ಕಾರ್ಮಿಕ ದಿನಾಚರಣೆಗೆ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!

ಕಳೆದ ವರ್ಷ ಸುದೀಪ್ ನಟನೆಯ 'ಪೈಲ್ವಾನ್, ಸೈರಾ ನರಸಿಂಹ ರೆಡ್ಡಿ, ದಬಾಂಗ್ 3' ಮುಂತಾದ ಸಿನಿಮಾಗಳು ರಿಲೀಸ್ ಆಗಿದ್ದವು. ವಿಧ ವಿಧವಾದ ಪಾತ್ರದಲ್ಲಿ ಸುದೀಪ್ ಅಭಿಮಾನಿಗಳನ್ನು ರಂಜಿಸಿದ್ದರು, ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡರು.
ಕೋಟಿಗೊಬ್ಬ-3 ಪೋಸ್ಟರ್
ಕೋಟಿಗೊಬ್ಬ-3 ಪೋಸ್ಟರ್

ಕಳೆದ ವರ್ಷ ಸುದೀಪ್ ನಟನೆಯ 'ಪೈಲ್ವಾನ್, ಸೈರಾ ನರಸಿಂಹ ರೆಡ್ಡಿ, ದಬಾಂಗ್ 3' ಮುಂತಾದ ಸಿನಿಮಾಗಳು ರಿಲೀಸ್ ಆಗಿದ್ದವು.

ವಿಧ ವಿಧವಾದ ಪಾತ್ರದಲ್ಲಿ ಸುದೀಪ್ ಅಭಿಮಾನಿಗಳನ್ನು ರಂಜಿಸಿದ್ದರು, ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡರು. ಈ ವರ್ಷ ಕೂಡ ಕಿಚ್ಚನನ್ನು ತೆರೆ ಮೇಲೆ ನೋಡೋದಿಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾದ ಬಗ್ಗೆ ಕಾಲಕಾಲಕ್ಕೆ ಅಪ್‌ಡೇಟ್ಸ್ ಸಿಗುತ್ತಿದೆ. ಇತ್ತೀಚೆಗಷ್ಟೇ ಟೀಸರ್ ರಿಲೀಸ್ ಮಾಡಿದ್ದ ಈ ಕೋಟಿಗೊಬ್ಬ ತಂಡ, ಸಿನಿಮಾ ಯಾವಾಗ ರಿಲೀಸ್ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ಈಗ ಈ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಸಿಕ್ಕಿದೆ.

'ಕೋಟಿಗೊಬ್ಬ 3' ಸಿನಿಮಾದ ನಿರ್ದೇಶಕ ಶಿವಕಾರ್ತಿಕ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಮೇ 1ಕ್ಕೆ 'ಕೋಟಿಗೊಬ್ಬ 3' ಚಿತ್ರವನ್ನು ತೆರೆ ಮೇಲೆ ತರುವ ಪ್ಲ್ಯಾನ್‌ನಲ್ಲಿದ್ದಾರಂತೆ. ಅಂದು ಕಾರ್ಮಿಕರ ದಿನ ಎನ್ನೋದನ್ನು ನೆನಪಿಡಬೇಕು.

'ಅಭಿನಯ ಚಕ್ರವರ್ತಿ' ಅಭಿನಯದ 'ಮಾಣಿಕ್ಯ' ಸಿನಿಮಾ ಕೂಡ ಮೇ 1ರಂದು ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಹೀಗಾಗಿ ಇಂತಹ ಯಶಸ್ಸನ್ನು ಮರುಕಳಿಸುವ ಸಲುವಾಗಿ ಮೇ 1ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆಯಂತೆ. ಏಪ್ರಿಲ್ 10ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ ಎಂಬ ಸುದ್ದಿ ಕೂಡ ಹರಡಿತ್ತು. ಆದರೆ ಮೇ 1ಕ್ಕೆ ಸಿನಿಮಾ ರಿಲೀಸ್ ಆಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com