ಅಂತೂ ಇಂತೂ ಬಂತು ಶೋ ಟೈಂ: ನಾಳೆ ಥಿಯೇಟರ್ ಓಪನ್, ಸಿನಿಪ್ರಿಯರು ಏನಂತಾರೆ?

ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಮುಚ್ಚಿದ್ದ ಸಿನೆಮಾ ಥಿಯೇಟರ್ ಗಳು ಕೊನೆಗೂ ನಾಳೆ(ಅ.15ಕ್ಕೆ) ಪ್ರದರ್ಶನಕ್ಕೆ ತೆರೆಯುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಮುಚ್ಚಿದ್ದ ಸಿನೆಮಾ ಥಿಯೇಟರ್ ಗಳು ಕೊನೆಗೂ ನಾಳೆ(ಅ.15ಕ್ಕೆ) ತೆರೆಯುತ್ತಿವೆ.

ಲಾಕ್ ಡೌನ್ ಮುಗಿದು ಒಂದೊಂದೇ ವ್ಯವಸ್ಥೆಗಳನ್ನು ಸಡಿಲ ಮಾಡುತ್ತಾ ಬಂದಿದ್ದ ಸರ್ಕಾರ ಇಷ್ಟು ದಿನ ಸಿನೆಮಾ ಥಿಯೇಟರ್ ಗಳ ತೆರೆಯುವಿಕೆಗೆ ಅನುಮತಿ ಕೊಟ್ಟಿರಲಿಲ್ಲ.

ಕೊನೆಗೂ ಸಿನಿಪ್ರಿಯರು ಥಿಯೇಟರ್ ಗೆ ಹೋಗಿ ಸಿನೆಮಾ ನೋಡಬೇಕೆಂಬ ಕನಸು ನನಸಾಗುವ ಸಮಯ ಬಂದಿದೆ.
ಇದೀಗ ಹಸಿರು ನಿಶಾನೆ ತೋರಿಸಿದ್ದು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಶೇಕಡಾ 50ರಷ್ಟು ಮಾತ್ರ ಪ್ರೇಕ್ಷಕರು ಹಾಲ್ ನೊಳಗೆ ಇರಬೇಕು. ಹಾಲ್ ನ ಹೊರಗೆ ಕೆಫೆಟೇರಿಯಾದಲ್ಲಿ ಪ್ಯಾಕಿಂಗ್ ಆಹಾರಗಳನ್ನು ಮಾತ್ರ ಮಾರಾಟ ಮಾಡಬಹುದು, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ವ್ಯವಸ್ಥೆಯಿರಬೇಕು.

ಕೊನೆಗೂ ಜನರು ಸಹಜ ಜೀವನದತ್ತ ಮರಳುತ್ತಿರುವುದು ಖುಷಿ ತಂದಿದೆ. ಸಿನೆಮಾ ಥಿಯೇಟರ್ ಗೆ ಪುನಃ ಹೋಗಿ ಹೊಸ ಸಿನೆಮಾಗಳ ವಿಮರ್ಶೆ ಬರೆಯುವ ಬಗ್ಗೆ ನನ್ನಲ್ಲಿ ಮಿಶ್ರ ಭಾವನೆ ಬರುತ್ತಿದೆ. ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಇತ್ತೀಚೆಗೆ ದೊಡ್ಡ ಚಿತ್ರಗಳು ಬಿಡುಗಡೆಯಾಗಿರುವುದರಿಂದ ಮನೆಯಲ್ಲಿ ಕುಳಿತು ನೋಡಬಹುದಾಗಿತ್ತು. ಸಿನೆಮಾ ನೋಡುವಾಗ ಮನೆಯಲ್ಲಿ ಕುಳಿತು ನಮ್ಮಿಷ್ಟದ ತಿನಿಸು ತಿನ್ನಬಹುದಾಗಿತ್ತು, ಬೀರ್ ಕುಡಿಯಬಹುದಾಗಿತ್ತು.

ಆದರೆ ಇಷ್ಟು ತಿಂಗಳುಗಳ ನಂತರ ಸಿನೆಮಾ ಥಿಯೇಟರ್ ತೆರೆದಿರುವಾಗ ಜನರು ಹಿಂದಿನಂತೆಯೇ ಸಿನೆಮಾ ನೋಡಲು ಬರುತ್ತಾರೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಕಾಲೇಜು ಯುವಕ-ಯುವತಿಯರು,ಪ್ರೇಮಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಿನೆಮಾ ನೋಡಲು ಬರಲು ಇಷ್ಟಪಡುತ್ತಾರೆಯೇ ಎಂದು ಹೃದಯ ರಂಜನ್ ಎಂಬ ಸಿನೆಮಾ ವಿಮರ್ಶಕ ಕೇಳುತ್ತಾರೆ.

