ತೆರೆಮರೆಗೆ ಸರಿದ 'ಫ್ಯಾಮಿಲಿ ಟಾಕೀಸ್' ಖ್ಯಾತಿಯ ಮೈಸೂರಿನ ಶಾಂತಲಾ ಥಿಯೇಟರ್!

ಕೊರೋನಾವೈರಸ್ ಹಾವಳಿ ತಡೆಯಲಾಗದೆ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಈ ನಡುವೆಯೇ ಮೈಸೂರಿನ ಎರಡು ಪ್ರಮುಖ ಚಿತ್ರಮಂದಿರಗಳು ಶಾಶ್ವತವಾಗಿ ತೆರೆಮರೆಗೆ ಸರಿಯಲಿದೆ. ಮೈಸೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಜನಸಂದಣಿಯ 'ಫ್ಯಾಮಿಲಿ ಟಾಕೀಸ್' ಎಂದೇ ಕರೆಯಲ್ಪಡುತ್ತಿದ್ದ ಶಾಂತಾಲಾ ಟಾಕೀಸ್ ಶಾವತವಾಗಿ ಮುಚ್ಚಿದೆ. ಅಲ್ಲದೆ ಇನ್ನೊಂದು ಪ್ರಮುಖ ಚಿತ್ರಮಂದಿ
ಶಾಂತಾಲಾ ಥಿಯೇಟರ್
ಶಾಂತಾಲಾ ಥಿಯೇಟರ್

ಮೈಸೂರು: ಕೊರೋನಾವೈರಸ್ ಹಾವಳಿ ತಡೆಯಲಾಗದೆ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಈ ನಡುವೆಯೇ ಮೈಸೂರಿನ ಎರಡು ಪ್ರಮುಖ ಚಿತ್ರಮಂದಿರಗಳು ಶಾಶ್ವತವಾಗಿ ತೆರೆಮರೆಗೆ ಸರಿಯಲಿದೆ. ಮೈಸೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ಜನಸಂದಣಿಯ 'ಫ್ಯಾಮಿಲಿ ಟಾಕೀಸ್' ಎಂದೇ ಕರೆಯಲ್ಪಡುತ್ತಿದ್ದ ಶಾಂತಾಲಾ ಟಾಕೀಸ್ ಶಾವತವಾಗಿ ಮುಚ್ಚಿದೆ. ಅಲ್ಲದೆ ಇನ್ನೊಂದು ಪ್ರಮುಖ ಚಿತ್ರಮಂದಿರ ಪದ್ಮಾ ಚಿತ್ರಮಂದಿರ ಸಹ ಮುಚ್ಚಲು ಸಿದ್ದವಾಗಿದೆ.

1976 ರಲ್ಲಿ ಪ್ರಾರಂಭವಾಗಿದ್ದ ಶಾಂತಲಾ ಟಾಕೀಸ್ ಚಿತ್ರ ನಿರ್ದೇಶಕರು ಹಾಗೂ ಪ್ರೇಕ್ಷಕರಿಗೆ ಮೆಚ್ಚಿನ ಟಾಕೀಸ್ ಆಗಿತ್ತು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಶಂಕರ್ ನಾಗ್ ಮತ್ತು ಹೊಸ ಯುಗದ ನಾಯಕರಾದ ಸುದೀಪ್, ದರ್ಶನ್ ಮತ್ತು ಯಶ್ ಅಭಿನಯದ ಹಲವಾರು  ಯಶಸ್ವಿ ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗಿತ್ತು. ಅನೇಕ ಪ್ರಮುಖ ನಿರ್ದೇಶಕರು ಮತ್ತು ಪ್ರಮುಖ ನಟರು ಈ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ವೀಕ್ಷಿಸಿದ್ದರು. 

ಲಾಕ್‌ಡೌನ್‌ನೊಂದಿಗೆ, ಇತರ ಹಲವು ಕ್ಷೇತ್ರಗಳಂತೆ, ಚಿತ್ರಮಂದಿರಗಳ ಭವಿಷ್ಯ ಸಹ ಮಂಕಾಗಿದೆ. . ಅಪಾರ ಆರ್ಥಿಕ ಒತ್ತಡದಲ್ಲಿ, ಮಾಲೀಕರು 44 ವರ್ಷಗಳ ಕಾಲದ ನಂತರ ಚಿತ್ರಮಂದಿರ ಮುಚ್ಚಲು ತೀರ್ಮಾನಿಸಿದ್ದಾರೆ.

ಸ್ಥಳೀಯರಾದ ಮುನಿಯಪ್ಪ (68) ಅವರು 'ಶುಭಮಂಗಲ', 'ಬಂಗಾರದ ಪಂಜಾರ' ಮತ್ತು ಇತರ ಅನೇಕ ಚಿತ್ರಗಳನ್ನು ಸರದಿಯಲ್ಲಿ ನಿಂತು ಟಿಕೆಟ್ ಪಡೆದು ನೋಡಿದ್ದಿದೆ ಎಂದು ನೆನಪಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಕಾಲೇಜು ದಿನಗಳನ್ನು ಈ ನಗರದಲ್ಲಿ ಕಳೆದಿದ್ದರು ಮತ್ತು ಸಿನೆಮಾ ನೋಡಲು ಈ ಚಿತ್ರಮಂದಿರಕ್ಕೆ ತೆರಳುತ್ತಿದ್ದರು.  ಅವರು ನಿರ್ದೇಶಿಸಿದ ಹಲವಾರು ಚಲನಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ 

ಶಾಶ್ವತವಾಗಿ ಮುಚ್ಚಲಿದೆ ಪದ್ಮಾ ಟಾಕೀಸ್ 

ಕನ್ನಡ ಸಿನಿಮಾರಂಗ ಚಟುವಟಿಕೆ ಪ್ರಾರಂಬವಾದ ದಿನಗಳಲ್ಲಿ ತೆರೆದಿದ್ದ ಮೈಸೂರಿನ ಪದ್ಮಾ ಚಿತ್ರಮಂದಿರ ಸಹ ಇನ್ನು ನೆನಪು ಮಾತ್ರ. ವರನಟ ಡಾ. ರಾಜ್ ಕುಮಾರ್ ಸೇರಿ ಇಂದಿನ ದರ್ಶನ್, ಸುದೀಪ್ ಅವರುಗಳ ಯಶಸ್ವಿ ಚಿತ್ರ ಪ್ರದರ್ಶನಗಳಿಗೆ ಈ ಚಿತ್ರಮಂದಿರ ಸಾಕ್ಷಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com