ಗೋಶಾಲೆಗಾಗಿ ಮತ್ತೆ ಒಂದಾದ ಜೋಡೆತ್ತುಗಳು! ಡಿಬಾಸ್ ಮನೆಯಲ್ಲಿ ದವಸ- ಧಾನ್ಯಗಳ ರಾಶಿ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೋಡೆತ್ತುಗಳಾಗಿ ರಾಜ್ಯದಾದ್ಯಂತ ಮನೆಮಾತನಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇದೀಗ ಗೋಶಾಲೆಗಾಗಿ ಮತ್ತೆ ಒಂದಾಗಿದ್ದಾರೆ.
ದರ್ಶನ್, ಯಶ್
ದರ್ಶನ್, ಯಶ್

ಮಂಡ್ಯ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೋಡೆತ್ತುಗಳಾಗಿ ರಾಜ್ಯದಾದ್ಯಂತ ಮನೆಮಾತನಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇದೀಗ ಗೋಶಾಲೆಗಾಗಿ ಮತ್ತೆ ಒಂದಾಗಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ  ಪ್ರಚಾರದ ಸಂದರ್ಭದಲ್ಲಿ ನುಡಿದಂತೆ  ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗೋಶಾಲೆಯನ್ನು ಮೇಲ್ಛಾವಣಿಯನ್ನು ಯಶ್ ನಿರ್ಮಿಸುತ್ತಿದ್ದಾರೆ.  ಕೊಟ್ಟಿಗೆ ಮತ್ತು ಗೋಶಾಲೆಗೆ ಬೇಕಾಗುವ  ಎಲ್ಲಾ ಸೌಕರ್ಯಗಳನ್ನು ಮಾಡಲಾಗುತಿದ್ದು, ಈಗಾಗಲೇ ಸುಮಾರು 12ರಿಂದ 13 ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಗೋ ಶಾಲೆಗೆ  ಸಾಲು ಸಾಲು ಟ್ರಾಕ್ಟರ್ ಗಳ ಮೂಲಕ ಹುಲ್ಲನ್ನು ಸಾಗಿಸಿದ್ದಾರೆ. ಟ್ರಾಕ್ಟರ್ ಮೂಲಕ ಹುಲ್ಲನ್ನು ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ  ಮಧ್ಯೆ ಅರ್ಥಪೂರ್ಣ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾಗಿರುವ ದರ್ಶನ್, ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಬದಲು ದವಸ- ಧಾನ್ಯಗಳನ್ನು ತಂದು ಕೊಡಿ, ತಲುಪಿಸಬೇಕಾದ ಜಾಗಕ್ಕೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ದವಸ- ಧಾನ್ಯಗಳನ್ನು ತರುತ್ತಿದ್ದು, ಡಿಬಾಸ್ ಮನೆಯಲ್ಲಿ ದವಸ- ಧಾನ್ಯಗಳ ರಾಶಿ ರಾಶಿಯೇ ಬಂದು ಬೀಳುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com