'ಶಿವಪ್ಪ'ನಿಗೆ ಬಹುಭಾಷಾ ಬೆಡಗಿ ಅಂಜಲಿ ಜೋಡಿ!

ವಿಜಯ್ ಮಿಲ್ಟನ್ ನಿರ್ದೇಶನದ ಮುಂದಿನ ಚಿತ್ರ "ಶಿವಪ್ಪ"ಕ್ಕಾಗಿ ದಕ್ಷಿಣ ಭಾರತದ ನಟಿ ಅಂಜಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಲಿದ್ದಾರೆ.

Published: 21st November 2020 11:07 AM  |   Last Updated: 21st November 2020 12:26 PM   |  A+A-


Anjali

ಅಂಜಲಿ

Posted By : Raghavendra Adiga
Source : The New Indian Express

ವಿಜಯ್ ಮಿಲ್ಟನ್ ನಿರ್ದೇಶನದ ಮುಂದಿನ ಚಿತ್ರ "ಶಿವಪ್ಪ"ಕ್ಕಾಗಿ ದಕ್ಷಿಣ ಭಾರತದ ನಟಿ ಅಂಜಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಲಿದ್ದಾರೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಈ ವಿಷಯವನ್ನು ದೃಢಪಡಿಸಿದ್ದು ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ ಈ ನಟ ಈ ಹಿಂದೆ"ಹೊಂಗನಸು: ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

ಪವನ್ ಒಡೆಯರ್ ಅವರ "ರಣವಿಕ್ರಮ"ದಲ್ಲಿ ನಟ ಪುನೀತ್ ಗೆ ಜೋಡಿಯಾಗಿದ್ದ ಅಂಜಲಿ ಈಗ ಶಿವಣ್ಣ ಎದುರು ಅಭಿನಯಿಸುತ್ತಿದ್ದಾರೆ. 

ಅಂಜಲಿ ಪಾಲಿಗಿದು ಸ್ಯಾಂಡಲ್ ವುಡ್ ನ ಮೂರನೇ ಚಿತ್ರವಾಗಿದೆ. . "ಎಲ್ಲಾ ಯೋಜನೆಯ ಪ್ರಕಾರ ನಡೆದರೆ ನವೆಂಬರ್ 23 ರಿಂದ ಪ್ರಾರಂಭವಾಗುವ ಮೊದಲ ಶೆಡ್ಯೂಲ್ ನಲ್ಲಿ ಅಂಜಲಿ ಟೀಂ ಗೆ ಜತೆಯಾಗಲಿದ್ದಾರೆ." ಎಂದು ಕೃಷ್ಣ ಸಾರ್ಥಕ್ ಹೇಳುತ್ತಾರೆ.

 

"ಶಿವಪ್ಪ" ಪಾತ್ರವರ್ಗದ ಭಾಗವಾಗಿ ಧನಂಜಯ್, ಪೃಥ್ವಿ ಅಂಬರ್, ಶಶಿಕುಮಾರ್ ಸೇರಿದಂತೆ ಖ್ಯಾತ ನಟ ನಟಿಯರಿದ್ದಾರೆ. ಇವರಲ್ಲದೆ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಸಹ ಅಭಿನಯಿಸುತ್ತಿದ್ದಾರೆ. "ರತ್ನನ್ ಪ್ರಪಂಚ"ದೊಡನೆ ಗೆ ಐದು ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಉಮಾಶ್ರೀ ಈಗ ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ. 

ಚಿತ್ರ ನಿರ್ಮಾಪಕರ ಪ್ರಕಾರ "ಶಿವಪ್ಪ" ದಲ್ಲಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಆಕ್ಷನ್ ಪ್ಯಾಕ್ಡ್ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರನ್ನು ಮೂರು ಲುಕ್ ಗಳಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತವಿದೆ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp