ಕನ್ನಡ ವೀಕ್ಷಕರಿಗೆ ಸಿಹಿಸುದ್ದಿ: ಲಾಕ್‌ಡೌನ್‌ನಲ್ಲೂ ಜನಪ್ರಿಯ ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ!

ಕೆಲವು ಜನಪ್ರಿಯ ಧಾರಾವಾಹಿಗಳ ಹೊಸ ಕಂತುಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರದರ್ಶನವು ಮುಂದುವರಿಯಬೇಕು ಎಂಬ ಉದ್ದೇಶದೊಂದಿಗೆ, ಟೆಲಿಸಿರಿಯಲ್ ತಯಾರಕರು ಧಾರಾವಾಹಿ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ಸ್ ಸಿಟಿಗೆ ತೆರಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊರೋನಾ ಎರಡನೇ ಅಲೆಯಿಂದಾಗಿ ಬೆಂಗಳೂರಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೆಲಿವಿಷನ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಕೆಲಸಗಳು ಸ್ಥಗಿತಗೊಂಡಿವೆ. ಇನ್ನು ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇರುವ ಜನರ ಮನರಂಜನೆಗಾಗಿ ಜನಪ್ರಿಯ ಧಾರಾವಾಹಿಗಳ ಮರು ಪ್ರಸಾರ ನಡೆಯುತ್ತಿದೆ. ಧಾರಾವಾಹಿಗಳಿಗೆ ಅಂಟಿಕೊಂಡಿರುವ ಜನರಿಗಾಗಿ ಇಲ್ಲಿದೆ ಸಿಹಿ ಸುದ್ದಿ. ಕೆಲವು ಧಾರಾವಾಹಿಗಳ ಹೊಸ ಕಂತುಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರದರ್ಶನವು ಮುಂದುವರಿಯಬೇಕು ಎಂಬ ಉದ್ದೇಶದೊಂದಿಗೆ, ಟೆಲಿಸಿರಿಯಲ್ ತಯಾರಕರು ಧಾರಾವಾಹಿ ಚಿತ್ರೀಕರಣಕ್ಕಾಗಿ ರಾಮೋಜಿ ಫಿಲ್ಮ್ಸ್ ಸಿಟಿಗೆ ತೆರಳಿದ್ದಾರೆ. 

ವಾಸ್ತವವಾಗಿ, ಫಿಲ್ಮ್ ಸ್ಟುಡಿಯೋ ಕನ್ನಡ ಧಾರಾವಾಹಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಕನಿಷ್ಠ ಅರ್ಧ ಡಜನ್ ಕನ್ನಡ ಟೆಲಿವಿಷನ್ ಕಾರ್ಯಕ್ರಮಗಳ ಚಿತ್ರೀಕರಣವು ಪ್ರಗತಿಯಲ್ಲಿದೆ. ಆ ಮೊದಲ ಹೆಜ್ಜೆ ಇಟ್ಟಿರುವುದು ಗಗನಾ ಎಂಟರ್‌ಪ್ರೈಸಸ್‌ನ ನಿರ್ದೇಶಕ ಮತ್ತು ನಿರ್ಮಾಪಕ ಕೆ ಎಸ್ ರಾಮ್‌ಜೀ. ಪ್ರಸ್ತುತ ಕಲರ್ಸ್ ಕನ್ನಡಕ್ಕಾಗಿ ಮಂಗಳ ಗೌರಿ ಮದುವೆ, ಗೀತಾ ಮತ್ತು ನಾಗಿನಿ 2 ಎಂಬ ಮೂರು ಧಾರಾವಾಹಿಗಳನ್ನು ಮುನ್ನಡೆಸುತ್ತಿದ್ದಾರೆ. ನನ್ನ ಧಾರಾವಾಹಿಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಿದ ಮೊದಲ ವ್ಯಕ್ತಿ ನಾನು. ನಾವು 500 ಎಕರೆ ಪ್ರದೇಶದಲ್ಲಿ ಹರಡಿರುವ ರಾಮೋಜಿ ಫಿಲ್ಮ್ ಸಿಟಿಯ ಶಾಂತಿನಿಕೇತನದ ಒಂದು ಭಾಗದಲ್ಲಿ ಕ್ಯಾಂಪ್ ಮಾಡಿದ್ದೇವೆ. ಅಲ್ಲಿ ಒಂದು ಪಟ್ಟಣವೇ ಇರುವಂತೆ ಕಾಣುತ್ತದೆ. ಪಾತ್ರವರ್ಗ ಮತ್ತು ಸಿಬ್ಬಂದಿ ಹೊರತುಪಡಿಸಿ ಯಾರೂ ಸುತ್ತಮುತ್ತಲ ಪ್ರದೇಶಗಳಿಗೆ ಪ್ರವೇಶಿಸದಂತೆ ನಾವು ನೋಡಿಕೊಂಡಿದ್ದೇವೆ ಎಂದು ಎಸ್ ರಾಮ್ ಜೀ ಹೇಳಿದ್ದಾರೆ. 

