ಜೂನ್ 28 ರಿಂದ ಕೆ. ಮಾದೇಶ್ ನಿರ್ದೇಶನದ 'ಲಗಾಮ್' ಶೂಟಿಂಗ್ ಆರಂಭ

ಕೆ.ಮಾದೇಶ್ ನಿರ್ದೇಶನದ ಲಗಾಮ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದು, ಜೂನ್ 28 ರಿಂದ ಶೂಟಿಂಗ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ಉಪೇಂದ್ರ
ಉಪೇಂದ್ರ
Updated on

ಕೆ.ಮಾದೇಶ್ ನಿರ್ದೇಶನದ ಲಗಾಮ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದು, ಜೂನ್ 28 ರಿಂದ ಶೂಟಿಂಗ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಉಪೇಂದ್ರ ಜೊತೆ ಹರಿಪ್ರಿಯಾ ನಟಿಸುತ್ತಿದ್ದಾರೆ. 

ಶೂಟಿಂಗ್ ನಡೆಸಲು ಸರ್ಕಾರ ಅನುಮತಿ ನೀಡಿದ ಕೂಡಲೇ ಚಿತ್ರೀಕರಣ ಆರಂಭಿಸಲು ತಂಡ ಸಿದ್ಧವಾಗಿದೆ.  ಏಪ್ರಿಲ್ 26 ರಿಂದ ಶೂಟಿಂಗ್ ಆರಂಭಿಸಲು ಯೋಜಿಸಲಾಗಿತ್ತು, ಆದರೆ ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಶೂಟಿಂಗ್ ಮುಂದೂಡಲಾಗಿದೆ. 

ನಾವು ಬೆಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದೇವೆ, ಜೂನ್ 21 ರಿಂದ ಶೂಟಿಂಗ್ ಆರಂಭಿಸಲು ನಾವು ಬಯಸಿದ್ದೇವೆ. ಸರ್ಕಾರವು ರೂಪಿಸಿರುವ ಪ್ರೋಟೋಕಾಲ್ಗಳ ಮೂಲಕ ಹೋಗಲು ನಾವು ಸಿದ್ಧರಿದ್ದೇವೆ,  ಆದರೆ ಇಲ್ಲಿಯವರೆಗೆ ಯಾವುದೇ  ಅಪ್ ಡೇಟ್ ಸಿಗದ ಕಾರಣ ಒಂದು ವಾರ ಶೂಟಿಂಗ್ ಮುಂದೂಡಿದ್ದೇವೆ ಎಂದು ನಿರ್ದೇಶಕ ಕೆ.ಮಾದೇಶ್ ತಿಳಿಸಿದ್ದಾರೆ.

ಲಗಾಮ್ ಸಿನಿಮಾ ರಾಜಕೀಯ ವಿಡಂಬನೆ ಕುರಿತಾದ ಕಥೆಯಾಗಿದೆ, ಈ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಆಗಲಿದೆ ಎಂದು ನಿರ್ದೇಶಕರು ವಿವರ ನೀಡಿದ್ದಾರೆ.

ಚಿತ್ರದಲ್ಲಿ ಸಾಧು ಕೋಕಿಲಾ, ರಂಗಾಯಣ ಮತ್ತು ಶೋಭರಾಜ್ ನಟಿಸಿದ್ದಾರೆ.  ದಕ್ಷಿಣ ಭಾರತದ ಖ್ಯಾತ ನಟ ಪ್ರಭು  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕ ಎಂ ಆರ್ ಗೌಡರಿಂದ ಸಿನಿಮಾ ನಿರ್ಮಾಣವಾಗುತ್ತಿದೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ, ಸಾಧು ಕೋಕಿಲಾ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com