ಕೊನೆಯ ಹಂತದ ಚಿತ್ರೀಕರಣದಲ್ಲಿ ಕೆಜಿಎಫ್ ಚಾಪ್ಟರ್ 2, 'ಅಧೀರ'ನ ಚಿತ್ರೀಕರಣ ಒಂದೇ ಬಾಕಿ!

ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಚಿತ್ರರಂಗ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಸಿನಿಮಾಗಳ ಶೂಟಿಂಗ್ ಪ್ರಾರಂಭವಾಗುತ್ತಿದ್ದು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ.

Published: 25th November 2020 11:58 AM  |   Last Updated: 25th November 2020 12:21 PM   |  A+A-


Yash Sanjay-Dutt

ಯಶ್-ಸಂಜಯ್ ದತ್

Posted By : Vishwanath S
Source : The New Indian Express

ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಚಿತ್ರರಂಗ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಸಿನಿಮಾಗಳ ಶೂಟಿಂಗ್ ಪ್ರಾರಂಭವಾಗುತ್ತಿದ್ದು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. 

ಅಂತಿಮ ಶೂಟಿಂಗ್ ವೇಳಾಪಟ್ಟಿ ಈ ವಾರ ಪ್ರಾರಂಭವಾಗಲಿದ್ದು, ಡಿಸೆಂಬರ್ ಮಧ್ಯದವರೆಗೆ ಮುಂದುವರಿಯುತ್ತದೆ. ಚಿತ್ರದ ಶೂಟಿಂಗ್ ಆಗಸ್ಟ್ 26ರಿಂದ ಪ್ರಾರಂಭವಾಗಿದ್ದು ಅಕ್ಟೋಬರ್ 8 ರಿಂದ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಅವರ ತಂಡ ಈಗ ಹೈದರಾಬಾದ್‌ಗೆ ಪ್ರಯಾಣಿಸಲಿದ್ದು, ಕೆಲವು ನಿರ್ಣಾಯಕ ಸನ್ನಿವೇಶಗಳನ್ನು ಚಿತ್ರೀಕರಿಸಲಿದ್ದಾರೆ.

ಮೂಲಗಳ ಪ್ರಕಾರ, ಉಳಿದ ಭಾಗಗಳನ್ನು ಪೂರ್ಣಗೊಳಿಸಲು ಸಂಜಯ್ ದತ್ ಡಿಸೆಂಬರ್ 6 ರಂದು ಸೆಟ್‌ಗೆ ಸೇರುವ ಸಾಧ್ಯತೆ ಇದೆ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಅಧ್ಯಾಯ 1 ಕನ್ನಡ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಯಶ್ ಭಾರತದಾದ್ಯಂತ ಮನೆ ಮತಾಗಿದ್ದರು. ಇದೀಗ ಅಧ್ಯಾಯ 2 ಅವರಿಗೆ ಏನನ್ನು ತರುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಎರಡು ವರ್ಷಗಳಿಂದ ಕಾಯುತ್ತಿದ್ದಾರೆ.

"ಸಾಂಕ್ರಾಮಿಕ ರೋಗದಿಂದ ಉಂಟಾದ ದೀರ್ಘ ವಿರಾಮದ ನಂತರ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಜಿಎಫ್ ಅಧ್ಯಾಯ 2 ರ ಚಿತ್ರೀಕರಣವು ಪೂರ್ಣಗೊಳ್ಳಲು ಹತ್ತಿರವಾಗುತ್ತಿದ್ದು ರಾಕಿಂಗ್ ಸ್ಟಾರ್ ಸೇರಿದಂತೆ ಎಲ್ಲರೂ ಉತ್ಸುಕರಾಗಿದ್ದಾರೆ  ಎಂದು ಮೂಲವೊಂದು ತಿಳಿಸಿದೆ. 

ವಿಜಯ್ ಕಿರಗಂದೂರ್ ನಿರ್ಮಿಸುತ್ತಿರುವ ದೊಡ್ಡ ಬಜೆಟ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಕಾಶ್ ರಾಜ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಬಿ ಸುರೇಶ್ ಮತ್ತು ಟಿ.ಎಸ್.ನಾಗಭಾರಣ ಪ್ರಮುಖ ಪಾತ್ರಗಳಾಗಿದ್ದಾರೆ.

ಕೆಜಿಎಫ್ ಅಧ್ಯಾಯ 2 ಚಿತ್ರಕ್ಕೆ ರವಿ ಬಸ್ರೂರ್ ಮತ್ತು ಭುವನಗೌಡರು ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ. ಮಾಸ್ ಎಂಟರ್‌ಟೈನರ್ ಅನ್ನು ಕನ್ನಡದ ಕೆಆರ್‌ಜಿ ಸ್ಟುಡಿಯೋಸ್, ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮತ್ತು ಎಎ ಫಿಲ್ಮ್ಸ್, ತೆಲುಗಿನ ವರಾಹಿ ಚಲನಾ ಚಿತ್ರಂ ಮತ್ತು ತಮಿಳಿನ ವಿಶಾಲ್ ಫಿಲ್ಮ್ ಫ್ಯಾಕ್ಟರಿ ವಿತರಿಸುತ್ತಿದೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp