'ಮಾಯಾಬಜಾರ್' ಪೈರಸಿ ಆರೋಪ: ವೆಬ್ ಸೈಟ್ ವಿರುದ್ಧ ದೂರು

ಸ್ಯಾಂಡಲ್ ವುಡ್ ಚಿತ್ರ ಮಾಯಾಬಜಾರ್ ಬಿಡುಗಡೆಗೊಂಡ ಒಂದೇ ದಿನಕ್ಕೆ ಪೈರಸಿ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರ ಮಾಯಾಬಜಾರ್ ಬಿಡುಗಡೆಗೊಂಡ ಒಂದೇ ದಿನಕ್ಕೆ ಪೈರಸಿ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡ ರಾಕರ್ಸ್ ವೆಬ್ ಸೈಟ್ ವಿರುದ್ಧ ಸ್ವಾಮಿ ಎಂಬುವವರು ಚಿತ್ರದ ಪೈರಸಿ ಕುರಿತು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಫೆ 29ರಂದು ದೂರು ದಾಖಲಿಸಿದ್ದಾರೆ.

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಚಿತ್ರ ಮಾಯಾ ಬಜಾರ್ ಆಗಿದ್ದು, ಚಿತ್ರ ಬಿಡುಗಡೆಗೊಂಡ ಒಂದೇ ದಿನದಲ್ಲೇ ಪೈರಸಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ‌.

ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮಾಯಾಬಜಾರ್ ಚಿತ್ರವು ಫೆ 28ರಂದು ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಅಚ್ಚುತ್ ಕುಮಾರ್, ಪ್ರಕಾಶ್ ರಾಜ್, ಚೈತ್ರ ರಾವ್ ಚಿತ್ರದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com