"ಡಿಯರ್ ಭಾರ್ಗವ" ಕಿರುಚಿತ್ರ ಬಿಡುಗಡೆ 

ಫ್ಲಿಕ್ಕರಿಂಗ್ ಸ್ಟುಡಿಯೋಸ್ ಹೊಸ ಯುಗದ ವಿಡಿಯೋ ನಿರ್ಮಾಣ ಸಂಸ್ಥೆಯಾಗಿದ್ದು, ಬೆಳೆಯುತ್ತಿರುವ ಪ್ರಸ್ತುತ ತಂತ್ರಜ್ಞಾನದೊಂದಿಗೆ, ಕಂಪನಿಯು ತಮ್ಮ ಅನುಭವಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ನಿರೂಪಿಸುವ ಅಗತ್ಯವನ್ನು ತಿಳಿದಿದ್ದು, ಅಂತಹ ಚಿತ್ರಗಳನ್ನು ನಿರ್ಮಿಸುವ ಉತ್ಸಾಹದಲ್ಲಿದೆ.
ಡಿಯರ್ ಭಾರ್ಗವ ಕಿರುಚಿತ್ರ
ಡಿಯರ್ ಭಾರ್ಗವ ಕಿರುಚಿತ್ರ

ಬೆಂಗಳೂರು: ಫ್ಲಿಕ್ಕರಿಂಗ್ ಸ್ಟುಡಿಯೋಸ್ ಹೊಸ ಯುಗದ ವಿಡಿಯೋ ನಿರ್ಮಾಣ ಸಂಸ್ಥೆಯಾಗಿದ್ದು, ಬೆಳೆಯುತ್ತಿರುವ ಪ್ರಸ್ತುತ ತಂತ್ರಜ್ಞಾನದೊಂದಿಗೆ, ಕಂಪನಿಯು ತಮ್ಮ ಅನುಭವಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ನಿರೂಪಿಸುವ ಅಗತ್ಯವನ್ನು ತಿಳಿದಿದ್ದು, ಅಂತಹ ಚಿತ್ರಗಳನ್ನು ನಿರ್ಮಿಸುವ ಉತ್ಸಾಹದಲ್ಲಿದೆ.

ಸುಸ್ಮಿತಾ ಸಮೀರ ಪ್ರಾರಂಭಿಸಿರುವ ಫ್ಲಿಕ್ಕರಿಂಗ್ ಸ್ಟುಡಿಯೋಸ್ ಅಂತಹ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಲು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ. "ಸಂಡೇ" ಕಿರುಚಿತ್ರ ಮತ್ತು "ಅಭಿಜ್ಞಾನ" ಮ್ಯೂಸಿಕ್ ವಿಡಿಯೋವನ್ನು ಸಹನಿರ್ಮಾಣ ಮಾಡಿ ಇದೀಗ ಫ್ಲಿಕ್ಕರಿಂಗ್ ಸ್ಟುಡಿಯೋ ತನ್ನದೇ ಆದ ಯೂಟ್ಯೂಬ್ ಚಾನೆಲ್  ಅನ್ನು ಪ್ರಾರಂಭಿಸಿ, ಮೊದಲ ಪ್ರಯತ್ನವಾಗಿ "ಡಿಯರ್ ಭಾರ್ಗವ" ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. 

ಇದನ್ನು ವ್ಯಕ್ತಿತ್ವದ ಕುರಿತು ಹೋರಾಡುತ್ತಿರುವ, ತಮ್ಮವರೊಂದಿಗೆ ಮಾತನಾಡಲು ಮುಜುಗರ ಪಡುವಂಥ ಮನಸುಗಳಿಗೆ ಧೈರ್ಯ ನೀಡುವ ಉದ್ದೇಶದೊಂದಿಗೆ ರಾಮನಾಥ್ ಶಾನಭಾಗ್ ಇದನ್ನು ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com