ನನ್ನನ್ನು ಬೆದರಿಸುತ್ತಿದ್ದಾರೆ;  ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು

ಭಾರತೀಯ  ಚಿತ್ರರಂಗದ   ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ  ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ  ಇಳಯರಾಜ  ಪೊಲೀಸರಿಗೆ  ದೂರು ನೀಡಿದ್ದಾರೆ.

Published: 31st July 2020 09:52 PM  |   Last Updated: 31st July 2020 09:52 PM   |  A+A-


Ilayaraja1

ಸಂಗೀತ ನಿರ್ದೇಶಕ ಇಳಯರಾಜ

Posted By : Nagaraja AB
Source : UNI

ಚೆನ್ನೈ: ಭಾರತೀಯ  ಚಿತ್ರರಂಗದ   ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ  ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ  ಇಳಯರಾಜ  ಪೊಲೀಸರಿಗೆ  ದೂರು ನೀಡಿದ್ದಾರೆ.

ಸಾಯಿ  ಪ್ರಸಾದ್  ಹಾಗೂ  ಆತನ ಜನರು   ತಮಗೆ ಬೆದರಿಕೆ ಹಾಕುತ್ತಿದ್ದಾರೆ.  ಈ ಮೂಲಕ  ತಮ್ಮ  ಸ್ಟುಡಿಯೋ ಕೊಠಡಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ಈ  ಸಂಬಂಧ  ಅವರ  ವ್ಯವಸ್ಥಾಪಕ   ಜಾಫರ್   ಪೊಲೀಸರಿಗೆ  ದೂರು ನೀಡಿದ್ದಾರೆ. 

ಪ್ರಸಾದ್ ಸ್ಟುಡಿಯೊದಲ್ಲಿನ  ತಮ್ಮ  ಕೊಠಡಿಗೆ  ಪ್ರವೇಶಿಸಿ  ಹಲವಾರು  ಸಂಗೀತ  ವಾದ್ಯಗಳು, ನೋಟ್ಸ್ ಗಳು ಹಾಗೂ ಇತರ ಉಪಕರಣ ನಾಶಪಡಿಸಿದ್ದಾರೆ ಎಂದು  ಚೆನ್ನೈ ಪೊಲೀಸ್  ಕಮೀಷನರ್ ಗೆ   ನೀಡಿರುವ  ದೂರಿನಲ್ಲಿ  ಆರೋಪಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp