ನಮೋ ಚಿತ್ರದ ಏಳು ಹಾಡುಗಳ ಗುಚ್ಚ ಬಿಡುಗಡೆ

ಹೊಸಬರೆ ಸೇರಿ ಮಾಡಿರುವ ನಮೋ ಚಿತ್ರ ಶೀರ್ಷಿಕೆ ಮೂಲಕವೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನು ಚಿತ್ರದ ಟೀಸರ್, ಹಾಡುಗಳ ಬಿಡುಗಡೆ ನಂತರ ಇದೀಗ ಒಟ್ಟಾರೆ ಏಳು ಹಾಡುಗಳ ಜ್ಯೂಕ್ ಬಾಕ್ಸ್ ಅನ್ನು ಚಿತ್ರ ತಂಡ ರಿಲೀಸ್ ಮಾಡಿದೆ.

Published: 14th January 2020 07:12 PM  |   Last Updated: 14th January 2020 07:12 PM   |  A+A-


Namo Movie Still

ನಮೋ ಚಿತ್ರದ ಸ್ಟಿಲ್

Posted By : Vishwanath S
Source : Online Desk

ಹೊಸಬರೆ ಸೇರಿ ಮಾಡಿರುವ ನಮೋ ಚಿತ್ರ ಶೀರ್ಷಿಕೆ ಮೂಲಕವೇ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನು ಚಿತ್ರದ ಟೀಸರ್, ಹಾಡುಗಳ ಬಿಡುಗಡೆ ನಂತರ ಇದೀಗ ಒಟ್ಟಾರೆ ಏಳು ಹಾಡುಗಳ ಗುಚ್ಛವನ್ನು ಚಿತ್ರ ತಂಡ ರಿಲೀಸ್ ಮಾಡಿದೆ.

ನಮೋ ಅಂದಾಕ್ಷಣ ಇದು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಧಾರಿತ ಚಿತ್ರವೇ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲ ಮೋದಿಗೂ ಈ ನಮೋ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಡಿಮೆ ಸಮಯದಲ್ಲಿ ಶ್ರೀಮಂತನಾಗುವುದಕ್ಕೆ ಹೊರಡುವ ಯುವಕರ ತಂಡದ ಕಥೆ ಇದು. 

ಚಿತ್ರಕ್ಕೆ ಸಾಯಿ ಸರ್ವೇಶ್ ಸಂಗೀತ ಸಂಯೋಜಿಸಿದ್ದು ಚಿತ್ರವನ್ನು ನಿರ್ದೇಶಿಸಿರುವ ಪುಟ್ಟರಾಜ್ ಸ್ವಾಮಿ ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಶ್ಮಿತಾ, ಭೈರವ, ಮಣಿ, ಮಹೇಶ್ ಅಭಿನಯಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp