ಹಾರರ್ ಸಿನಿಮಾಗಳನ್ನು ಹಾಸ್ಯಚಿತ್ರಗಳಂತೆ ನೋಡುತ್ತೇನೆ: ನಟ ಅಜಯ್ ರಾವ್

ಕೃಷ್ಣನ್ ಲವ್‍ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ, ‘ಕೃಷ್ಣ ಲೀಲಾ, ‘ಕೃಷ್ಣ ರುಕ್ಕು ಹೀಗೆ ಕೃಷ್ಣ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್ ರಾವ್ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾವೊಂದರಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 
ಅಜಯ್ ರಾವ್
ಅಜಯ್ ರಾವ್
Updated on

ಕೃಷ್ಣನ್ ಲವ್‍ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ, ‘ಕೃಷ್ಣ ಲೀಲಾ, ‘ಕೃಷ್ಣ ರುಕ್ಕು ಹೀಗೆ ಕೃಷ್ಣ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್ ರಾವ್ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾವೊಂದರಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 

ನಿರ್ದೇಶಕ ವಿಜಯಾನಂದ್ ನಿರ್ದೇಶನದಲ್ಲಿ ಅಜಯ್ ರಾವ್ ನಟಿಸಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಜಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. 

ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್ ಸಬ್ಜೆಕ್ಟ್ ಒಳಗೊಂಡಿದೆ. 2020 ಫೆಬ್ರವರಿ ತಿಂಗಳಿನಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಏಪ್ರಿಲ್ 16 ರಂದು ಚಿತ್ರ ಬಿಡುಗಡೆಯಾಗಲಿದೆ. 

ಚಿತ್ರದಲ್ಲಿ ಅಜಯ್ ರಾವ್ ಅವರು ಪತ್ರಕರ್ತನ ಪಾತ್ರಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಹಾಗೂ ಸೇನಾಪಡೆಗಳಂತೆಯೇ ಪತ್ರಕರ್ತರನ್ನೂ ಫ್ರಂಟ್​ಲೈನ್​ ವಾರಿಯರ್ಸ್ ಎಂದು ಪರಿಗಣಿಸಬೇಕು. ಒಂದು ಪ್ರದೇಶದಲ್ಲಿ ದೆವ್ವ ಎಂಬ ಆತಂಕ ಜನರಲ್ಲಿ ಇರುತ್ತದೆ. ಆ ಪ್ರದೇಶದಲ್ಲಿ ಅಪರಾಧ ಪ್ರಕರಣಗಳೂ ಕೂಡ ಹೆಚ್ಚಾಗಿರುತ್ತದೆ. ವೈಯಕ್ತಿಕ ನಂಟಿನೊಂದಿಗೆಯೇ ಚಿತ್ರದ ನಾಯಕ ನಟ ತನಿಖೆಗೆ ಇಳಿಯುತ್ತಾನೆಂದು ಚಿತ್ರದ ಕಥೆಯ ಎಳೆಯೊಂದನ್ನು ಅಜಯ್ ರಾವ್ ಅವರು ಹೇಳಿದ್ದಾರೆ. 

