ಗುರುಪ್ರಸಾದ್'ಗೆ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮೀ ಜೋಡಿ!

ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಗುರುಪ್ರಸಾದ್ ಅವರು,  ಈ ನಡುವೆ ಮತ್ತೊಂದು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. 
ಗುರುಪ್ರಸಾದ್ ಹಾಗೂ ನಟಿ ರಚಿತಾ ಮಹಾಲಕ್ಷ್ಮೀ
ಗುರುಪ್ರಸಾದ್ ಹಾಗೂ ನಟಿ ರಚಿತಾ ಮಹಾಲಕ್ಷ್ಮೀ
Updated on

ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ಗುರುಪ್ರಸಾದ್ ಅವರು,  ಈ ನಡುವೆ ಮತ್ತೊಂದು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. 

ಇದೊಂದು ಕ್ರೈಮ್ ಕಾಮಿಡಿ ಚಿತ್ರವಾಗಿದ್ದು, ಸಿನಿಮಾದಲ್ಲಿ ಗುರುಪ್ರಸಾದ್ ಅವರಿಗೆ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮೀ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ಮಹಾಲಕ್ಷ್ಮೀ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದು ಪಕ್ಕ ಹಾಸ್ಯದ ಚಿತ್ರವಾಗಿರಲಿದ್ದು, ರಚಿತಾ ಅವರೊಂದಿಗೆ ಇನ್ನೂ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆಂದು ಗುರುಪ್ರಸಾದ್ ಅವರು ಹೇಳಿದ್ದಾರೆ. 

ಇನ್ನೊಂದು ವಾರದ ಚಿತ್ರೀಕರಣ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ಇತರೆ ಮಾಹಿತಿಗಳನ್ನು ತಿಳಿಸುತ್ತೇನೆ. ಚಿತ್ರಕ್ಕೆ ಅನೂಪ್ ಸೀಲಿನ್ ಅವರು ಸಂಗೀತ ನೀಡಿದ್ದು, ಸಾಮ್ರಾಟ್ ಅಶೋಕ್ ಗೌತಮ್ ಅವರ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬರುತ್ತಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ರಂಗನಾಯಕ ಚಿತ್ರದ ಕುರಿತು ಮಾಹಿತಿ ನೀಡಿದ ಅವರು, ಎಲ್ಲವೂ ಸಿದ್ಧವಾಗಿದೆ. ಚಿತ್ರದ ಸೆಟ್ ಸಿದ್ಧಗೊಳ್ಳುವುದಕ್ಕಾಗಿ ಕಾಯಲಾಗುತ್ತಿದೆ. ಸೆಟ್ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಸಿನಿಮಾ ಕೆಲಸಗಳೂ ಆರಂಭಗೊಳ್ಳುತ್ತವೆ. ಆಗಸ್ಟ್ 15 ರಿಂದ ಚಿತ್ರೀಕಱಣ ಆರಂಭ ಮಾಡುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com