ವೃತ್ತಿ ಬದುಕಿನ ರಿಫ್ರೆಶ್ ಬಟನ್ ಒತ್ತಲು ನಾನೀಗ ಸಿದ್ದ: ನೇಹಾ ಶೆಟ್ಟಿ

ಪ್ರಸ್ತುತ ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವನಟಿ ನಟಿ ನೇಹಾ ಶೆಟ್ಟಿ ಆದಷ್ಟು ಶೀಘ್ರದಲ್ಲಿ ಟ ಮನೆಗೆ ಮರಳಲು ಹಾತೊರೆಯುತ್ತಿದ್ದಾರೆ. ಆಕೆ ಮುಂಬೈಗೆ ತೆರಳಲು  ಕಾರಣ ಮತ್ತು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಕೋರ್ಸ್ ಅನ್ನು ಏಕೆ ಮುಂದುವರಿಸಿದೆ ಎನ್ನುವುದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.
ನೇಹಾ ಶೆಟ್ಟಿ
ನೇಹಾ ಶೆಟ್ಟಿ

ಪ್ರಸ್ತುತ ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವನಟಿ ನಟಿ ನೇಹಾ ಶೆಟ್ಟಿ ಆದಷ್ಟು ಶೀಘ್ರದಲ್ಲಿ ಟ ಮನೆಗೆ ಮರಳಲು ಹಾತೊರೆಯುತ್ತಿದ್ದಾರೆ. ಆಕೆ ಮುಂಬೈಗೆ ತೆರಳಲು  ಕಾರಣ ಮತ್ತು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಕೋರ್ಸ್ ಅನ್ನು ಏಕೆ ಮುಂದುವರಿಸಿದೆ ಎನ್ನುವುದರ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

"ನಮ್ಮ ಬೆಂಗಳೂರಿಗೆ ಹಿಂತಿರುಗುವುದು ಬಹಳ ಮುಖ್ಯ, ನಮ್ಮ ಹೆತ್ತವರೊಂದಿಗೆ ಸೇರುವುದನ್ನು ಇನ್ನಷ್ಟು ದಿನ ಮುಂದೂಡಲು ಸಾಧ್ಯವಿಲ್ಲ " ಎಂದು ಮುಂಗಾರು ಮಳೆ 2 ನಾಯಕಿ ನೇಹಾ ಶೆಟ್ಟಿ ಹೇಳುತ್ತಾರೆ. ಅವರು ಶುಕ್ರವಾರ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಮಾಡಲಿಂಗ್ ನಿಂದ ನಟಿಯಾಗಿ ಬದಲಾಗಿರುವ ನೇಹಾ ಶೆಟ್ಟಿ ಒಂದೆರಡು ವರ್ಷಗಳ ಹಿಂದೆ ತನ್ನ ನೆಲೆಯನ್ನು ಮುಂಬೈಗೆ ಸ್ಥಳಾಂತರಿಸಿದ್ದರು. ಅವರು ಪ್ರಸ್ತುತ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ.ಮನೆಯಲ್ಲಿರಲು ಮತ್ತು ಪೋಷಕರೊಂದಿಗೆ ಸಮಯ ಕಳೆಯಲು ದಿನಗಣನೆಯಲ್ಲಿದ್ದಾರೆ.“ಮುಂಬೈನಿಂದ ಬೆಂಗಳೂರಿಗೆ ಬರುವುದು ಅತ್ಯಂತ ತುರ್ತಾದ ಅಗತ್ಯವಾಗಿತ್ತು.ಆದರೆ ಇದು ಯೋಗ್ಯವಾಗಿದೆ. ಮುಂಬೈಗೆ ಹೋಲಿಸಿದರೆ ಬೆಂಗಳೂರು ಸುರಕ್ಷಿತವೆನಿಸಿದೆ. ಮನೆಯಿಂದ ದೂರದಲ್ಲಿರುವ ನನ್ನ ಸ್ನೇಹಿತರು ತಮ್ಮ ಹೆತ್ತವರ ಬಗ್ಗೆ ಚಿಂತೆ ಮಾಡುವ ಕಾರಣಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ.

"ಕರ್ನಾಟಕ ಸರ್ಕಾರ ನನ್ನನ್ನು ಕ್ವಾರಂಟೈನ್ ನಲ್ಲಿರಿಸಿದೆ ಎನ್ನುವುದು ನನಗೆ ಖುಷಿಯ ಸಂಗತಿ. ಇಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ನಾನು ನನ್ನ ತಾಯಿಗೆ ಹೇಳುತ್ತಿದ್ದೆ, ‘ನಾನೀಗ ತುಂಬಾ ಸನಿಹದಲ್ಲಿದ್ದೇನೆ. ಆದರೂ ಕೌಂಟ್ ಡೌನ್ ಮಾಡುವುದು ತಪ್ಪಿಲ್ಲ" ನೇಹಾ ಹೇಳಿದ್ದಾರೆ.2019 ರ ಕೊನೆಯ ಆರು ತಿಂಗಳಲ್ಲಿ ನ್ಯೂಯಾರ್ಕ್ ನಲ್ಲಿದ್ದ ನಟಿ ರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಾಲ್ಕು ತಿಂಗಳ ಕೋರ್ಸ್ ಮಾಡಿದ್ದಾರೆ. ರ್ಯಾಂಪ್ ವಾಕ್ ಮಾಡಿ ಮಾಡಲಿಂಗ್ ಕ್ಷೇತ್ರದಲ್ಲಿದ್ದ ನಟಿ 2016 ರಲ್ಲಿ ಶಶಾಂಕ್ ನಿರ್ದೇಶನದ ಗಣೇಶ್ ಅಭಿನಯದ ಮುಂಗಾರು ಮಳೆ 2 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2018 ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಮೆಹಬೂಬಾ  ಮೂಲಕ ಟಾಲಿವುಡ್ ಗೆ ಅವರು ಎಂಟ್ರಿಯಾಗಿದ್ದರು. 

ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಕೋರ್ಸ್ ತೆಗೆದುಕೊಳ್ಳುವ ಯೋಜನೆ ಬಗ್ಗೆ ಮಾತನಾಡಿರುವ ನಟಿ ನಾನು ಬಾಲ್ಯದಿಂದಲೂ ನಟಿಯಾಗಬೇಕೆಂದು ಬಯಸಿದ್ದೆ. ನನ್ನ ಮೈಲಿಗಲ್ಲುಗಳನ್ನು ಗುರುತಿಸಲು ನಾನು ಇಷ್ಟಪಡುತ್ತೇನೆ ಮತ್ತು ನನ್ನ ವೃತ್ತಿಜೀವನದಲ್ಲಿ ಏನನ್ನಾದರೂ ಉತ್ತೇಜನಕಾರಿಯಾಗಿ ಸಾಧಿಸಲು ಬಯಸುತ್ತೇನೆ. ನಟನೆ ನನ್ನ ಮನಸ್ಸಿನಲ್ಲಿ ಇದ್ದರೂ ನಾನೊಬ್ಬ ಮಾಡಲ್ ಹಾಗಾಗಿ ತಕ್ಷಣಕ್ಕೆ ನನಗೆ  ನಟನಾ ಕೋರ್ಸ್ ಮಾಡಲು ಸಾಧ್ಯವಾಗಲಿಲ್ಲ, ಅದನ್ನು ನಾನು ಈಗ ಪೂರ್ಣಗೊಳಿಸಿದ್ದೇನೆ.  ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ ನನಗೆ ಹೊಸ ಅನುಭವವನ್ನು ನೀಡಿತು. ಇನ್ಸ್ಟಿಟ್ಯೂಟ್ ಅಲ್ಪಾವಧಿಯಲ್ಲಿ ನನಗೆ ಬಹಳಷ್ಟು ಕಲಿಸಿದೆ, ಮತ್ತು ನಾನು ಹಾಲಿವುಡ್ ನಲ್ಲಿ ನಟಿಯಾಗಿ ಕೆಲಸ ಮಾಡಿದ ಶಿಕ್ಷಕರನ್ನು ಭೇಟಿಯಾಗಬೇಕಾಯಿತು. ಇದು ನನ್ನ ನಟನೆಯ ವಿಧಾನವನ್ನು ಸುಧಾರಿಸಲು ಅನುವು ಮಾಡಿಕೊಟ್ಟಿತು. ನನಗೆ ಈಗ ಸರಿಯಾದ  ಬ್ಯಾಲೆನ್ಸ್ ನ ಅರಿವಿದೆ.  ಇದು ಉತ್ತಮ ಕಲಿಕೆಯ ಅನುಭವವಾಗಿತ್ತು, ”ಎಂದು ಅವರು ಹೇಳುತ್ತಾರೆ.

“ನಾನು ಯಾವಾಗಲೂ ಯಾವುದೇ ರೀತಿಯಲ್ಲಿ ಚಿತ್ರರಂಗದ ಭಾಗವಾಗಿರಬೇಕು. ನಾನು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಲು ತೀರ್ಮಾನಿಸಿದ್ದೇನೆ"ಅವರು ಮುಂಬೈಗೆ ಸ್ಥಳಾಂತರಗೊಳ್ಳಲು ತೀರ್ಮಾನಿಸಿದ್ದು ಮುಂಬೈನಲ್ಲಿ ಉಳಿದುಕೊಳ್ಳುವುದು ನನ್ನ ಬಾಲ್ಯದ ಕನಸಿನಲ್ಲಿ ಒಂದಾಗಿತ್ತು. ನಾನು ಕನಸು ಕಂಡ ರೀತಿಯಲ್ಲಿಯೇ ಬದುಕಲು ಬಯಸುತ್ತೇನೆ.

“ನಾನು ಮನೋವಿಜ್ಞಾನವನ್ನು ಅಧ್ಯಯನ ಮಾಡಲು ಇಷ್ಟಪಡುತ್ತೇನೆ. ನಾನು ಆನ್‌ಲೈನ್‌ನಲ್ಲಿ ಕೆಲವು ಕೋರ್ಸ್‌ಗಳನ್ನು ಕೂಡ ಮಾಡಿದ್ದೇನೆ. ನಾನು ನೃತ್ಯವನ್ನು ಇಷ್ಟಪಡುತ್ತಿರುವುದರಿಂದ, ನಾನು ಒಂದೆರಡು ಸ್ನೇಹಿತರೊಂದಿಗೆ ಆನ್‌ಲೈನ್ ಯೋಗ ತರಗತಿಗಳಿಗೆ ಸಹ ಸೇರ್ಪಡೆಗೊಂಡಿದ್ದೆ. ನಾನು ಕಿರುಚಿತ್ರ ಮಾಡಲು ಸಹ ಪ್ರಯತ್ನಿಸಿದೆ” ನೇಹಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com