ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳಾಗಿ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ, ಅನು ಪ್ರಭಾಕರ್ ನೇಮಕ

ವನ್ಯಜೀವಿಗಳನ್ನು ದತ್ತು ಪಡೆಯುವ ವಿಚಾರ ಕುರಿತು ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಾದಿಯಲ್ಲಿ ಇದೀಗ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಸೇರಿದ್ದಾರೆ.
ಕುಟುಂಬದೊಂದಿಗೆ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ, ಅನುಪ್ರಭಾಕರ್
ಕುಟುಂಬದೊಂದಿಗೆ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ, ಅನುಪ್ರಭಾಕರ್
Updated on

ಬೆಂಗಳೂರು: ವನ್ಯಜೀವಿಗಳನ್ನು ದತ್ತು ಪಡೆಯುವ ವಿಚಾರ ಕುರಿತು ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಾದಿಯಲ್ಲಿ ಇದೀಗ ಸೆಲೆಬ್ರಿಟಿ ದಂಪತಿ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಸೇರಿದ್ದಾರೆ.

ಮೃಗಾಲಯಗಳು ಮತ್ತೆ ಆರಂಭವಾಗಿದ್ದು, ಸಂದರ್ಶಕರನ್ನು ಆಕರ್ಷಿಸುವ ಉದ್ದೇಶದೊಂದಿಗೆ ಇವರನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳಾಗಿ ಇತ್ತೀಚಿಗೆ ನೇಮಕ ಮಾಡಲಾಗಿದೆ. ಪ್ರಾಣಿಗಳ ದತ್ತು ಕುರಿತು ಅರಿವು ಮೂಡಿಸಲು ಅವರು ಎದುರು ನೋಡುತ್ತಿದ್ದು, ಪ್ರಾಣಿಗಳ ಕಲ್ಯಾಣಕ್ಕಾಗಿ ಸ್ವಲ್ಪ ದೇಣಿಗೆ ಸ್ವೀಕರಿಸುವ ವಿಶ್ವಾಸದಲ್ಲಿದ್ದಾರೆ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್ ಗೋಕುಲ್ ರಘು ಅವರ ಒಳ್ಳೇಯ ಸ್ನೇಹಿತರಾಗಿದ್ದು, ಜೈವಿಕ ಉದ್ಯಾನದ ರಾಯಭಾರಿಯಾಗಲು ಸಲಹೆ ನೀಡಿದರು. ಮೃಗಾಲಯ ಪುನರುಜ್ಜೀವನಕ್ಕೆ ಸ್ವಲ್ಪ ಅಗತ್ಯ ಕೊಡುಗೆ ನೀಡಬೇಕು ಅನಿಸಿತು. ದೇಶದ ಕೆಲ ರಾಷ್ಟ್ರೀಯ ಉದ್ಯಾನಗಳಲ್ಲಿ ಬನ್ನೇರುಘಟ್ಟ ಕೂಡಾ ಒಂದಾಗಿದ್ದು, ಟಿಕೆಟ್ ಮಾರಾಟದಿಂದ ಬರುವ ಆದಾಯದಿಂದ ಮೃಗಾಲಯ ನಡೆಯುತ್ತಿದೆ ಎಂದು ಅನು ಪ್ರಭಾಕರ್ ಹೇಳಿದರು.

ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯ ನಂತರ ಮೃಗಾಲಯಕ್ಕೆ ಆಗಮಿಸುವ ಜನರ ಸಂಖ್ಯೆಯೂ ಕಡಿಮೆಯಾಗಿದೆ.ಎರಡನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾದ್ದರಿಂದ ಏಪ್ರಿಲ್ ನಲ್ಲಿ ಮೃಗಾಲಯವನ್ನು ಮುಚ್ಚಲಾಗಿತ್ತು. ಆದ್ದರಿಂದ ಮೃಗಾಲಯಕ್ಕೆ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದೆ. ಇದೆಲ್ಲಾವನ್ನು ಗೋಕುಲ್ ವಿವರಿಸಿದ ಬಳಿಕ, ಮೃಗಾಲಯದ ರಾಯಭಾರಿಗಳಾಗಿ ನಿರ್ಧರಿಸಿದ್ದಾಗಿ ಅನು ಪ್ರಭಾಕರ್ ತಿಳಿಸಿದರು.

ದರ್ಶನ್ ಪ್ರಾಣಿಗಳ ದತ್ತು ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಾಗಿ, ಮೃಗಾಲಯಕ್ಕೆ ಸಹಾಯ ಮಾಡಬೇಕಾಗಿದೆ. ಇತ್ತೀಚಿಗೆ ಈ ಮೃಗಾಲಯದಲ್ಲಿ ಜಿರಾಫೆ ಇರಲಿಲ್ಲ.  ಮೈಸೂರು ಮೃಗಾಲಯದಿಂದ ಜಿರಾಫೆಯನ್ನು ತರಲಾಯಿತು. ಚಿಂಪಾಂಜಿಯನ್ನು ತರುವ ಯೋಜನೆ ಸಹ ಹೊಂದಲಾಗಿದೆ. ಆದರೆ, ಎಲ್ಲದಕ್ಕೂ ಸಂಪನ್ಮೂಲಗಳು ಬೇಕಾಗುತ್ತವೆ ಎಂದು ರಘು ಮುಖರ್ಜಿ ಹೇಳಿದರು. 

ಮೃಗಾಲಯದಲ್ಲಿ 350 ಸಿಬ್ಬಂದಿಗಳಿಗೆ ಸಂಬಳವನ್ನು ಪಾವತಿಸಬೇಕಾಗಿದೆ. ಪ್ರಾಣಿಗಳ ಆಹಾರಕ್ಕಾಗಿ ಪ್ರತಿನಿತ್ಯ 1 ಲಕ್ಷ ರೂಪಾಯಿ ಅಗತ್ಯವಿದೆ. ದರ್ಶನ್ ರಾಜ್ಯದಲ್ಲಿನ ಎಲ್ಲಾ 9 ಮೃಗಾಲಯಗಳ ಬಗ್ಗೆ ಗಮನ ಹರಿಸಿದ್ದರೆ, ನಾವು ಬೆಂಗಳೂರಿನ ಮೃಗಾಲಯದ ಬಗ್ಗೆ ಮಾತ್ರ ಗಮನ ಹರಿಸಿರುವುದಾಗಿ ಅನುಪ್ರಭಾಕರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com