'ಬರ್ಕ್ಲಿ' ಸಿನಿಮಾ ಟೀಸರ್ ಏಪ್ರಿಲ್ 30ಕ್ಕೆ ರಿಲೀಸ್

ಸುಮಂತ್ ಕ್ರಾಂತಿ ನಿರ್ದೇಶನದ ಬರ್ಕ್ಲಿ ಸಿನಿಮಾ ಟೀಸರ್ ಏಪ್ರಿಲ್ 30 ರಂದು ರಿಲೀಸ್ ಆಗಲಿದೆ. ಗಣಪ ಹೀರೋ ಸಂತೋಷ್ ಬಾಲ್ ರಾಜ್ ಮತ್ತು ಸಿಮ್ರಾನ್ ನಾಟೇಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಬರ್ಕ್ಲಿ ಸಿನಿಮಾ ಸ್ಟಿಲ್
ಬರ್ಕ್ಲಿ ಸಿನಿಮಾ ಸ್ಟಿಲ್
Updated on

ಸುಮಂತ್ ಕ್ರಾಂತಿ ನಿರ್ದೇಶನದ ಬರ್ಕ್ಲಿ ಸಿನಿಮಾ ಟೀಸರ್ ಏಪ್ರಿಲ್ 30 ರಂದು ರಿಲೀಸ್ ಆಗಲಿದೆ. ಗಣಪ ಹೀರೋ ಸಂತೋಷ್ ಬಾಲ್ ರಾಜ್ ಮತ್ತು ಸಿಮ್ರಾನ್ ನಾಟೇಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ  ಸಿಮ್ರಾನ್ ನಾಟೇಕರ್ ದಕ್ಷಿಣ ಭಾರತ ಚಿತ್ರರಂಗ ಪ್ರವೇಶಿಸಿದ್ದಾರೆ. 

ಬರ್ಕ್ಲಿ ಎಂಬುದು ಸಿನಿಮಾದಲ್ಲಿ ನಾಯಕನ ಪೆಟ್ ನೇಮ್ ಆಗಿದೆ, ಸಿಗರೇಟ್ ಬ್ರಾಂಡ್ ಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ನಿರ್ದೇಶಕ ಸುಮಂತ್ ಕ್ರಾಂತಿ ಹೇಳಿದ್ದಾರೆ.

ಮೊದಲು ಸಿನಿಮಾ ಹೆಸರು ಪ್ರಕಟಿಸಿದಾಗ ಹಲವರು ನನ್ನನ್ನು ಪ್ರಶ್ನಿಸಿದರು, ಆದರೆ ಸಿನಿಮಾ ಟೈಟಲ್ ಗೂ  ಸಿಗರೇಟ್ ಹೆಸರಿಗೂ ಸಂಬಂಧವಿಲ್ಲ, ಬರ್ಕ್ಲಿ ಹೆಸರು ಚೆನ್ನಾಗಿ  ಅನಿಸಿತು ಹೀಗಾಗಿ ಹೆಸರು ನೋಂದಾಯಿಸಿದೆ ಎಂದು ಹೇಳಿದ್ದಾರೆ.

ಬರ್ಕ್ಲಿ ರಿವೇಂಜ್ ಥ್ರಿಲ್ಲರ್ ಸಿನಿಮಾ, ಕಥೆಯಲ್ಲಿ ಅನೇಕ ರೀತಿಯ ಪಾತ್ರಗಳು ಬಂದು ಹೋಗುತ್ತವೆ, ವಶಿಷ್ಟ ಸಿಂಹ ನಟನೆಯ ಕಾಲಚಕ್ರ ಸಿನಿಮಾವನ್ನು ಸುಮಂತ್ ನಿರ್ದೇಶಿಸಿದ್ದರು.

ಸದ್ಯ ಕನ್ನಡ-ತೆಲುಗು ಭಾಷೆಗಳಲ್ಲಿ ಸದ್ದು ಮಾಡುತ್ತಿರುವ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ, ಈ 'ಬರ್ಕ್ಲಿ'ಗೂ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಮತ್ತು ಎನ್.ಎಂ. ಸೂರಿ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ 'ಬರ್ಕ್ಲಿ' ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com