ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸೆಪ್ಟಂಬರ್ 24ಕ್ಕೆ ರಿಲೀಸ್

ಕೋವಿಡ್-19 ಸಾಂಕ್ರಾಮಿಕದಿಂದ ಬಹುತೇಕ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿದ್ದವು. ಶೂಟಿಂಗ್ ಮುಗಿಸಿ ಬಿಡುಗಡೆಗಾಗಿ ಕಾಯುತ್ತಿದ್ದ ಚಿತ್ರಗಳಿಗೆ ಕೊರೊನಾ ಅಡ್ಡಿಯಾಗಿತ್ತು
ಬಡವ ರಾಸ್ಕಲ್ ಪೋಸ್ಟರ್
ಬಡವ ರಾಸ್ಕಲ್ ಪೋಸ್ಟರ್
Updated on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದ ಬಹುತೇಕ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿದ್ದವು. ಶೂಟಿಂಗ್ ಮುಗಿಸಿ ಬಿಡುಗಡೆಗಾಗಿ ಕಾಯುತ್ತಿದ್ದ ಚಿತ್ರಗಳಿಗೆ ಕೊರೊನಾ ಅಡ್ಡಿಯಾಗಿತ್ತು. ಇದೀಗ ಲಾಕ್​ಡೌನ್ ಸಡಿಲಿಕೆಯಾಗಿರುವ ಕಾರಣ ಸಿನಿಮಾ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ಬಗ್ಗೆ ಸ್ವತಃ ನಟ ಡಾಲಿ ಧನಂಜಯ್ ತಮ್ಮ ಫೇಸ್‌ಬುಕ್ ಮತ್ತು ಟ್ವೀಟರ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಸಹಿತ ಮಾಹಿತಿ ನೀಡಿದ್ದಾರೆ.

‘ಪಕ್ಕ ಮಿಡಲ್ ಕ್ಲಾಸ್ ಗ್ಯಾಂಗ್ ಸ್ಟರ್ ಜೊತೆಗೆ “ಬಡವ ರಾಸ್ಕಲ್” ಆಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಇದೆ ಸೆಪ್ಟೆಂಬರ್ 24ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರೀಲೀಸ್ ಆಗಲಿದೆ. ಎಂದಿನಂತೆಯೆ ನಿಮ್ಮ ಪ್ರೀತಿ ಆಶೀರ್ವಾದ ಇರಲಿ’  ಎಂದು ಅವರು ಬರೆದುಕೊಂಡಿದ್ದಾರೆ.

ಸೆ.24ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ‘ಬಡವ ರಾಸ್ಕಲ್’ ಚಿತ್ರವು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಧನಂಜಯ್ ಹೇಳಿರುವಂತೆಯೇ ಇದು ಮಿಡಲ್ ಕ್ಲಾಸ್ ಹುಡುಗನೊಬ್ಬನ ಕಥೆಯಾಗಿದ್ದು, ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿದೆ. ಸಹಾಯಕ ನಿರ್ದೇಶಕರಾಗಿದ್ದ ಗುರು ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಗಾಯಕ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಧನಂಜಯ್ ಜೊತೆ ನಟಿ ಅಮೃತಾ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಧನಂಜಯ್ ಜೊತೆ ಗುಜ್ಮಾಲ್ ಪುರುಷೋತ್ತಮ್ ಬಂಡವಾಳ ಹೂಡಿದ್ದಾರೆ. ‘ಟಗರು’ ಸಿನಿಮಾದ ಡಾಲಿ ಪಾತ್ರದ ಮೂಲಕ ಸಖತ್ ಸೌಂಡ್ ಮಾಡಿದ್ದ ನಟ ಧನಂಜಯ್ ಈಗ ಸ್ಯಾಂಡಲ್ ವುಡ್ ನ ಬ್ಯುಸಿ ನಟರಾಗಿದ್ದಾರೆ. ಅವರ ಕೈಯಲ್ಲಿಗ ಅನೇಕ ಸಿನಿಮಾಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com