ತಮಿಳಿನ  '96' ನಿಂದ ಸ್ಪೂರ್ತಿಗೊಂಡು 'ಲವ್ ಮಾಕ್‌ಟೇಲ್' ಸೃಷ್ಟಿ: ನಿರ್ದೇಶಕ ಕೃಷ್ಣ

ತಮಿಳು ಚಿತ್ರ "96" ನಟ-ನಿರ್ದೇಶಕ ಕೃಷ್ಣ ಸೇರಿದಂತೆ ಅನೇಕ ಜನರ ಮೇಲೆ ದೊಡ್ಡ ಪ್ರಭಾವ  ಬೀರಿದ್ದು ಇದೀಗ ನಿರ್ದೇಶಕರು ತಯಾರಿಸುತ್ತಿರುವ "ಲವ್ ಮಾಕ್‌ಟೇಲ್" ಚಿತ್ರಕ್ಕೂ ಸಹ ಇದೇ ಪ್ರೇರಣೆಯಾಗಿದೆಯಂತೆ. "ನಾನು ಚಿತ್ರವನ್ನು ನೋಡಿದಾಗ, ಅದು ಕೇವಲ ಸಿನೆಮಾ ಅಲ್ಲ ಬದಲಿಗೆ ವಾಸ್ತವ ಘಟನೆ, ಅನುಭವ ಎಂದೇ ಭಾವಿಸಿದೆ" ಕೃಷ್ಣ ಹೇಳಿದ್ದಾರೆ. ಜನವರಿ 31 ರಂದು "ಲವ್ ಮಾಕ್‌ಟೇಲ್ತೆ
ಲವ್ ಮಾಕ್‌ಟೇಲ್
ಲವ್ ಮಾಕ್‌ಟೇಲ್

ತಮಿಳು ಚಿತ್ರ "96" ನಟ-ನಿರ್ದೇಶಕ ಕೃಷ್ಣ ಸೇರಿದಂತೆ ಅನೇಕ ಜನರ ಮೇಲೆ ದೊಡ್ಡ ಪ್ರಭಾವ  ಬೀರಿದ್ದು ಇದೀಗ ನಿರ್ದೇಶಕರು ತಯಾರಿಸುತ್ತಿರುವ "ಲವ್ ಮಾಕ್‌ಟೇಲ್" ಚಿತ್ರಕ್ಕೂ ಸಹ ಇದೇ ಪ್ರೇರಣೆಯಾಗಿದೆಯಂತೆ. "ನಾನು ಚಿತ್ರವನ್ನು ನೋಡಿದಾಗ, ಅದು ಕೇವಲ ಸಿನೆಮಾ ಅಲ್ಲ ಬದಲಿಗೆ ವಾಸ್ತವ ಘಟನೆ, ಅನುಭವ ಎಂದೇ ಭಾವಿಸಿದೆ" ಕೃಷ್ಣ ಹೇಳಿದ್ದಾರೆ. ಜನವರಿ 31 ರಂದು "ಲವ್ ಮಾಕ್‌ಟೇಲ್ತೆರೆ ಮೇಲೆ ಬರಲಿದ್ದು  ತನ್ನ ಪೋಸ್ಟರ್‌ಗಳು, ಟೀಸರ್ ಮತ್ತು ಟ್ರೈಲರ್‌ನ ಮೂಲಕ ಇದಾಗಲೇ ಸಂಚಲನ ಸೃಷ್ಟಿಸಿದೆ.

ರಘು ದೀಕ್ಷಿತ್ ಅವರ ಸಂಗೀತವು ವಿಶೇಷವಾಗಿದ್ದು ಕೃಷ್ಣ ಅವರು ಚಿತ್ರದೊಂದಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.“ನನ್ನ ಹಿಂದಿನ ಚಿತ್ರಗಳಲ್ಲಿ ಜನರು ನೋಡಿದ ಹಳೆಯ ಕೃಷ್ಣನ ಮರೆತು ಹೊಸರೂಪವನ್ನು ಕಾಣಬೇಕಿದೆ. ಅದಕ್ಕಾಗಿ ನಾನು ಲವ್ ಮಾಕ್‌ಟೇಲ್ ಗಾಗಿ ಹೊಸ ಬಗೆಯ ಪೋಸ್ಟರ್‌ಗಳು, ಹಾಡುಗಳು, ಸ್ಥಳಗಳು, ಕಥೆ, ದೃಶ್ಯಗಳು ಮತ್ತು ಟ್ರೈಲರ್‌ಗಳನ್ನು ರಚಿಸಿದೆ.ಎಂದು ಅವರು ಹೇಳಿದ್ದಾರೆ.

