ಧ್ರುವ ಸರ್ಜಾ ದಂಪತಿ
ಸಿನಿಮಾ ಸುದ್ದಿ
ಸ್ಯಾಂಡಲ್ ವುಡ್ ಗೂ ತಟ್ಟಿದ ಕೊರೋನಾ ಶಾಕ್! ಧ್ರುವ ಸರ್ಜಾ ದಂಪತಿಗಳಿಗೆ ಕೊರೋನಾ ಪಾಸಿಟಿವ್
ಸ್ಯಾಂಡಲ್ ವುಡ್ ಖ್ಯಾತ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದೆ.
ಸ್ಯಾಂಡಲ್ ವುಡ್ ಖ್ಯಾತ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದೆ.
ತಮಗೆ ಕೊರೋನಾವೈರಸ್ ಸೋಂಕು ತಗುಲಿರುವ ಕುರಿತು ನಟ ಧ್ರುವ ಸರ್ಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದಿದೆ. ರೋಗಲಕ್ಷಣ ಕಡಿಮೆ ಇದೆ, ಆದರೆ ನಾವು ಆಸತ್ರೆಗೆ ದಾಖಲಾಗುತ್ತಿದ್ದೇವೆ. ಹಾಗೆಯೇ ಬೇಗನೇ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ, ನಮ್ಮೊಡನೆ ಸಂಪರ್ಕಕ್ಕೆ ಬಂದವರೂ ಸಹ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ.ಆರೋಗ್ಯವಾಗಿರಿ, ಸುರಕ್ಷಿತವಾಗಿರಿ, ಜೈ ಆಂಜನೇಯ " ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