ಬೆಂಗಳೂರು: ಆಶ್ರಮದ ಮಕ್ಕಳಿಗೆ ಹಾಸಿಗೆ ಒದಗಿಸಿದ ನಟ ಚೇತನ್ ಕುಮಾರ್, ಮೇಘ!

ಸ್ಟಾರ್ ಗಳ ಮದುವೆ ಎಂದರೆ  ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ  ದಾಂಪತ್ಯ ಜೀವನಕ್ಕೆ ಕಾಲಿಡಲಿರುವ  ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.

Published: 29th January 2020 11:40 AM  |   Last Updated: 29th January 2020 03:41 PM   |  A+A-


Actor_ChetanKumar1

ನಟ ಚೇತನ್ ಕುಮಾರ್ , ಮೇಘ

Posted By : Nagaraja AB
Source : Online Desk

ಬೆಂಗಳೂರು: ಸ್ಟಾರ್ ಗಳ ಮದುವೆ ಎಂದರೆ  ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ  ದಾಂಪತ್ಯ ಜೀವನಕ್ಕೆ ಕಾಲಿಡಲಿರುವ  ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.

ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ವಿವಾಹವಾಗುತ್ತಿದ್ದಾರೆ. ಸಮಾಜ ಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್ ಕುಮಾರ್, ಹುಟ್ಟಿನಿಂದ ಶ್ರೀಮಂತನಾಗಿದ್ದರೂ  ಸರಳವಾಗಿ ಅನಾಥ ಶ್ರಮದಲ್ಲಿ ಮಕ್ಕಳ ಎದುರು ಅಂದು ಸಂಜೆ 6 ಗಂಟೆಗೆ ಇಬ್ಬರು ಏರಲಿದ್ದಾರೆ.

ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಚೇತನ್ ಹಾಗೂ  ಮೇಘ ಇದೀಗ ಸರಳವಾಗಿ ವಿವಾಹವಾಗುತ್ತಿದ್ದು, ಮದುವೆಯ ಆಮಂತ್ರಣ ಪತ್ರಿಕೆ ಕೂಡಾ ವಿಭಿನ್ನವಾಗಿ ಗಮನ ಸೆಳೆದಿತ್ತು. ಲಗ್ನ ಪತ್ರಿಕೆಯೊಳಗೆ ಬೀಜವನ್ನು ಹುದುಗಿಸಿ ಇಡಲಾಗಿತ್ತು. ಪತ್ರಿಕೆಯನ್ನು ಓದಿ ಎಸೆದರೂ ಅದು ಅಲ್ಲೆ ಚಿಗುರೊಡೆಯುತ್ತೆ ಎಂದು ಬರೆಯಲಾಗಿತ್ತು. 

ಇನ್ನೂ ಅಡಂಬರವಿಲ್ಲದೆ ಸರಳವಾಗಿ ನಡೆಯಲಿರುವ ಈ ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ , ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಹಾಗೂ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಸರಳ ಮದುವೆ ಹಿನ್ನೆಲೆಯಲ್ಲಿ ಚೇತನ್ ಕುಮಾರ್ ಹಾಗೂ ಮೇಘ ಆಶ್ರಮದ ಮಕ್ಕಳಿಗೆ ಹಾಸಿಗೆಯನ್ನು ಒದಗಿಸಿದ್ದಾರೆ.  ಹಾಸಿಗೆಯ ಜೊತೆಯಲ್ಲಿರುವ ಪೋಟೋಗಳನ್ನು ಟ್ವೀಟರ್ ನಲ್ಲಿ ಚೇತನ್ ಕುಮಾರ್ ಹಂಚಿಕೊಂಡಿದ್ದಾರೆ. 

 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp