ಕವಿತಾಗೌಡ ಚಂದನ್ ವಿವಾಹ
ಸಿನಿಮಾ ಸುದ್ದಿ
ನಟಿ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಸರಳ ವಿವಾಹ; ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ!
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸೂಪರ್ ಜೋಡಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸೂಪರ್ ಜೋಡಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.
ಕೊರೋನಾ ಲಾಕ್‌ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್ ಮತ್ತು ಕವಿತಾ ಅವರ ವಿವಾಹವು ಸರಳವಾಗಿ ನಡೆದಿದೆ. ಏಪ್ರಿಲ್ 1 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