ಹಳೆ ವಾಟ್ಸಪ್ ಡಿಲೀಟ್‍, ಹೊಸದನ್ನು ಇನ್ಸ್ಟಾಲ್ ಮಾಡಿದ ನಟಿ ರಾಗಿಣಿ: ಸಾಕ್ಷ್ಯ ನಾಶಕ್ಕೆ ಯತ್ನ? 

ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಕಚೇರಿಗೆ ಹಾಜರಾಗಿರುವ ನಟಿ ರಾಗಿಣಿ ದ್ವಿವೇದಿಯ ಹಲವು ನಡೆ ಅಧಿಕಾರಿಗಳ ಅನುಮಾನಕ್ಕೆ ಎಡೆಮಾಡಿದೆ. ರಾಗಿಣಿ ತನ್ನ ಹಳೆಯ ವಾಟ್ಸಪ್ ಅನ್ನು ಡಿಲೀಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಬೆಂಗಳೂರು: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಕಚೇರಿಗೆ ಹಾಜರಾಗಿರುವ ನಟಿ ರಾಗಿಣಿ ದ್ವಿವೇದಿಯ ಹಲವು ನಡೆ ಅಧಿಕಾರಿಗಳ ಅನುಮಾನಕ್ಕೆ ಎಡೆಮಾಡಿದೆ. ರಾಗಿಣಿ ತನ್ನ ಹಳೆಯ ವಾಟ್ಸಪ್ ಅನ್ನು ಡಿಲೀಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. 

ನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬಳಿಕ ನಟಿ ರಾಗಿಣಿ ವಾಟ್ಸಪ್ ಚಾಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಾಟ್ಸಪ್ ಅಪ್ ಡಿಲೀಟ್ ಮಾಡಿ ಹೊಸ ಮೊಬೈಲ್ ಖರೀದಿಸಿ ವಾಟ್ಸಾಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ವಾಟ್ಸಪ್ ಚಾಟ್ ಸಿಗದ್ದಂತೆ ಮಾಡಿದ್ದಾರೆ.

ರಾಗಿಣಿ ನಡೆ ಅನುಮಾನ ಮೂಡಿಸಿದ ಹಿನ್ನಲೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಅಧಿಕಾರಿಗಳು ರಾಗಿಣಿಗೆ ಸೇರಿದ 4 ಮೊಬೈಲ್, 2 ಲ್ಯಾಪ್ ಟಾಪ್ ಅನ್ನು ಸೀಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com