ಪ್ರತ್ಯಕ್ಷ ದೃಶ್ಯ
ಸಿನಿಮಾ ಸುದ್ದಿ
ಪುನೀತ್ ಮುಂದಿನ ವರ್ಷ ಆರಾಧನೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದಾಗ ಕುಸಿದು ಬಿದ್ದ ವೀಣಿ: ಅದರ ಸೂಚನೆ ಏನಾಗಿತ್ತು?
ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ಚಿತ್ರರಂಗದಲ್ಲಿ ಶೂನ್ಯ ಆವರಿಸಿದೆ. ಇದರ ಮಧ್ಯೆ ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.
ಬೆಂಗಳೂರು: ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ಚಿತ್ರರಂಗದಲ್ಲಿ ಶೂನ್ಯ ಆವರಿಸಿದೆ. ಇದರ ಮಧ್ಯೆ ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.
ಪುನೀತ್ ರಾಜಕುಮಾರ್ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಾವು ಮುಂದಿನ ಬಾರಿ ರಾಯರ ಆರಾಧನೆಗೆ ಬರುತ್ತೇನೆ ಎಂದು ಮಾತನಾಡುತ್ತಿರುವಾಗಲೇ ರಾಯರ ಮುಖವಾಡ ಅಲುಗಾಡಿತ್ತು ಮತ್ತು ಅದರ ಮುಂದಿಟ್ಟಿದ್ದ ವೀಣೆ ಕೆಳಗೆ ಬೀಳುತ್ತದೆ. ಈ ವಿಡಿಯೋ ಇದೀಗ ಪುನೀತ್ ಬಗ್ಗೆ ಅಂದೆ ಕೆಟ್ಟ ಸೂಚನೆ ಸಿಕ್ಕಿತ್ತಾ ಎನ್ನುವ ಮಾತುಗಳನ್ನು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ 29ರಂದು ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದರು. ಇಂದು ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