ಎಸ್ ಎಸ್ ರಾಜಮೌಳಿಯ #RRR ಸಿನಿಮಾ ಸೋತರೆ, ಬೀದಿಗಿಳಿದು ಸಂಭ್ರಮ: ಆರ್ ಜಿವಿ

ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ  #RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೆ ಬೀದಿಗಿಳಿದು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ ಎಂದು ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

Published: 06th June 2020 11:34 PM  |   Last Updated: 06th June 2020 11:34 PM   |  A+A-


Ram Gopal Varma-Rajamouli-RRR Movie

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಹೈದರಾಬಾದ್: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ  #RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೆ ಬೀದಿಗಿಳಿದು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ ಎಂದು ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರೂ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಮಾನಸಿಕವಾಗಿ ಯಾರೂ ಈ ಮಾತನ್ನು ಹೇಳುವುದಿಲ್ಲ. ತಮ್ಮ ಸಿನಿಮಾ ಗೆಲುವಿಗಿಂತೆ ಬೇರೆಯ ಸಿನಿಮಾ ಸೋಲನ್ನೇ ಹೆಚ್ಚಾಗಿ ಸಂಭ್ರಮಿಸುತ್ತಾರೆ ಎಂದು ಹೇಳಿದ್ದಾರೆ.

ಆರ್​ಜಿವಿ ತಮ್ಮ ನಿರ್ದೇಶನದ ನೀಲಿ ತಾರೆ ಮಿಯಾ ಮಲ್ಕೋವಾ ಮುಖ್ಯಭೂಮಿಕೆಯಲ್ಲಿರುವ 'ಕ್ಲೈಮ್ಯಾಕ್ಸ್​' ಚಿತ್ರದ ಆನ್​ಲೈನ್​ ಸಂದರ್ಶನವೊಂದರಲ್ಲಿ ರಾಜಮೌಳಿ ಸಿನಿಮಾ ಬಗ್ಗೆ ಮಾತನಾಡಿದ್ದು, #RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೆ ಬೀದಿಗಿಳಿದು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದು ನನ್ನ ಮಾತಲ್ಲ, ಎಲ್ಲ ನಿರ್ದೇಶಕರು, ಸಿನಿಮಾ ಕಲಾವಿದರು ಹೇಳಿಕೊಳ್ಳುವ ಮಾತದು. ತೆಲುಗು ಸಿನಿಮಾ ರಂಗದಲ್ಲಿ ರಾಜಮೌಳಿಯಷ್ಟು ಯಶಸ್ಸನ್ನು ಯಾರೂ ಪಡೆದಿಲ್ಲ.  ರಾಜಮೌಳಿಯ ಯಶಸ್ಸನ್ನು ಸಹಿಸದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರಿದ್ದಾರೆ. ಸರಣಿ ಸೂಪರ್​ ಹಿಟ್​ ಸಿನಿಮಾ ನೀಡಿರುವ ಅವರ ಕೆಲಸವನ್ನು, ಪಾಪ್ಯುಲಾರಿಟಿಯನ್ನು ಕಂಡು ಹೊಟ್ಟೆಕಿಚ್ಚು ಪಡುವವರೇ ಹೆಚ್ಚು. ಅವರ ಆ ಯಶಸ್ಸನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಒಂದು ವೇಳೆ #ಆರ್​ಆರ್​ಆರ್​ ಸಿನಿಮಾ ಸೋತರೆ, ರಸ್ತೆಗಿಳಿದು, ಕೈಯಲ್ಲಿ ಶಾಂಪೇನ್​ ಹಾರಿಸಿ ಸಂಭ್ರಮಿಸುವವರೇ ಹೆಚ್ಚಿದ್ದಾರೆ. ಇದೇ ವಾಸ್ತವ!' ಎಂದು ಹೇಳಿದ್ದಾರೆ.

ಇನ್ನು ಆರ್ ಜಿವಿ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದ್ದು, ತೆಲುಗು ಸಿನಿರಂಗದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp