'ಎಲ್ಲಾ ಕಂಡಿದ್ದೇವೆ' ಎಂದು ನಾನೂ ಹೇಳಬಹುದು, ವಿಷಯ ದೊಡ್ದದು ಮಾಡೋದು ಬೇಡ: ನಿರ್ದೇಶಕ ಪ್ರೇಮ್

ದರ್ಶನ್ ನಿರ್ದೇಶಕರ ಬಗ್ಗೆ ಮಾತನಾಡಿರುವುದು ನನಗೆ ಬೇಸರವಾಗಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 
ನಿರ್ದೇಶಕ ಪ್ರೇಮ್
ನಿರ್ದೇಶಕ ಪ್ರೇಮ್
Updated on

ದರ್ಶನ್ ನಿರ್ದೇಶಕರ ಬಗ್ಗೆ ಮಾತನಾಡಿರುವುದು ನನಗೆ ಬೇಸರವಾಗಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರೇಮ್ "ನಾನೆಷ್ಟು ಸಿನಿಮಾ ಮಾಡಿದ್ದರೂ ನನಗೇನೂ ಕೊಂಬು ಬಂದಿಲ್ಲ, ನನಗೆ ಯಾರೂ ಕ್ಷಮೆ ಕೇಳುವುದು ಬೇಡ. ಯಾರೂ ಯಾವತ್ತೂ ನಿರ್ದೇಶಕರ ಬಗ್ಗೆ ಹಗುರವಾಗಿ ಮಾತನಾಡಬಾರದು" ಎಂದರು.

"ಇದನ್ನು ಹೆಚ್ಚು ಬೆಳೆಸಲು ಇಷ್ಟ ಪಡಲ್ಲ, ನಾವೂ ಕಂಡಿದ್ದೇವೆ ಎಂದು ಸಾಮಾನ್ಯವಾಗಿ ಮಾತನಾಡಬಹುದು, ಅದರಂತೆ ದರ್ಶನ್ ಸಹ ಹೇಳಿದ್ದಾರೆ. ಇದನ್ನು ದೊಡ್ಡದು ಮಾಡಬೇಡಿ" ಎಂದರು.

ಪತ್ನಿ ರಕ್ಷಿತಾ, ದರ್ಶನ್ ಆತ್ಮೀಯ ಸ್ನೇಹಿತರು

ನನ್ನ ಪತ್ನಿ ರಕ್ಷಿತಾ, ದರ್ಶನ್ ಮಾಡುವ ಪ್ರತೀ ಕೆಲಸವನ್ನು ಬೆಂಬಲಿಸುತ್ತಾರೆ ಆದರೆ ನಿನ್ನೆ ದರ್ಶನ್ ನೀಡಿರುವ ಹೇಳಿಕೆಯಿಂದ ಅವಳು ವಿಚಲಿತಳಾಗಿದ್ದಾಳೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

"ದರ್ಶನ್ ಅವರ ಯಾವ ಸಿನಿಮಾ ಬಿಡುಗಡೆಯಾದಾಗಲೂ ನನ್ನ ಪತ್ನಿ ಮೊದಲು ಶುಭ ಕೋರುತ್ತಾಳೆ. ನನ್ನ ಪತ್ನಿ ರಕ್ಷಿತಾಗೆ ದರ್ಶನ್ ಕ್ಲೋಸ್ ಫ್ರೆಂಡ್" ಎಂದು ಪ್ರೇಮ್ ಹೇಳಿದ್ದಾರೆ.

"ನನಗೆ ನಿನ್ನೆಯಿಂದ ದರ್ಶನ್ ಅವರ ಅಭಿಮಾನಿಗಳು, ಸ್ನೇಹಿತರು ಕರೆ ಮಾಡಿ ಆವೇಶದಲ್ಲಿ ಮಾತನಾಡಿರಬಹುದು, ಕ್ಷಮಿಸಿ ಎಂದು ಕೇಳುತ್ತಿದ್ದಾರೆ ಆದರೆ ಯಾರೂ ಕ್ಷಮೆ ಬೇಡುವುದು ಬೇಡ" ಎಂದು ನಿರ್ದೇಶಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com