ಕೃಷ್ಣನಟನಾಗಲು ಬಯಸಿದ್ದರು. ಆದರೆ ಚಿತ್ರರಂಗಕ್ಕೆ ಪ್ರವೇಶಿಸಲು ಒಂದು ದಾರಿ ಬೇಕಿತ್ತು. "ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವುದು ಉತ್ತಮ ಆಯ್ಕೆಇದು ಅಂತಿಮವಾಗಿ ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು ನನಗೆ ಸಹಾಯ ಮಾಡಿತು" ಎಂದು ಕೃಷ್ಣ ಹೇಳುತ್ತಾರೆ, ನಿರ್ದೇಶಕ ಸೂರಿಯೊಂದಿಗೆ ಜಾಕಿ ಮತ್ತು ಹುದುಗರು  ಇನ್ನೂ ಕೆಲ ಚಿತ್ರಗಳಿಗೆ ಕೆಲಸ ಮಾಡಿದ ಕೃಷ್ಣ, ಅವರ ಆ ಅನುಭವ ಇದೀಗ ಕೆಲಸಕ್ಕೆ ಬಂದಿದೆಯಂತೆ.“ಉತ್ತಮ ಚಿತ್ರದ ಭಾಗವಾಗುವುದು ನನ್ನಉದ್ದೇಶ, ಇದನ್ನು ಹೊರತಾಗಿ ಏನೂ ಇಲ್ಲ. ಇದಕ್ಕಾಗಿ ನಾನು ಸುಮಾರು 4-5 ವರ್ಷಗಳ ಕಾಲ ಕಾಯುತ್ತಿದ್ದೆ. ಯಾರಾದರೂ ನನಗೆ ಒಳ್ಳೆಯ ಚಿತ್ರ ಕ್ಕಾಗಿ ಆಫರ್ ನೀಡುತ್ತಾರೆಂದು ನಿರೀಕ್ಷಿಸಿದ್ದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಅಥವಾ ಒಳ್ಳೆಯ ವಿಷಯವನ್ನು ಚರ್ಚಿಸಲು ಬಯಸುವ ಯಾರೊಬ್ಬರಿಂದಲೂ ನಾನು ಯಾವಾಗಲೂ ಉತ್ಸಾಹದಿಂದ ಕೂಡುತ್ತಿದ್ದೆ. ಕನ್ನಡದಲ್ಲಿ ಅದ್ಭುತ ಚಲನಚಿತ್ರಗಳನ್ನು ಮಾಡುವ ಅನೇಕ ಉತ್ತಮ ನಿರ್ದೇಶಕರು ಇದ್ದಾರೆ, ಆದರೆ ದುರದೃಷ್ಟವಶಾತ್ ಯಾರೂ ನನ್ನನ್ನು ಸಂಪರ್ಕಿಸುತ್ತಿರಲಿಲ್ಲ. ಹುಚ್ಚ 2ನ ನಂತರವೇ ನಾನು ಬೇರೊಬ್ಬರಜತೆ ಸೇರದಿರಲು  ನಿರ್ಧರಿಸಿದೆ. ಆ ಮ್ಯಾಜಿಕ್ ಮ್ಯಾನ್ ಬಂದು ನನ್ನ ವೃತ್ತಿಜೀವನದ ಭವಿಷ್ಯವನ್ನು ಬದಲಾಯಿಸಲು ನಾನು ಕಾಯುತ್ತಿದ್ದೆ, ಆದರೆ ಅದು ಆಗಲಿಲ್ಲ. ಹಾಗಾಗಿ ನನ್ನದೇ ಆದ ಕೆಲಸವನ್ನು ನಾನು ಪ್ರಾರಂಭಿಸಬೇಕಾಗಿ ಬಂದಿತು"

