ಡ್ರಗ್ಸ್ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರಿಲ್ಲ, ಕಿಶೋರ್ ಹೇಳಿಕೆಯಲ್ಲಷ್ಟೇ ಇದೆ: ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿಲ್ಲ. ಆದರೆ, ಕಿಶೋರ್ ಅಮನ್​ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ಅನುಶ್ರೀ
ಅನುಶ್ರೀ
Updated on

ಮಂಗಳೂರು: ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿಲ್ಲ. ಆದರೆ, ಕಿಶೋರ್ ಅಮನ್​ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಜ್​ಶೀಟ್​ನಲ್ಲಿ ಆರೋಪಗಳಿದ್ದರೆ ವಕೀಲರ ಮೂಲಕ ಕೋರ್ಟ್​ಗೆ ತಿಳಿಸಬಹುದು. ಆದರೆ, ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ. ಕಿಶೋರ್ ​ನನ್ನು ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಸಂಪೂರ್ಣ ತನಿಖೆ ಮಾಡಿ ಚಾರ್ಜ್​ಶೀಟ್​ ಸಲ್ಲಿಕೆ‌ ಮಾಡಿದ್ದೇವೆ ಎಂದರು.

ಅನುಶ್ರೀ
ಅನುಶ್ರೀ

ನಾನು ಮಂಗಳೂರು ಆಯುಕ್ತನಾಗಿ ಅಧಿಕಾರ ಸ್ವೀಕರಿಸಿ 8 ತಿಂಗಳಾಗಿದೆ ಅಷ್ಟೇ. 9 ತಿಂಗಳ‌ ಹಿಂದೆಯೇ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಈಗ ಏಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದರು.

6 ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಇದರಲ್ಲಿ ಐದು ಆರೋಪಿಗಳಿಗೆ ಜಾಮೀನು ಲಭಿಸಿದೆ. ಓರ್ವ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 2020ರ ಸೆಪ್ಟಂಬರ್​ 19ರಂದು ಡ್ರಗ್ಸ್​ ಪ್ರಕರಣ ದಾಖಲಾಗಿತ್ತು. ಡಿಸೆಂಬರ್​ನಲ್ಲೇ ಅಂತಿಮ ವರದಿ ಸಲ್ಲಿಸಿದ್ದೇವೆ ಎಂದರು.

ಅನುಶ್ರೀ
ಅನುಶ್ರೀ

ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ ಅಂಶಗಳು ನನ್ನ ಹೇಳಿಕೆಯಲ್ಲಎಂದಿರುವ ಪ್ರಕರಣದ ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಕುರಿತಂತೆ ಪ್ರತಿಕ್ರಿಯಿಸಿದ ಆಯುಕ್ತರು, ಚಾರ್ಜ್‌ಶೀಟ್‌ನಲ್ಲಿನ ಅಂಶಗಳನ್ನು ಓದಿ ಹೇಳಿಸಿ ನಂತರ ವ್ಯಕ್ತಿಯ ಸಹಿ ಪಡೆಯಲಾಗುತ್ತದೆ. ಪ್ರತಿಯೊಂದು ಪ್ರಕರಣದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದ್ದು, ಹೇಳಿಕೆ ಅವರದ್ದಲ್ಲ ಎಂದಾಗಿದ್ದರೆ, ಕಿಶೋರ್ ಶೆಟ್ಟಿ ಅಂದು ನ್ಯಾಯಾಲಯದಲ್ಲೇ ಹೇಳಬಹುದಿತ್ತು. ಆದರೆ, ಈಗ ಆ ವ್ಯಕ್ತಿ ತಾನು ಹೇಳಿಕೆ ನೀಡಿಲ್ಲ ಎಂಬುದು ತಪ್ಪು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com