ಈ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್ ಗಳು, ಥಿಯೇಟರ್ ಗಳು ಯಾವ ರೀತಿ ಸಿದ್ದತೆ ಮಾಡಿಕೊಂಡಿವೆ ಎಂದು ನೋಡಿದಾಗ ಹತ್ತು ಹಲವು ವಿಷಯಗಳು ತಿಳಿದುಬಂದವು. ಪಿವಿಆರ್ ಸಿನೆಮಾಸ್, ಸಾಮಾಜಿಕ ಅಂತರ ಕಾಯ್ದುಕೊಂಡು ಸೀಟುಗಳನ್ನು ವ್ಯವಸ್ಥೆ ಮಾಡಿದೆ. ಇಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಪಿವಿಆರ್ ಡೆಟ್ಟಾಲ್ ಜೊತೆ ಸಹಯೋಗ ಮಾಡಿಕೊಂಡು ಜನರ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಂಡಿದೆ ಎನ್ನುತ್ತಾರೆ ಸಿಇಒ ಗೌತಮ್ ದತ್ತಾ.

ಈ ಬಗ್ಗೆ ನಟಿ ಸುಮನ್ ನಗರ್ ಕರ್ ಮಾತನಾಡಿ, ನಾನು ಸದ್ಯ ಥಿಯೇಟರ್ ಗೆ ಹೋಗುವುದಿಲ್ಲ. ಅಲ್ಲಿನ ಸುರಕ್ಷತೆ  ನೋಡಿಕೊಂಡು ಕೆಲವು ದಿನಗಳ ನಂತರ ಹೋಗುತ್ತೇನೆ, ಥಿಯೇಟರ್ ಗಳಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಅದು ನಾಲ್ಕು ಗೋಡೆಯ ಮಧ್ಯೆ ಬಂದ್ ಆಗಿರುವ ಪ್ರದೇಶ ಹಾಗಾಗಿ ಸ್ವಲ್ಪ ದಿನ ಕಳೆದ ನಂತರ ಕುಟುಂಬದವರ ಜೊತೆಗೆ ಹೋಗುತ್ತೇವೆ ಎಂದರು.

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಕಟ್ಟಾ ಅಭಿಮಾನಿಯಾಗಿರುವ ನಗರದ ನಿತೀಶ್ ಕುಮಾರ್, ಆರೋಗ್ಯದ ಮುಂದೆ ಬೇರೆಲ್ಲಾ ವಿಷಯಗಳು ನಗಣ್ಯವಾಗುತ್ತದೆ. ಕೋವಿಡ್ ಪ್ರಕರಣಗಳು ಇಳಿಕೆ ಕಂಡ ನಂತರ ಥಿಯೇಟರ್ ಗೆ ಹೋಗುತ್ತೇನೆ ಎಂದರು.

ಶಾರೂಕ್ ಖಾನ್ ಫ್ಯಾನ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ದೀಪಕ್ ಕುಲಕರ್ಣಿ, ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ತೆರೆಯದಿದ್ದರೆ ಚೆನ್ನಾಗಿರುತ್ತಿತ್ತು. ಅಭಿಮಾನಿಯಾಗಿ ಶಾರೂಕ್ ಖಾನ್ ಅವರನ್ನು ತೆರೆಯ ಮೇಲೆ ನೋಡಲು ಇಚ್ಛೆ ಪಡುತ್ತೇವೆ ಆದರೆ ಕೋವಿಡ್ ಕಡಿಮೆಯಾಗುವವರೆಗೆ ಲಸಿಕೆ ಬರುವವರೆಗೆ ಎಚ್ಚರಿಕೆಯಿಂದಿರುವುದು ಒಳಿತು ಎಂದರು.

ನಾಳೆ ಥಿಯೇಟರ್ ತೆರೆದ ಮೇಲೆ ಕನ್ನಡದಲ್ಲಿ ಶಿವಾರ್ಜುನ, ಶಿವಾಜಿ ಸುರತ್ಕಲ್, ಲವ್ ಮಾಕ್ಟೇಲ್, ಹಿಂದಿಯಲ್ಲಿ ಪಿಎಂ ನರೇಂದ್ರ ಮೋದಿ ತಪ್ಪಡ್, ಶುಭ ಮಂಗಲ್ ಜ್ಯಾದ ಸಾವಧಾನ್, ಇಂಗ್ಲಿಷ್ ನಲ್ಲಿ ಫೋರ್ಡ್ ವರ್ಸಸ್ ಫೆರ್ರಾರಿ ನೈವ್ಸ್ ಔಟ್, ಲಯನ್ ಕಿಂಗ್ ಮತ್ತೆ ಪ್ರದರ್ಶನ ಕಾಣಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com