ರತ್ನನ್ ಪ್ರಪಂಚ ಚಿತ್ರಕ್ಕೆ ಪವರ್ ಸ್ಚಾರ್ ಪುನೀತ್ ಮೆಚ್ಚುಗೆ, ಟ್ವೀಟ್ ಮಾಡಿ ಹೇಳಿದ್ದು...

ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ  ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ  ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದರ ನಡುವೆ ಸ್ಯಾಂಡಲ್ ವುಡ್ ಗಣ್ಯರೂ ಕೂಡ ಓಟಿಟಿಯಲ್ಲೇ ಚಿತ್ರವನ್ನು ನೋಡಿ ತಮ್ಮ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಮುಖವಾಗಿ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರು, 'ರತ್ನನ್ ಪ್ರಪಂಚ ಸಿನೆಮಾವನ್ನು ನೋಡಿದೆ.  ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. ಧನಂಜಯ, ರೆಬಾ ಮೊನಿಕಾ, ಪ್ರಮೋದ್ ಮಂಜು, ಉಮಾಶ್ರೀ ಅವರು, ರವಿಶಂಕರ್, ಶ್ರುತಿ ಮೇಡಂ, ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.  ಅದ್ಭುತವಾದ ಸಂಭಾಷಣೆ, ಛಾಯಾಗ್ರಹಣ ಮತ್ತು ಸಂಗೀತವಿದೆ.  ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ರತ್ನನ್ ಪ್ರಪಂಚ ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ ಅವರೂ ಕೂಡ ಶ್ಲಾಘಿಸಿದ್ದಾರೆ.

ಇನ್ನು 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಧನಂಜಯ್​ ಅವರು ರತ್ನಾಕರನಾಗಿ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ನಟಿಸಿದ್ದಾರೆ. ಉಮಾಶ್ರೀ ಅವರು ಧನಂಜಯ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ದಯವಿಟ್ಟು ಗಮನಿಸಿ' ಸಿನಿಮಾದ ಮೂಲಕ ನಿರ್ದೇಶಕರಾದ ರೋಹಿತ್ ಪದಕಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಕಾರ್ತಿಕ್​ ಹಾಗೂ ಯೋಗಿ ಜಿ. ರಾಜ್​ ಅವರು ಚಿತ್ರವನ್ನು ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್​ಗೆ ನಾಯಕಿಯಾಗಿ ರೆಬಾ ಜಾನ್ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com