ಇಲ್ಲಿ ಪ್ರತಿ ಧಾರಾವಾಹಿಗೆ 20-25 ಸದಸ್ಯರ ಸಿಬ್ಬಂದಿ ಇದ್ದು, ನಾವೆಲ್ಲರೂ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಂಡು ಬಂದಿದ್ದೇವೆ. ಕೆಲವು ಕಲಾವಿದರು ಲಭ್ಯವಿಲ್ಲ, ಆದ್ದರಿಂದ ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇವೆ. ಏತನ್ಮಧ್ಯೆ, ಕನ್ನಡತಿ ತಯಾರಕರು ಸಹ ಸೋಮವಾರ ಹೈದರಾಬಾದ್ ಗೆ ಬಂದಿಳಿದಿದ್ದಾರೆ. ನಮ್ಮನೆ ಯುವರಾಣಿ ಮತ್ತು ಹೂಮಾಲೆ ತಂಡ ಸಹ ಶೀಘ್ರದಲ್ಲೇ ತೆರಳಲಿದ್ದಾರೆ. ಶ್ರೀ ಜೈಮಾತಾ ಕಂಬೈನ್ಸ್‌ನಡಿಯಲ್ಲಿ ಧಾರಾವಾಹಿಯನ್ನು ನಿರ್ಮಿಸುತ್ತಿರುವ ನಿರ್ಮಾಪಕ ಪ್ರಕಾಶ್ ಜಯರಾಮ್, 'ಲಾಕ್‌ಡೌನ್ ಎಲ್ಲವನ್ನೂ ಸ್ಥಗಿತಗೊಳಿಸಿದೆ. ಆದರೆ ಅದೇ ಸಮಯದಲ್ಲಿ ಬದುಕುಳಿಯಲು ದೈನಂದಿನ ಕೆಲಸ ಅಗತ್ಯವಿರುವ ಕಲಾವಿದರು ಮತ್ತು ತಂತ್ರಜ್ಞರಿದ್ದಾರೆ. ಅವರಲ್ಲಿ ಅನೇಕರು ಇಎಂಐಗಳನ್ನು ಮರುಪಾವತಿಸುವುದು ಮತ್ತು ದಿನನಿತ್ಯದ ಖರ್ಚುಗಳನ್ನು ನಿರ್ವಹಿಸುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಲು ನನಗೆ ಕರೆ ಮಾಡುತ್ತಿದ್ದರು. ಅದಕ್ಕಾಗಿಯೇ ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳುತ್ತಾರೆ, ಸ್ಥಳಕ್ಕೆ ತೆರಳಿರುವ ಸಿಬ್ಬಂದಿ ಮತ್ತು ಹದಿನೈದು ದಿನಗಳ ಕಾಲ ಅಲ್ಲಿಯೇ ಇರುತ್ತಾರೆ.

 '14 ದಿನಗಳ ಚಿತ್ರೀಕರಣದ ನಂತರ, ಇಡೀ ಸಿಬ್ಬಂದಿಯನ್ನು ಎಲ್ಲರ ಸುರಕ್ಷತೆಗಾಗಿ ಪರೀಕ್ಷಿಸಲಾಗುತ್ತದೆ' ಎಂದು ಅವರು ಹೇಳಿದರು. 

ರಾಮ್‌ಜಿಗೆ, ಅನುಕೂಲವೆಂದರೆ ಅವರು ತಮ್ಮ ಎಲ್ಲಾ ಧಾರಾವಾಹಿಗಳನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲು ಪ್ರಾರಂಭಿಸಿದರು. ಹೀಗಾಗಿ ಅವರ ಧಾರಾವಾಹಿಗಳ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿವೆ. 'ನಾನು ಸಾಮಾನ್ಯವಾಗಿ ನನ್ನ ಧಾರಾವಾಹಿಗಳನ್ನು ಹೈದರಾಬಾದ್‌ನಲ್ಲಿ ಪ್ರಾರಂಭಿಸುತ್ತೇನೆ. ಮೊದಲ ಕೆಲವು ಕಂತುಗಳನ್ನು ಇಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು 100 ಸದಸ್ಯರ ತಂಡವನ್ನು ಶೂಟಿಂಗ್ ಸ್ಥಳಕ್ಕೆ ಕರೆದೊಯ್ದ ರಾಮ್‌ಜಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com