಣಾ ಭಟ್ ದೀಪಿಕಾ ಪಡುಕೋಣೆ ಅಭಿನಯದ ನಾಳೆ ಬಿಡುಗಡೆಯಾಗುತ್ತಿರುವ ಛಪಾಕ್ ಚಿತ್ರತಂಡದ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ.
ಛಪಾಕ್ ಚಿತ್ರದ ದೃಶ್ಯ
ಛಪಾಕ್ ಚಿತ್ರದ ದೃಶ್ಯ

ನವದೆಹಲಿ: ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲೆ ಅಪರ್ಣಾ ಭಟ್ ದೀಪಿಕಾ ಪಡುಕೋಣೆ ಅಭಿನಯದ ನಾಳೆ ಬಿಡುಗಡೆಯಾಗುತ್ತಿರುವ ಛಪಾಕ್ ಚಿತ್ರತಂಡದ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ.


ಛಪಾಕ್ ಚಿತ್ರ ಬಿಡುಗಡೆಗೆ ತಡೆಯೊಡ್ಡಬೇಕೆಂದು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಇದಕ್ಕೆ ಕಾರಣ ಹಲವು ವರ್ಷಗಳ ಕಾಲ ಲಕ್ಷ್ಮಿ ಅಗರ್ವಾಲ್ ಪರ ನ್ಯಾಯಾಲಯದಲ್ಲಿ ಆಸಿಡ್ ಸಂತ್ರಸ್ತೆ ವಿರುದ್ಧ ಹೋರಾಟ ನಡೆಸಿದ್ದರೂ ಚಿತ್ರದಲ್ಲಿ ತಮಗೆ ಮನ್ನಣೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.


ಛಪಾಕ್ ಸಿನೆಮಾ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಕಥೆ. ಇದರಲ್ಲಿ ದೀಪಿಕಾ ಪಡುಕೋಣೆ ಲಕ್ಷ್ಮಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ತಮಗೆ ಮನ್ನಣೆ ಕೊಟ್ಟಿಲ್ಲ ಎಂದು ಅಸಮಾಧಾನ ಬೇಸರವನ್ನು ಅಡ್ವೊಕೇಟ್ ಅಪರ್ಣಾ ಭಟ್ ಫೇಸ್ ಬುಕ್ ನಲ್ಲಿ ಹೊರಹಾಕಿದ್ದಾರೆ.

 
ಇವರ ಫೇಸ್ ಬುಕ್ ಪೋಸ್ಟ್ ನೋಡಿದ ಹಲವರು ಪ್ರತಿಕ್ರಿಯಿಸಿ ಬೆಂಬಲ ನೀಡಿದ್ದಾರೆ. ಅದಕ್ಕೆ ವಕೀಲೆ ಅಪರ್ಣಾ ಧನ್ಯವಾದ ಹೇಳಿದ್ದು ನಾನು ಇನ್ನು ಸುಮ್ಮನೆ ಕೂರುವುದಿಲ್ಲ, ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು ಯಾವುದೇ ಪರಿಸ್ಥಿತಿ ಬಂದರೂ ಎದುರಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com