ಲವ್ ಮಾಕ್‌ಟೇಲ್ನಿರ್ಮಾಣ ಪ್ರಕ್ರಿಯೆಯು ಅದ್ಭುತವಾಗಿದೆ ಎಂದು ಕೃಷ್ಣ ಹೇಳುತ್ತಾರೆ, ಶಾರುಖ್ ಖಾನ್ ಚಿತ್ರದ ಸಂಭಾಷಣೆಯನ್ನು ನೆನಪಿಸಿಕೊಳ್ಳುವ ಅವರು ಎಸ್‌ಆರ್‌ಕೆ ಅವರ ಸಂಭಾಷಣೆ,‘ ನಿಮಗೆ ಉತ್ಸಾಹವಿದ್ದರೆ ಮತ್ತು ನಿಮಗೆ ಇಷ್ಟವಾದದ್ದನ್ನು ಮಾಡಿದರೆ, ಇಡೀ ವಿಶ್ವವು ನಿಮ್ಮನ್ನು ಬೆಂಬಲಿಸುತ್ತದೆ ’. ಎಂದಾಗಿದ್ದು ಆರಂಭದಲ್ಲಿ, ಇದು ಕೇವಲ ಸಂಭಾಷಣೆ ಎಂದು ನಾನು ಭಾವಿಸಿದ್ದೆ, ಆದರೆ ಇದು ನನ್ನ ಚಿತ್ರಕ್ಕೆ ತುಂಬಾ ಅನ್ವಯಿಸುತ್ತದೆ. ನಾನು ಮಿಲನಾ ನಾಗರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡರೂ ಅವರು ನನ್ನೊಡನೆ ತೆರೆ ಹಂಚಿಕೊಂಡಿಉಲ್ಲ ಬದಲಿಗೆ ಚಿತ್ರಕ್ಕೆ ಜಂಟಿ ನಿರ್ದೇಶಕರಾದರು. ನಾವಿಬ್ಬರೂ ಕುಳಿತು ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದೇವೆ " 

ಲವ್ ಮಾಕ್‌ಟೇಲ್ ಒಂದು ಸುಂದರ ಭಾವನೆ- ಮಿಲನಾ ನಾಗರಾಜ್
ಲವ್ ಮಾಕ್‌ಟೇಲ್ ನಲ್ಲಿ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಮಿಲನಾ ನಾಗರಾಜ್ ಆಕಸ್ಮಿಕ ಎಂಬಂತೆ ಪ್ರೊಡಕ್ಷನ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. “ನಿರ್ಮಾಪಕಿಯಾಗಬೇಕೆಂದು ನಾನು ಅಂದುಕೊಂಡಿರಲಿಲ್ಲ. ಆದರೆ ನಾನು ಮೊದಲ ಕೆಲ ದೃಶ್ಯಗಳನ್ನು ಕಂಡಾಗ ಅವರು ನಿಜವಾಗಿಯೂ ಉತ್ತಮ ಚಿತ್ರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು. ಕೃಷ್ಣ ಅವರೊಂದಿಗೆ ನಿರ್ಮಾಪಕಿಯಾಗಿ ಸಹಭಾಗಿತ್ವ ವಹಿಸುವ ವಿಚಾರವನ್ನು ನನ್ನೊಂದಿಗೆ ಚರ್ಚಿಸಿದಾಗ ನಾನದನ್ನು ಸವಾಲಾಗಿ ಸ್ವೀಕರಿಸಿದೆ. 

"ನಿರ್ಮಾಪಕರ ದುಃಖವನ್ನು ನಾನು ಆಗಾಗ್ಗೆ ಕೇಳಿದ್ದೇನೆಆದರೆ ನೀವು ತುಂಬಾ ಸುಂದರವಾದ ಉತ್ಪನ್ನವನ್ನು ಹೊಂದಿದ್ದರೆ ಮತ್ತು ಪ್ರತಿಯೊಬ್ಬರೂ ಅದನ್ನು ಮೆಚ್ಚುತ್ತಿದ್ದರೆ, ಅದು ಒಟ್ಟಾರೆಯಾಗಿ ವಿಭಿನ್ನವಾದದ್ದನ್ನು ನೀಡುತ್ತದೆ. ನಟಿಯಾಗಿ , ನೀವು ನಿಮ್ಮದೇ ಆದ ಮಿತಿಗಳನ್ನು ಹೊಂದಿದ್ದೀರಿ, ಆದರೆ ಇಡೀ ಚಿತ್ರದ ಯೋಜನೆ ನಿಮ್ಮದಾದಾಗ ಭಾವನೆ ವಿಭಿನ್ನವಾಗಿರುತ್ತದೆ ”

 "ಯುವಕರನ್ನು ಆಧರಿಸಿದ ಈ ಚಿತ್ರವು ಕೌಟುಂಬಿಕ ವಿಚಾರವನ್ನೂ ಹೊಂದಿದೆ.ಅದು ಹೇಗೆಂದು ಇದು ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ನೋಡಿ ತಿಳಿಯಿರಿ"ಅವರು ಹೇಳುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com