ಮೊದಲ ಬಾರಿಗೆ ಈ ಸಿನಿಮಾದಲ್ಲಿ ಜರ್ನಲಿಸ್ಟ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಸಿನಿ ಕೆರಿಯರ್ ನ 25ನೇ ಸಿನಿಮಾ. ಹಾರಾರ್ ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ ಹಿಂದೆಂದೂ ಮಾಡಿರಲಿಲ್ಲ. ಸಿನಿಮಾ ಮತ್ತು ನನ್ನ ಪಾತ್ರ ಎರಡೂ ಪೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ನಾನು ಹಾರರ್ ಚಿತ್ರಗಳನ್ನು ಕಾಮಿಡಿ ಸಿನಿಮಾಗಳಂತೆ ನೋಡುತ್ತೇನೆ. ಎಂದಿಗೂ ದೆವ್ವ ಎಂದು ಭಯಪಟ್ಟಿಲ್ಲ. ನನ್ನ ಕುಟುಂಬ ಹಾಗೂ ಸ್ನೇಹಿತರು ಇದನ್ನು ವಿಚಿತ್ರದಂತೆ ನೋಡುತ್ತಾರೆ.  ಆದರೆ, ಚಿತ್ರೀಕರಣ ಸಂದರ್ಭದಲ್ಲಿ ನನಗೆ ಕೆಲವು ಅನುಭವಗಳಾಯಿತು. ಚಿತ್ರೀಕರಣ ಮಾಡುತ್ತಿದ್ದಾಗಲೇ ನಮಗೆ ದೆವ್ವ ಕಾಣಿಸಿಕೊಂಡ ಅನುಭವವಾಗಿತ್ತು. ನಟನೆಗೆ ಸಹಾಯಕವಾಗಲು ನಾನು ಕೆಲ ಚಿತ್ರಗಳನ್ನು ನೋಡುತ್ತಿದ್ದೆ. ಚಿತ್ರದ ದೃಶ್ಯವೊಂದರಲ್ಲಿ ಅಡುಗೆ ಮನೆಯಲ್ಲಿ ಪಾತ್ರೆಗಳು ಬೀಳುವ ಸನ್ನಿವೇಶ ಬರುತ್ತಿದ್ದು. ನೋಡ ನೋಡುತ್ತಿದ್ದಂತೆಯೇ ಮನೆಯಲ್ಲಿದ್ದ ಲೈಟ್ ನನ್ನ ತಲೆ ಮೇಲೆ ಬಿದ್ದಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ನಿರ್ದೇಶಕ ಉತ್ತಮ ಗೀತರಚನೆಕಾರರಾಗಿದ್ದಾರೆ. ಅವರ ಸಾಮರ್ಥ್ಯ ನನಗೆ ಗೊತ್ತಿದೆ. ಸಾಕಷ್ಟು ಚಿತ್ರಕತೆಗಳ ಕುರಿತು ನನ್ನೊಂದಿಗೆ  ಈ ಹಿಂದೆ ಚರ್ಚಿಸಿದ್ದರು. ಆದರೆ, ಹಾರರ್ ಚಿತ್ರದ ಕಥೆಯೊಂದಿಗೆ ನನ್ನ ಬಳಿ ಬಂದಿದ್ದು ಆಶ್ಚರ್ಯವಾಗಿತ್ತು. ನಿರ್ದೇಶಕರಿಗೂ ನಾನೇನು ಎಂಬುದು ಗೊತ್ತಿದೆ. ಹೀಗಾಗಿ ನನಗೆ ಹೊಂದುವ ಪಾತ್ರವನ್ನೇ ಹೊತ್ತು ನನ್ನ ಬಳಿ ಬಂದಿದ್ದರು ಎಂದಿದ್ದಾರೆ. 

ಇದೇ ವೇಳೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ ಕೊಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ಸೆಲೆಬ್ರಿಟಿಯಾದರೂ ನನಗೂ ನಿಯಮ ಒಂದೇ. ನನ್ನ ಪತ್ನಿ, ತಾಯಿ ಹಾಗೂ ನನಗೂ ಕೊರೋನಾ ಸೋಂಕು ತಗುಲಿತ್ತು. ವೈರಸ್ ನ್ನು ಜವಾಬ್ದಾರಿ ಹಾಗೂ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸ್ ಬಳಕೆಯಿಂದ ದೂರಾಗಿಸಬೇಕು. ವೈರಸ್ ಅನ್ನು ಹೇಗೆ ಎದುರಿಸಬೇಕೆಂದು ಜನರಿಗೆ ಕಲಿಸಬೇಕಿದೆ ಎಂದಿದ್ದಾರೆ. 

ಸ್ವಚ್ಛತಾ ಸ್ಥಳಗಳಲ್ಲಿ ಚಿತ್ರಮಂದಿರ ಕೂಡ ಒಂದಾಗಿದೆ. ಚಿತ್ರಮಂದಿರಗಳಲ್ಲಿ ಆಗಾಗ ಸ್ಯಾನಿಟೈಸ್ ಮಾಡಲಾಗುತ್ತದೆ. ಪ್ರಮುಖವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸ್ವಚ್ಛತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಆದರೂ ಚಿತ್ರಮಂದಿರಗಳಿಗೆ ಬರಲು ಜನರು ಹೆದರುತ್ತಿದ್ದಾರೆ. ಇದು ಅವರ ಆಲೋಚನೆಗಳಷ್ಟೇ. ಚಿತ್ರಮಂದಿರಗಳಿಗೆ ಶೇ.50 ರಷ್ಟು ಭರ್ತಿಗೆ ಅವಕಾಶ ನೀಡಿರುವುದಕ್ಕೆ ನನಗೇನೂ ಸಂತೋಷವಿಲ್ಲ. ನಷ್ಟದ ಬಗ್ಗೆ ನನಗೂ ತಿಳಿದಿದೆ. ಹಾಗೆಂದು ಇನ್ನೆಷ್ಟು ದಿನ ನಾವು ಸುಮ್ಮನೆ ಕೂರಲು ಸಾಧ್ಯ? ನಿರ್ಮಾಪಕರಿಗೆ ಇದು ಬಹಳಷ್ಟು ಸಂಕಷ್ಟವನ್ನು ತಂದೊಡ್ಡಲಿದೆ. ನಮ್ಮ ಜೀವನಕ್ಕಾಗಿ ನಾವು ಹೋರಾಟ ಮಾಡಲೇಬೇಕಿದೆ. ಏನೇ ಬಂದರೂ ಎದುರಿಸಲು ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com