'ಒಡೆಲ ರೈಲ್ವೆ ಸ್ಟೇಷನ್'ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ವಶಿಷ್ಠ ಸಿಂಹ
ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ವಶಿಷ್ಟ ಎನ್ ಸಿಂಹ ಅವರು ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
Published: 11th September 2020 11:15 AM | Last Updated: 11th September 2020 11:15 AM | A+A A-

ವಷಿಷ್ಠ ಸಿಂಹ
ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ವಶಿಷ್ಟ ಎನ್ ಸಿಂಹ ಅವರು ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ತೆಲುಗಿನಲ್ಲಿ ಚೊಚ್ಚಲ ನಿರ್ದೇಶಕ ಒಡೆಲ ರೈಲ್ವೆ ಸ್ಟೇಷನ್ ಚಿತ್ರದಲ್ಲಿ ವಶಿಷ್ಟ ಅವರು ನಾಯಕನಾಗಿ ಅಭಿನಯಿಸುತ್ತಿದ್ದ ಶೂಟಿಂಗ್ ಆರಂಭವಾಗಿದೆ. ರಚ ಮತ್ತು ಬೆಂಗಾಲ್ ಟೈಗರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಪತ್ ನಂದಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಶ್ರೀ ಸತ್ಯಸಾಯಿ ಆಟ್ಸ್ಸ್ ಬ್ಯಾನರ್ ನಡಿ ಕೆ ಕೆ ರಾಧಾಮೋಹನ್ ಚಿತ್ರ ನಿರ್ಮಿಸುತ್ತಿದ್ದು ಅನೂಪ್ ರೌಬೆನ್ಸ್ ಸಂಗೀತ, ಸೌಂದರ ರಾಜನ್ ಛಾಯಾಗ್ರಹಣ ಚಿತ್ರಕ್ಕಿದೆ. ವಶಿಷ್ಟ ಅವರಿಗೆ ಹೆಬಾ ಪಟೇಲ್ ನಾಯಕಿಯಾಗಿದ್ದಾರೆ.
ಆರಂಭದಲ್ಲಿ ತೆಲುಗು ಸಿನೆಮಾದ ರಿಮೇಕ್ ಚಿತ್ರವನ್ನು ಕನ್ನಡಕ್ಕೆ ಮಾಡೋಣ ಎಂದು ನಿರ್ದೇಶಕರು ನನ್ನನ್ನು ಸಂಪರ್ಕಿಸಿದರು. ಅದನ್ನು ನಾನು ನಿರಾಕರಿಸಿದೆ. ಈ ಮಧ್ಯೆ ನಿರ್ದೇಶಕರು ನನ್ನ ಹಲವು ಕನ್ನಡ ಚಿತ್ರಗಳನ್ನು ನೋಡಿದ್ದರು. ಮುಫ್ತಿಯಲ್ಲಿ ನನ್ನ ಪಾತ್ರ ಸಂಪತ್ ನಂದಿಯವರಿಗೆ ಇಷ್ಟವಾಗಿ ನಂತರ ಮಾತುಕತೆ ನಡೆದು ನನಗೆ ಈ ಅವಕಾಶ ಸಿಕ್ಕಿತು ಎಂದು ವಶಿಷ್ಟ ಸಿಂಹ ಹೇಳುತ್ತಾರೆ.
ಒಡೆಲ್ಲ ರೈಲ್ವೆ ಸ್ಟೇಷನ್ ನಲ್ಲಿ ನನ್ನದು ದೋಬಿ ಪಾತ್ರ. ಇದು ಕರೀಂ ನಗರದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಮಾಡುತ್ತಿರುವ ಚಿತ್ರವಿದು ಎಂದರು.